ಹೆಚ್.ಎಸ್. ಪ್ರಕಾಶ್ ಅಂತಿಮ ದರ್ಶನ ಪಡೆದ ಸಿಎಂ
ಹಾಸನ

ಹೆಚ್.ಎಸ್. ಪ್ರಕಾಶ್ ಅಂತಿಮ ದರ್ಶನ ಪಡೆದ ಸಿಎಂ

November 29, 2018

ಹಾಸನ: ನಗರದ ರಿಂಗ್ ರಸ್ತೆಯ ಲ್ಲಿರುವ ಶ್ರೀರಂಗ ಶಿಕ್ಷಣ ಸಂಸ್ಥೆ ಆವರಣ ದಲ್ಲಿ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಅವರ ಅಂತಿಮ ದರ್ಶನವನ್ನು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಡೆ ದರು. ಕೆಲ ಸಮಯ ಕುಟುಂಬದ ಜೊತೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತ ನಾಡಿ, ಇಂದು ನಮ್ಮನ್ನೆಲ್ಲಾ ಅಗಲಿರುವ ಮಾಜಿ ಶಾಸಕ ಹಾಗೂ ಪಕ್ಷದ ನಿಷ್ಟಾವಂತ ಹಾಗೂ ಒಬ್ಬ ಸರಳ, ಸಜ್ಜನಿಕೆಯ, ಅತ್ಯಂತ ಸುಸಂಸ್ಕøತ ಮತ್ತು ಮೃದು ಸ್ವಭಾ ವದ ವ್ಯಕ್ತಿತ್ವ ಹೊಂದಿದ್ದ ಹೆಚ್.ಎಸ್.ಪ್ರಕಾಶ್ ಅವರು, ಹಾಸನ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶಾಸಕನಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ನಮ್ಮ ಕುಟಂಬದ ನಿಕಟ ವರ್ತಿಯಾಗಿ ಮತ್ತು ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದರು. ನಮ್ಮ ಕುಟುಂ ಬದ ಜೊತೆ ಸುದೀರ್ಘವಾದ ಒಡನಾಟ ವನ್ನು ಹೊಂದಿದ್ದರು. ತಮ್ಮ ಆರೋಗ್ಯ ವನ್ನು ಲೆಕ್ಕಿಸದೇ ನನ್ನ ತಂದೆಯವರಾದ ಹೆಚ್.ಡಿ.ದೇವೇಗೌಡರ ರಾಜಕೀಯದಲ್ಲಿ ಸಹಕಾರ ಕೊಡುವುದರಲ್ಲಿ ನಿರಂತರ ಕೆಲಸ ಮಾಡಿದ್ದಾರೆ. ಜೊತೆಗೆ ನನ್ನ ಸಹೋದರ ಹೆಚ್.ಡಿ.ರೇವಣ್ಣನವರ ಜೊತೆ ಇರುವ ಸಂಬಂಧ ಎಲ್ಲವನ್ನು ಗಮನಿಸಿ ರುವುದಾಗಿ ಹೇಳಿದರು. ಇವರ ಸಾವು ನಮಗೆ ಅತ್ಯಂತ ತುಂಬಲಾರದಂತಹ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ ಮತ್ತು ಅವರ ನಿಧನದ ನೋವನ್ನು ಭರಿಸುವ ಶಕ್ತಿಯನ್ನು ಭಗ ವಂತ ಅವರ ಕುಟುಂಬಕ್ಕೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು. ಈ ನವೆಂಬರ್ ತಿಂಗಳಲ್ಲಿ ಅನೇಕ ಸಾವು ನೋವುಗಳನ್ನ ಕಾಣುವಂತಾಗಿದೆ. ನವೆಂಬರ್ ತಿಂಗಳಲ್ಲಿ ಪ್ರತಿದಿನ ನೋವಿನ ಸಂಗತಿಯಾಗಿದೆ. ಇದೊಂದು ಕರಾಳ ತಿಂಗಳಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

Translate »