ಗಾಂಧೀಜಿ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು
ಹಾಸನ

ಗಾಂಧೀಜಿ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು

November 29, 2018

ಅರಸೀಕೆರೆ: ಮಹಾತ್ಮ ಗಾಂಧಿ ಅವರ ಜೀವನ ಚರಿತ್ರೆಯನ್ನು ಕಾಲೇಜು ಮಟ್ಟದ ವಿದ್ಯಾರ್ಥಿಗಳು ಆಳವಾಗಿ ಆಧ್ಯ ಯನ ಮಾಡಬೇಕು. ಆಗ ಮಾತ್ರ ಗಾಂಧೀಜಿ ಯವರನ್ನು ಆರ್ಥ ಮಾಡಿಕೊಳ್ಳಲು ಸಾಧ್ಯ ವಾಗುತ್ತದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ಡಾ.ವೂಡೇ. ಪಿ.ಕೃಷ್ಣ ಹೇಳಿದರು.

ನಗರದ ಹೊರವಲಯದಲ್ಲಿರುವ ಕಸ್ತೂರಬಾ ಗಾಂಧಿ ಆಶ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಯು ಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ 42 ನೇ ಅಂತರ ಕಾಲೇಜು ನಾಯಕತ್ವದ ಶಿಬಿರ ಮತ್ತು ಗಾಂಧಿ ತತ್ವ ಪ್ರಣೀತ ಯುವಜನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಕಸ್ತೂರಬಾ ಗಾಂಧಿ, ಮಹಾತ್ಮ ಗಾಂಧಿ, ಯಶೋಧರ ದಾಸಪ್ಪ ಸೇರಿದಂತೆ ಇನ್ನಿತರ ಮಹನೀಯರು ಇರುವ ಒಂದು ಅಗಾಧವಾದ ಶಕ್ತಿ ಕೇಂದ್ರವಾಗಿದೆ ಎಂದರು. ಧರ್ಮದ ನೆಲಗಟ್ಟಿನಲ್ಲಿ ಆಹಿಂಸಾ ಸಮಾಜ ವನ್ನು ಕಟ್ಟುವ ಕನಸನ್ನು ಗಾಂಧೀಜಿ ಕಂಡಿದ್ದರು. ಅಂದಿನ ಕಾಲದ ಘಟ್ಟದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಮಾತ್ರ ಹೋರಾಟ ವಾಗಿರಲಿಲ್ಲ. ಅದರೊಂದಿಗೆ ಮದ್ಯಪಾನ ವಿರೋಧಿ ಚಳುವಳಿಯೂ ಒಂದಾಗಿತ್ತು. ಭಾರತದಂತಹ ದೇಶದಲ್ಲಿರುವ ನೂರಾರು ಧರ್ಮಗಳು, ಜಾತಿಗಳು, ಭಾಷೆಗಳು, ಸಮು ದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟಾಚಾರ ಮುಕ್ತ ಸಮಾಜ, ಸತ್ಯ, ಪ್ರೀತಿ, ನೆಲೆಗಟ್ಟಿನಲ್ಲಿ ನಿರ್ಮಾಣ ಮಾಡಲು ಹೊರಟಿದ್ದರು. ವೈವಿಧ್ಯತೆಯಲ್ಲಿ ಏಕತೆ ಕನಸನ್ನು ಕಂಡ ಗಾಂಧೀಜಿ ಅದಕ್ಕೆ ತಕ್ಕನಾಗಿ ಪ್ರಯತ್ನವನ್ನು ಮಾಡಿ ಇಂದು ಅಜರಾಮರರಾಗಿದ್ದಾರೆ.

ಶಿಬಿರದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ 150 ಕಾಲೇಜು ಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಏಳು ದಿನಗಳ ಕಾಲ ನಡೆಯುವ ಶಿಬಿರ ದಲ್ಲಿ ಗಾಂಧೀಜಿಯವರ ಬಗ್ಗೆ ಆಳವಾಗಿ ಅರಿತು ತಮ್ಮ ಜೀವನದಲ್ಲಿ ಆಳವಡಿಸಿ ಕೊಳ್ಳಬೇಕು, ನಿಮ್ಮಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಈ ಶಿಬಿರದಲ್ಲಿ ಆಗಮಿಸಿರುವ ವಿವಿಧ ಉಪನ್ಯಾಸಕರ ಬಳಿ ಉತ್ತರವನ್ನು ಕಂಡುಕೊಂಡು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.

ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯವು ದೂರದೃಷ್ಟಿಯನ್ನು ಇಟ್ಟುಕೊಂಡು ಇಂತಹ ಬೃಹತ್ ಶಿಬಿರಗಳಿಗೆ ನಿಮ್ಮನ್ನು ಕಳುಹಿಸಿಕೊಟ್ಟಿದೆ. ಗಾಂಧೀಜಿಯವರ ಕನಸಿನ ಭಾರತ ಹೇಗಿತ್ತು ಎಂದರೆ ಭಾರತ ವನ್ನು ವಿಶ್ವವೇ ಗುರು ಎಂದು ಒಪ್ಪಿಕೊಳ್ಳ ಬೇಕು ಎಂಬ ತುಡಿತವಿತ್ತು. ಅದರಂತೆ ಇಂದೂ ಕೂಡ ವಿಶ್ವದಲ್ಲಿ ಅನೇಕ ದೇಶ ಗಳು ಗಾಂಧೀಜಿಯವರ ತತ್ವ ಆದರ್ಶ ಗಳನ್ನು ಸ್ವಾಗತಿಸುತ್ತಿವೆ ಮತ್ತು ಗೌರವಿಸು ತ್ತಿವೆ. ಬುದ್ಧನಿಂದ ಗಾಂಧೀಜಿವರೆಗೆ ಬಂದಂ ತಹ ಬಹುತ್ವದ ಚಿಂತನೆಯಿಂದ ಪರಸ್ಪರ ಸೌರ್ಹಾರ್ದತೆಯಿಂದ ಬದುಕುವುದನ್ನು ನಾವು ಕಾಣಬಹುದು. ಮನುಷ್ಯ ಹುಟ್ಟಿ ದಾಗಿನಿಂದ ವಿಶ್ವಮಾನವನಾಗುತ್ತಾನೆ. ಆದರೆ ಬೆಳೆಯುತ್ತಾ ಹೋದಂತೆ ಅಲ್ಪ ಮಾನವನಾಗುತ್ತಾನೆ ಎಂದರು.

ಕಾರ್ಯಕ್ರಮದಲ್ಲಿ ಗಾಂಧಿ ಶಾಂತಿ ಪ್ರತಿ ಷ್ಠಾನ ಸದಸ್ಯ ವೀರಭದ್ರಯ್ಯ, ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ, ಎನ್.ಎಸ್.ಎಸ್ ಪ್ರೌಢಶಾಲಾ ವಿಭಾಗದ ರಾಜ್ಯ ಅಧಿಕಾರಿ ಪೂರ್ಣಿಮಾ ಜೋಗಿ ವಿಶೇಷ ಉಪನ್ಯಾಸ ನೀಡಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಉಪಾಧ್ಯಕ್ಷ ಪ್ರೋ.ಶಿವರಾಜು, ಮೈಸೂರು ವಿಶ್ವವಿದ್ಯಾನಿಲಯ ಕಾರ್ಯ ಕ್ರಮ ಸಂಯೋಜಕ ಡಾ.ಬಿ.ಚಂದ್ರಶೇಖರ, ಶಿಬಿರಾರ್ಥಿಗಳಾದ ಡಾ.ಕಿರಣ್ ಕುಮಾರ್, ಡಾ.ನಿಂಗರಾಜ್, ಡಾ.ಭಾಸ್ಕರ್, ಕೆಂಪಮ್ಮ, ಸಿದ್ದಪ್ಪ, ರಮೇಶ್ ಬಾಬು, ನಗರಸಭೆ ಮಾಜಿ ಅಧ್ಯಕ್ಷ ಮನುಕುಮಾರ್ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »