ಲೋಕ ಕಲ್ಯಾಣಾರ್ಥ ಸಾಮೂಹಿಕ ಹೋಮ
ಹಾಸನ

ಲೋಕ ಕಲ್ಯಾಣಾರ್ಥ ಸಾಮೂಹಿಕ ಹೋಮ

September 30, 2018

ಹೊಳೆನರಸೀಪುರ:  ಶ್ರೀ ಗಣ ಪತಿ ಮಹೋತ್ಸವ ಸೇವಾ ಸಮಿತಿಯ 61ನೇ ವರ್ಷದ ಪೂಜಾ ಕಾರ್ಯಕ್ರಮದ ಅಂಗ ವಾಗಿ ಪಟ್ಟಣದಲ್ಲಿ ಶನಿವಾರ ಲೋಕ ಕಲ್ಯಾಣ ಕ್ಕಾಗಿ ಹಾಗೂ ಮಳೆ, ಬೆಳೆ ಸುಭಿಕ್ಷವಾಗಿ ರಲಿ ಎಂದು ಸಾಮೂಹಿಕ ಹೋಮ ಹವನ ನಡೆಸಲಾಯಿತು.

61 ವರ್ಷದ ಹಿಂದೆ ಮಾಜಿ ಶಾಸಕ ದಿವಂಗತ ವೈ.ವೀರಪ್ಪನವರ ನೇತೃತ್ವದಲ್ಲಿ ಶ್ರೀ ಗಣಪತಿ ಮಹೋತ್ಸವ ಸೇವಾ ಸಮಿತಿ ಯನ್ನು ಆರಂಭಿಸಲಾಗಿದ್ದು, 61ನೇ ವರ್ಷಾ ಚರಣೆಯನ್ನು ಅರ್ಥಪೂರ್ಣವಾಗಿ ಆಚರಿ ಸಲಾಯಿತು. ಕಾರ್ಯಕ್ರಮದ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಬೆಳಿಗ್ಗೆ ಗಣೇಶೋತ್ಸವದ ಮಂಟಪವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿ ಸಲಾಗಿತ್ತು. ದೇವಾಲಯದ ಮುಂಭಾಗ ರಂಗೋಲೆ ಹಾಗೂ ತಳಿರು ತೋರಣ ಗಳಿಂದ ಶೃಂಗರಿಸಲಾಗಿತ್ತು. ಆಸ್ಥಾನ ಮಂಟಪದಲ್ಲಿ ಗಣೇಶ ಮಂಡಲ ಮತ್ತು ನವಗ್ರಹ ಮಂಡಲವನ್ನು ಬಿಡಿಸಿ ಕಳಸ ಪ್ರತಿಷ್ಟ್ಟನೆ ಮಾಡಿ ಸಿದ್ದಪಡಿಸಲಾಗಿತ್ತು. ಸಮಿತಿಯ ಪದಾಧಿಕಾರಿಗಳು ಸಾರ್ವಜನಿ ಕರಿಗೆ ಸಂಕಲ್ಪ ಮಾಡಿಸಿದ ವೈ.ವಿ. ಚಂದ್ರ ಶೇಖರ್ ಮತ್ತು ಈಶ್ವರ್ ದಂಪತಿಗಳು ಹೋಮ ಕುಂಡಕ್ಕೆ ಪೂಜೆ ಸಲ್ಲಿಸಿದ ನಂತರ ಅರ್ಚಕ ರಾದ ರವೀಂದ್ರ ಭಟ್ ಮತ್ತು ತಂಡದವರು ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ. ಮತ್ತು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರ ನೇತೃತ್ವ ದಲ್ಲಿ ಜೆಡಿಎಸ್ ಮುಖಂಡ ಟಿ.ಶಿವಕುಮಾರ್ ಮಾರ್ಗದರ್ಶನದಲ್ಲಿ ಸಮಿತಿಯಿಂದ ಪ್ರತಿ ವರ್ಷ ಯಶಸ್ವಿಯಾಗಿ ಕಾರ್ಯಕ್ರಮ ನಡೆಸ ಲಾಗುತ್ತಿದೆ ಎಂದು ಸಮಿತಿಯ ಎ.ಆರ್.ರವಿ ಕುಮಾರ್ ತಿಳಿಸಿದರು. ಈ ವೇಳೆ ಗಣಪತಿ ಮಹೋತ್ಸವ ಸೇವಾ ಸಮಿತಿಯ ರೆಹ ಮಾನ್, ಎ.ಜಗನ್ನಾಥ್, ಮುರುಳಿಧರ ಗುಪ್ತ, ಗುರುರಾಜ್, ಪುಟ್ಟಸ್ವಾಮಪ್ಪ, ಸೂರನಹಳ್ಳಿ ಕೃಷ್ಣಪ್ಪ, ಲೋಕೇಶ್, ಯೋಗಾನರ ಸಿಂಹಯ್ಯ, ಗೋವಿಂದ, ಮಹೇಶ್, ಗೋಕುಲ್, ಸುದರ್ಶನ್, ಕುಮಾರಸ್ವಾಮಿ ಇದ್ದರು.

Translate »