ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಲು ಸಲಹೆ
ಹಾಸನ

ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಲು ಸಲಹೆ

September 30, 2018

ಅರಸೀಕೆರೆ:  ಮಹಿಳೆಯರು ಅಪೌಷ್ಟಿ ಕತೆಯಿಂದ ಬಳಲಬಾರದು ಎಂದು ಸರ್ಕಾ ರವು ಹಲವು ಯೋಜನೆಗಳ ಮೂಲಕ ಪೌಷ್ಟಿಕ ಆಹಾರವನ್ನು ನೀಡುತ್ತಿದೆ. ಗರ್ಭಿ ಣಿಯರು ಕಡ್ಡಾಯವಾಗಿ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪದ್ಮ ಹೇಳಿದರು.

ತಾಲೂಕಿನ ಹಿರಿಯಾಳು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಗಿವಾಳು ಗ್ರಾಪಂ ಹಾಗೂ ಆರೋಗ್ಯ ಇಲಾಖೆಯಿಂದ ವಿಶ್ವ ಪೌಷ್ಟಿಕ ಸಪ್ತಾಹ, ಮಾತೃವಂದನಾ ಹಾಗೂ ಗರ್ಭಿಣಿಯರಿಗೆ ಸೀಮಂತನÀ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗರ್ಭಿಣಿಯರು ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡಲು ಪೌಷ್ಟಿಕ ಆಹಾರ ಅತ್ಯಗತ್ಯವಾಗಿದೆ. ಆದ್ದರಿಂದಲೇ ಕಿಶೋರಾವಸ್ಥೆಯಿಂದಲೇ ಸ್ಥಳೀಯವಾಗಿ ದೊರೆಯುವ ಸೊಪ್ಪು, ತರಕಾರಿ, ಕಾಳು, ಕಾಯಿಪಲ್ಯ, ಹಾಲು ಉತ್ಪನ್ನಗಳು, ಹಾಗೂ ಮೊಟ್ಟೆ, ಮೀನು, ಮಾಂಸ ಎಣ್ಣೆ ಕಾಳುಗಳನ್ನು ಉಪಯೋಗಿಸಿ ಶಕ್ತಿಯುತ ಬೆಳವಣಿಗೆ ಯೊಂದಿಗೆ ರಕ್ಷಣಾತ್ಮಕ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ ಮಾತನಾಡಿ, ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದರಿಂದ ಮಕ್ಕಳು ಉತ್ತಮ ಆರೋಗ್ಯ ಹೊಂದುತ್ತಾರೆ ಎಂದು ತಿಳಿಸಿದರು.

ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿ ಕಾರಿ ಲಲಿತಮ್ಮ ಮಾತನಾಡಿ, ಗರ್ಭಿಣಿ ಯರಿಗೆ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಮಗು ಹುಟ್ಟಿದ ನಂತರ ಮಗುವಿಗೆ ಎದೆ ಹಾಲು ಣಿಸುವುದರ ಬಗ್ಗೆ ಮತ್ತು ಗರ್ಭಾವಸ್ಥೆ ಯಲ್ಲಿರುವಾಗ ಆರೋಗ್ಯ ಇಲಾಖೆ ಯಿಂದ ದೊರೆಯುವ ಕಬ್ಬಿಣಾಂಶದ ಮಾತ್ರೆ ಮತ್ತು ಪೆÇೀಲಿಕ್ ಆಮ್ಲ ಮತ್ತು ಕ್ಯಾಲ್ಸಿಯಂ ಮಾತ್ರೆಗಳ ಸೇವನೆ ಕುರಿತು ತಿಳಿಸಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಯಮ್ಮ ಮಾತನಾಡಿದರು. ಈ ವೇಳೆ 15 ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಾಗಿವಾಳು ಗ್ರಾಪಂ ಅಧ್ಯಕ್ಷ ಈಶ್ವರಪ್ಪ, ಉಪಾಧ್ಯಕ್ಷೆ ಪಾರ್ವ ತಮ್ಮ, ತಾಲೂಕು ಹಿರಿಯ ಪುರುಷ ಸಹಾಯಕ ಜಬೀರ್ ಪಾಷ, ಅಂಗನ ವಾಡಿ ಕಾರ್ಯಕರ್ತೆಯರಾದ ಶಾಂತಮ್ಮ, ಚಿಕ್ಕಮ್ಮ, ಮೇಲ್ವಿಚಾರಕಿ ಉಷಾರಾಣಿ ಇದ್ದರು.

Translate »