ಬೇಲೂರು ಪುರಸಭೆ ವಿಶೇಷ ಸಭೆ: ಸಭೆ ಬಹಿಷ್ಕರಿಸಿ ಹೊರ ನಡೆದ ಕಾಂಗ್ರೆಸ್-ಜೆಡಿಎಸ್ ಸದಸ್ಯರು
ಹಾಸನ

ಬೇಲೂರು ಪುರಸಭೆ ವಿಶೇಷ ಸಭೆ: ಸಭೆ ಬಹಿಷ್ಕರಿಸಿ ಹೊರ ನಡೆದ ಕಾಂಗ್ರೆಸ್-ಜೆಡಿಎಸ್ ಸದಸ್ಯರು

September 30, 2018
  • ಅಧ್ಯಕ್ಷರು, ಅಧಿಕಾರಿಗಳ ವಿರುದ್ಧ ಆಕ್ರೋಶ
  • ಪುರಸಭೆ ಭ್ರಷ್ಟಾಚಾರಕ್ಕೆ ಅಧಿಕಾರಿಗಳೇ ಕಾರಣ: ಆರೋಪ

ಬೇಲೂರು: ಪುರಸಭೆ ವ್ಯಾಪ್ತಿ ಯಲ್ಲಿ ಜನಪರವಾದ ಕೆಲಸಗಳು ನಡೆಯು ತ್ತಿಲ್ಲ. ಏಕಪಕ್ಷೀಯವಾಗಿ ಎಲ್ಲವೂ ನಡೆಯು ತ್ತಿದೆ ಎಂದು ಆರೋಪಿಸಿ ಪುರಸಭೆ ವಿಶೇಷ ಸಭೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಬಹಿಷ್ಕರಿಸಿದ ಘಟನೆ ನಡೆಯಿತು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಶನಿ ವಾರ ಅಧ್ಯಕ್ಷೆ ಭಾರತಿ ಅರುಣ್‍ಕುಮಾರ್ ಅಧÀ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ 12 ಸದಸ್ಯರು ಅಧಿಕಾರಿಗಳು ಹಾಗೂ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಉಪಾ ಧ್ಯಕ್ಷ ಅರುಣ್‍ಕುಮಾರ್, ಸದಸ್ಯರಾದ ಜಿ.ಶಾಂತ ಕುಮಾರ್, ಬಿ.ಗಿರೀಶ್, ಚನ್ನಕೇಶವ, ರವಿ ಅಣ್ಣೇಗೌಡ, ಬಿ.ಎಲ್.ಧರ್ಮೇಗೌಡ ಅವರು ಹೊರ ನಡೆದರು.

ಈ ವೇಳೆ ಸದಸ್ಯರ ಮನವೊಲಿಸಲು ತೆರ ಳಿದ ಪುರಸಭೆÀ ಮುಖ್ಯಾಧಿಕಾರಿ ಮಂಜು ನಾಥ್ ಅವರನ್ನು ತೀವ್ರ ತರಾಟೆ ತೆಗೆದು ಕೊಂಡ ಸದಸ್ಯರು, ಅಧಿಕಾರಿಗಳ ಧೋರಣೆ ಯಿಂದ ಸಾರ್ವಜನಿಕರ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಸದಸ್ಯರ ಮಾತನ್ನು ಅಧಿಕಾರಿ ಗಳು ಕೇಳುತ್ತಿಲ್ಲ. ಈಗಿರುವಾಗ ವಿಶೇಷ ಸಭೆಯ ಕರೆಯುವ ಔಚಿತ್ಯವಾದರೂ ಏನಿತ್ತು? ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮತ್ತು ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಸದಸ್ಯ ಜುಬೇರ್‍ಅಹ್ಮದ್ ಮಾತನಾಡಿ, ಪುರಸಭೆಯಿಂದ ಬಸ್ ನಿಲ್ದಾಣದ ಮುಂ ಭಾಗದಲ್ಲಿ ನಿರ್ಮಿಸಿರುವ 23 ಅಂಗಡಿ ಮಳಿಗೆ ಗಳ ಬಾಡಿಗೆ ವಿಲೇವಾರಿಯಲ್ಲಿ 10 ಲಕ್ಷ ರೂ. ಅವ್ಯವಹಾರ ನಡೆದಿದೆ. ಈ ಅಂಗಡಿ ಮಳಿಗೆಗಳ ಬಾಡಿಗೆ ವಿಚಾರದ ಒಳ ಒಪ್ಪಂದ ದಲ್ಲಿ ಅಧ್ಯಕ್ಷರು, ಇಬ್ಬರು ಸದಸ್ಯರು, ಮುಖ್ಯಾಧಿ ಕಾರಿಗಳು, ಒಬ್ಬ ಮಧ್ಯವರ್ತಿ ಹಾಗೂ ಪುರ ಸಭೆಯ ನೌಕರರು ಪಾಲ್ಗೊಂಡಿದ್ದಾರೆ. ಸದಸ್ಯರೆಲ್ಲರೂ ತಲಾ 50 ಸಾವಿರ ರೂ. ಹಂಚಿಕೊಂಡಿದ್ದಾರೆ ಎಂಬ ಸುದ್ದಿ ಹರಡಿದೆ. ಈ ಬಗ್ಗೆ ಮಾಹಿತಿ ಕೇಳಿದರೆ ಮಾನ ನಷ್ಟ ಮೊಕದ್ದಮೆ ಹಾಕುತ್ತೇನೆಂದು ಅಧ್ಯಕ್ಷರು ಹೇಳುತ್ತಾರೆ ಎಂದು ದೂರಿದರು.

ಸದಸ್ಯ ಜಿ.ಶಾಂತಕುಮಾರ್ ಮಾತನಾಡಿ, ವಿಶೇಷ ಸಭೆಗೆ ಪತ್ರಕರ್ತರನ್ನು ಆಹ್ವಾನಿ ಸದೆ ಇರುವುದು ಸರಿಯಲ್ಲ. ಖಾತೆದಾರರು ನಕಲಿ ಖಾತೆ ಪಡೆಯಲು ಹಾಗೂ ಅವರಿಗೆ ಎನ್‍ಒಸಿ ನೀಡಲು ತಿಂಗಳು ಕಾಲ ಕಾಯ ಬೇಕು. ಅಕ್ರಮ ಕಟ್ಟಡಗಳ ನಿರ್ಮಾಣ ಆಗು ತ್ತಿದ್ದರೆ ಕ್ರಮ ಕೈಗೊಳ್ಳಲಿ. ಕೇವಲ ನೋಟೀಸ್ ನೀಡಿ ನಂತರ ಸುಮ್ಮನಾಗಿದ್ದಾರೆ ಎಂದರು.

ಎಸ್‍ಎಫ್‍ಸಿಯ 3 ಕೋಟಿ ರೂ. ಅನು ದಾನ ಬಂದಿದ್ದರೂ ಟೆಂಡರ್ ಕರೆದಿಲ್ಲ. ಇಲ್ಲಿ ಬಡವರ ಕೆಲಸ ಆಗುತ್ತಿಲ್ಲ. ಸಭೆಗೆ ಬಂದು ಕೋರಂ ತೋರಿಸಿ ಬರುವುದಕ್ಕೆ ಸಭೆಗೆ ಏಕೆ ಹೋಗಬೇಕೆಂದು ಬಹಿಷ್ಕರಿಸಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಅರುಣ್‍ಕುಮಾರ್ ಮಾತ ನಾಡಿ, ಪುರಸಭೆಯಲ್ಲಿ ಸಿಂಗಲ್ ವಿಂಡೋ ಸಿಸ್ಟಂ ಯೋಜನೆಗೆ ಬೆಲೆ ಇಲ್ಲದಂತಾಗಿದೆ. ಸÀರ್ಕಾರದ ಸೌಲಭ್ಯ ಸಮರ್ಪಕ ಬಳಕೆ ಆಗು ತ್ತಿಲ್ಲ. ದಾಖಲೆ ಪಡೆಯಲು ವಾರ, ತಿಂಗಳು ಗಟ್ಟಲೆ ಕಾಯಬೇಕಾದ ಸ್ಥಿತಿಯಿದೆ. ಪುರ ಸಭೆಯಲ್ಲಿನ ಭ್ರಷ್ಟಾಚಾರಕ್ಕೆ ಅಧಿಕಾರಿ ನೌಕ ರರೆ ಮುಖ್ಯಕಾರಣ ಎಂದು ಆರೋಪಿಸಿದರು.

ಸದಸ್ಯ ಬಿ.ಎಲ್.ಧರ್ಮೇಗೌಡ ಮಾತ ನಾಡಿ, ಘಟನೋತ್ತರ ಮಂಜೂರಿಯ 7ಕೋಟಿ ರೂ. ಕಾಮಗಾರಿ ನಡೆಯುತ್ತಿದ್ದು ನನ್ನ ವಾರ್ಡಿನಲ್ಲಿ ಕೆಲಸ ಆಗುತ್ತಿಲ್ಲ. ಬ್ಲೀಚಿ ಂಗ್ ಪೌಡರ್ ಅವ್ಯವಹಾರ ನಡೆದಿದೆ. ಚೆÀಕ್ ಡ್ರಾ ಆಗಿದೆ. ಸಂಬಂಧಪಟ್ಟ ನೌಕರ ರನ್ನು ಕೇಳಿದರೆ, ನಾನು ಪೌಡರ್ ಅನ್ನು ರಿಸೀವ್ ಮಾಡಿಕೊಂಡಿಲ್ಲ ಎನ್ನುತ್ತಾರೆ. ಈ ವಿಚಾರ ದಲ್ಲಿ ಅಧಿಕಾರಿಗಳು ಹೆಚ್ಚು ಅಕ್ರಮ ನಡೆಸಿದ್ದಾರೆ ಎಂದರು.

ಸದಸ್ಯ ಸತೀಶ್ ಮಾತನಾಡಿ, ಅಧಿಕಾರಿ, ನೌಕರರು ಮಾತು ಕೇಳದಂತಾಗಿದ್ದಾರೆ. ಅಕ್ರಮ ದ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳ ಬೇಕಿದೆ ಎಂದು ಆಗ್ರಹಿಸಿದರು.ಪುರಸಭೆಯಲ್ಲಿ ಯಾವುದೇ ಫೈಲ್ ಮುಂದೆ ಹೋಗಲೂ ಅಧ್ಯಕ್ಷರು ಹಾಗೂ ಮುಖ್ಯಾಧಿ ಕಾರಿ ನಂತರ ಮಧ್ಯವರ್ತಿ ಬಂದ ನಂತರ ಕಡತ ಗಳು ಮುಂದಿನ ಟೇಬಲ್‍ಗೆ ಹೋಗುತ್ತದೆ ಎಂದು ಚನ್ನಕೇಶವ ಹಾಗೂ ರವಿಅಣ್ಣೇ ಗೌಡ ಆರೋಪಿಸಿದರು.

ಸ್ಥಳೀಯ ಸಂಸ್ಥೆಯಾದ ಪುರಸಭೆಯಲ್ಲಿ ಜನ ಸಾಮಾನ್ಯರಿಗೆ ಸೌಲಭ್ಯ ದೊರೆಯುತ್ತಿಲ್ಲ. ಒಬ್ಬರ ಸ್ವತ್ತಾಗಿದೆ. ಜನರಿಗೆ ಅನುಕೂಲ ಮಾಡಿಕೊಡ ದಿದ್ದರೆ ನಾವೇಕೆ ಇರಬೇಕು ಎಂದು ಸದಸ್ಯ ಬಿ.ಗಿರೀಶ್ ಹಾಗೂ ಮಂಜುನಾಥ್ ಪ್ರಶ್ನಿಸಿ ದರು. ಈ ವೇಳೆ ಸದಸ್ಯರಾದ ಮಂಜುನಾಥ್, ಸತೀಶ್, ಅಕ್ರಮ್‍ಪಾಷ, ಗಾಯಿತ್ರಿ ಇದ್ದರು.

Translate »