ಯುವಜನರು ಗ್ರಾಮೀಣ ಕಲೆ ಅಳವಡಿಸಿಕೊಳ್ಳಲು ಸಲಹೆ
ಹಾಸನ

ಯುವಜನರು ಗ್ರಾಮೀಣ ಕಲೆ ಅಳವಡಿಸಿಕೊಳ್ಳಲು ಸಲಹೆ

December 5, 2018

ಅರಸೀಕೆರೆ:  ಯುವಜನರು ಗ್ರಾಮೀಣ ಸೊಗಡಿನ ಕಲೆಗಳನ್ನು ಜೀವನ ದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೈತ್ರಿಕಾನ್ವೆಂಟ್‍ನ ಕಾರ್ಯದರ್ಶಿ ಧರ್ಮ ರಾಜ ಕಡಗ ಸಲಹೆ ನೀಡಿದರು.ತಾಲೂಕಿನ ಗಂಡಸಿ ಹ್ಯಾಂಡ್‍ಪೋಸ್ಟ್ ಬಳಿಯಿರುವ ಮೈತ್ರಿಕಾನ್ವೆಂಟ್‍ನಲ್ಲಿ ನಡೆದ ಗ್ರಾಮೀಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮಿಣ ಕಲೆ ಮತ್ತು ಗುಡಿ ಕೈಗಾರಿಕೆಗಳನ್ನು ಹೆಚ್ಚು ಜೀವಂತಗೊಳಿಸಿದ ಪರಿಣಾಮ ಬ್ರಿಟಿಷರ ಗುಲಾಮಗಿರಿಯಿಂದ ಭಾರತ ಮುಕ್ತವಾಗಿ ಸಲು ಪ್ರೇರಣೆಯಾಯಿತು. ಇಂದಿನ ಯುವ ಪೀಳಿಗೆ ಈ ಗ್ರಾಮೀಣ ಕಲೆಗಳನ್ನು ಜೀವನ ದಲ್ಲಿ ಅಳವಡಿಸಿಕೊಂಡರೆ ಭಾರತವನ್ನು ವಿಶ್ವದ ದೈತ್ಯ ಉದ್ದಿಮೆಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನೋಡಬಹುದು ಎಂದು ತಿಳಿಸಿದರು.

ನಶಿಸಿ ಹೋಗುತ್ತಿರುವ ಗ್ರಾಮೀಣ ಸೊಬಗು ಹಾಗೂ ಸಂಸ್ಕøತಿಯನ್ನು ಉಳಿಸಿ, ಬೆಳೆಸಬೇಕಾದ ಹೊಣೆಗಾರಿಕೆ ಯುವ ಜನತೆ ಮೇಲಿದೆ. ಗ್ರಾಮೀಣ ಪ್ರದೇಶದ ಜೀವನ ಶೈಲಿ, ಆಹಾರ ಪದ್ಧತಿ, ಗ್ರಾಮೀಣ ಕಲೆ ಮತ್ತು ಕ್ರೀಡೆಗಳನ್ನು ಸೇರಿದಂತೆ ಗುಡಿ ಕೈಗಾರಿಕೆಗಳಂತಹ ಉದ್ಯಮವನ್ನು ಅರಿಯುವುದು ಅವಶ್ಯಕವಾಗಿದೆ.

ಇಂದು ವಿದೇಶ ನಿರ್ಮಿತ ಅಥವಾ ತಯಾರಾದ ಸಾಮಾಗ್ರಿಗಳ ಮೇಲೆ ವ್ಯಾಮೋಹ ಹೆಚ್ಚಾಗುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಸ್ವದೇಶಿ ವಸ್ತುಗಳೇ ನಮ್ಮ ಸಂಸ್ಕøತಿ ಮತ್ತು ದೇಶವನ್ನು ಉಳಿ ಸುತ್ತವೆ. ಮಕ್ಕಳಿಗೆ ಮತ್ತು ಪೋಷಕರಿಗೆ ಪರಿಚಯಿಸಲು ‘ಗ್ರಾಮೀಣ ಆಹಾರ ಮೇಳ’ ಮತ್ತು ಪೋಷಕರಿಗೆ ‘ಗ್ರಾಮೀಣ ಕ್ರೀಡೆ’ಗಳನ್ನು ಆಯೋಜಿಸ ಲಾಗಿದೆ ಎಂದರು.

ಶಿಕ್ಷಣ ಕೇವಲ ಪುಸ್ತಕದ ಕಲಿಕೆಗೆ ಮಾತ್ರ ಸೀಮಿತವಾಗದೇ, ಕಲಾತ್ಮಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳೂ ಶಿಕ್ಷಣದ ನಿರಂತರ ಭಾಗವಾಗಬೇಕು. ವಿದ್ಯಾರ್ಥಿ ಗಳಿಗೆ ಕೇವಲ ಪಾಠ ಪ್ರವಚನವಲ್ಲದೇ ಸಮಾಜದ ವಿವಿಧ ಸ್ತರಗಳ ಪರಿಚಯ ವಿರಬೇಕೆಂಬ ಉದ್ದೇಶದಿಂದ ಈ ಕಾರ್ಯ ಕ್ರಮ ಆಯೋಜಿಸಲಾಗಿದೆ. ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸಲು ಶಿಕ್ಷಕರ ಜೊತೆಗೆ ಪೋಷಕರ ಸಹಾಕಾರವೂ ಮುಖ್ಯ. ಈ ನಿಟ್ಟಿನಲ್ಲಿ ಪೋಷಕರನ್ನು ಶಿಕ್ಷಣ ವ್ಯವಸ್ಥೆಯ ಜೊತೆಗೆ ಸೇರಿಸಲು ಈ ರೀತಿಯ ಕಾರ್ಯಕ್ರಮಗಳು ನಮ್ಮ ಸಂಸ್ಥೆ ಆಯೋಜಿಸಿದೆ ಎಂದು ತಿಳಿಸಿದರು.

ಶಿಕ್ಷಕಿ ಸೌಮ್ಯ ಮಾತನಾಡಿ, ನೂರಾರು ವಿವಿಧ ಬಗೆಯ ಗ್ರಾಮೀಣ ಖಾದ್ಯಗಳನ್ನು ಆಹಾರ ಮೇಳದಲ್ಲಿ ಪ್ರದರ್ಶಿಸಲಾಗಿದೆ. ಅದನ್ನು ಮಕ್ಕಳ ಮೂಲಕವೇ ಮಾರಾಟ ಮಾಡಿಸಲಾಗಿದೆ. ಅಳಿವಿನಂಚಿನಲ್ಲಿರುವ ಕ್ರೀಡೆಗಳಾದ ಹಗ್ಗ ಜಗ್ಗಾಟ, ಮಡಿಕೆ ಒಡೆ ಯುವುದು, ಕೆರೆ-ದಡ ಆಟಗಳ ಜೊತೆಗೆ ದೇಸಿ ಆಟವಾದ ಕಬ್ಬಡ್ಡಿಯನ್ನು ಪೋಷಕ ರಿಗೆ ಆಡಿಸುವುದರ ಮೂಲಕ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗಿದೆ. ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಪ್ರದೇಶದ ಗುಡಿ ಕೈಗಾರಿಕೆಗಳನ್ನು ಈ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆ ಯಾಗಿ ಪ್ರದರ್ಶಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿ ಗಳು, ಪೋಷಕರು ಉಪಸ್ಥಿತರಿದ್ದರು.

Translate »