ಡಾ.ರಾಜ್‍ಕುಮಾರ್ ಸಮಗ್ರ ಚರಿತ್ರೆ ಸಂಪುಟ ಲೋಕಾರ್ಪಣೆ
ಹಾಸನ

ಡಾ.ರಾಜ್‍ಕುಮಾರ್ ಸಮಗ್ರ ಚರಿತ್ರೆ ಸಂಪುಟ ಲೋಕಾರ್ಪಣೆ

September 30, 2018

ಹಾಸನ:  ದೊಡ್ಡಹುಲ್ಲೂರು ರುಕ್ಕೋಜಿ ಅವರ ರಚನೆಯ ಡಾ.ರಾಜ್ ಕುಮಾರ್ ಅವರ ಸಮಗ್ರ ಚರಿತ್ರೆ ಸಂಪುಟ ಗಳ 18ನೇ ಪುಸ್ತಕ ಲೋಕಾರ್ಪಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ರವಿನಾಕಲಗೂಡು ನೆರವೇರಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಜಿಲ್ಲಾ ರಾಜ್‍ಕುಮಾರ್ ಅಭಿಮಾನಿಗಳ ಸಂಘದ, ಜಿಲ್ಲಾ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಜಿಲ್ಲಾ ಪುನೀತ್ ರಾಜ್‍ಕುಮಾರ್ ಅಭಿಮಾನಿ ಸಂಘ, ಜಿಲ್ಲಾ ಉಪೇಂದ್ರ ಅಭಿಮಾನಿಗಳ ಸಂಘ, ಶ್ರೀವೀರಭದ್ರೇಶ್ವರ ಸ್ವಾಮಿ ಕಲಾ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
15 ವರ್ಷಗಳ ಪರಿಶ್ರಮದಿಂದ ರುಕ್ಕೋಜಿ ಅವರು ನಿರ್ಮಿಸಿರುವ ಡಾ.ರಾಜ್‍ಕುಮಾರ್ ಸಮಗ್ರ ಚರಿತ್ರೆಯನ್ನು 87ಲಕ್ಷ ರೂ.ಗಳಲ್ಲಿ ನಿರ್ಮಾಣ ಮಾಡಿದ್ದಾರೆ. ಏಕವ್ಯಕ್ತಿ ಸಾಧನೆ ಯಾಗಿದ್ದು, 2,148 ಪುಟ ಇರುವ ಪುಸ್ತಕವಾಗಿದೆ ಎಂದರು. ವರ ನಟ ಡಾ.ರಾಜ್ ಕುಮಾರ್ ಅವರ ಜೀವನ ಚರಿತ್ರೆ ಪುಸ್ತಕದಲ್ಲಿ ತಿಳಿಸಲಾಗಿದೆ. ಒಂದು ಪುಸ್ತಕದ ಬೆಲೆ 7,500 ರೂ.ಗಳಾಗಿದ್ದು, ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಪುಸ್ತಕವನ್ನು ಮಾರಾಟ ಮಾಡಿಕೊಡುವ ವಿಶ್ವಾಸ ವ್ಯಕ್ತಪಡಿಸಿದರು.

ನಟ ಟೆನ್ನಿಸ್ ಕೃಷ್ಣ ಮಾತನಾಡಿ, ಡಾ.ರಾಜ್ ಕುಮಾರ್ ಅವರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರು, ಅಭಿಮಾನಿಗಳಿಂದಲೇ ಈ ಚಿತ್ರರಂಗ ಉಳಿದಿರುವುದು, ನಮಗೆ ಅಭಿ ಮಾನಿಗಳೇ ದೇವರು. ನಾಟಕದ ಬಳಿಕ ಸಿನಿಮಾ ಜನ್ಮತಾಳಿದೆ. ಉತ್ತಮ ಸಿನಿಮಾಗಳನ್ನು ಪ್ರೇಕ್ಷ ಕರು ನೋಡಿ ಕಲಾವಿದರ ಪ್ರೋತ್ಸಾಹಿ¸ ಬೇಕು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ, ಶ್ರೀರಾಮ ಪಟ್ಟಾಭಿಷೇಕ ಎಂಬ ಪೌರಾಣಿಕ ನಾಟಕ ವನ್ನು ಕುಣಿಗಲ್ ತಾಲೂಕು ಕಲಾವಿದರ ಕ್ಷೇಮಾ ಭಿವೃದ್ಧಿ ಸಂಘದಿಂದ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ.ರಾಜ್‍ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಪ್ರಶಾಂತ್, ಹಾಸನ್ ರಮೇಶ್, ಶ್ರೀವೀರಭದ್ರೇಶ್ವರ ಸ್ವಾಮಿ ಕಲಾ ಸಂಘದ ಯಲಗುಂದ ಶಾಂತಕುಮಾರ್, ರಂಗ ಸಂಘಟಕ ಹಾಗೂ ಪರಿಸರವಾದಿ ಹೆಚ್. ಆರ್.ಸ್ವಾಮಿ, ಜಿಲ್ಲಾ ಉಪೇಂದ್ರ ಅಭಿಮಾನಿ ಗಳ ಸಂಘದ ಅಧ್ಯಕ್ಷ ಮಂಜುನಾಥ್, ಚಲನ ಚಿತ್ರ ನಿರ್ದೇಶಕ ಹಾಸನ್ ನಾಗೇಶ್, ಮಾನವ ಹಕ್ಕುಗಳು ಅಧ್ಯಕ್ಷ ಏಜಾಜ್ ಪಾಷ, ನವ ಕರ್ನಾ ಟಕ ಯುವಶಕ್ತಿ ರಾಜ್ಯ ಸಂಘಟಕ ಡಿ.ಶಂಕರ ಗೌಡ, ಕಸಾಪ ತಾಲೂಕು ಅಧ್ಯಕ್ಷ ಜಿ.ಓ. ಮಹಾಂ ತಪ್ಪ, ಜಿಲ್ಲಾ ಪುನೀತ್‍ರಾಜಕುಮಾರ್ ಅಭಿ ಮಾನಿ ಸಂಘದ ಅಧ್ಯಕ್ಷ ಎಸ್.ವಿ.ಶ್ರೀನಿವಾಸ್ ಮೂರ್ತಿ, ಮಹೇಶ್ ಬಾಬು, ತಿಂಡಿಗಾಡಿ ವರ್ತ ಕರ ಸಂಘದ ಅಧ್ಯಕ್ಷ ಮಂಜು, ಇತರರಿದ್ದರು.

Translate »