ಒಬ್ಬ ಪ್ರಾಮಾಣಿಕನನ್ನು ಕಳೆದುಕೊಂಡಿದ್ದೇವೆ  ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಸಂತಾಪ
ಹಾಸನ

ಒಬ್ಬ ಪ್ರಾಮಾಣಿಕನನ್ನು ಕಳೆದುಕೊಂಡಿದ್ದೇವೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಸಂತಾಪ

November 29, 2018

ಹಾಸನ: ತಮ್ಮ ಆರೋಗ್ಯದ ಬಗ್ಗೆ ಗಮನಹರಿಸದೇ ಇದ್ದುದರಿಂದ ಇಂದು ಹಾಸನ ಕ್ಷೇತ್ರದಲ್ಲಿ ಒಬ್ಬ ಪ್ರಮಾ ಣಿಕ ರಾಜಕಾರಣಿಯನ್ನು ಕಳೆದು ಕೊಂಡಿದ್ದೇವೆ ಎಂದು ಲೋಕೋಪ ಯೋಗಿ ಸಚಿವ ಹೆಚ್.ಡಿ. ರೇವಣ್ಣ ಮರುಕ ವ್ಯಕ್ತಪಡಿಸಿದರು.

ನಗರದ ರಿಂಗ್ ರಸ್ತೆಯಲ್ಲಿರುವ ಶ್ರೀರಂಗ ಶಿಕ್ಷಣ ಸಂಸ್ಥೆ ಆವರಣದಲ್ಲಿ ಇಡಲಾಗಿದ್ದ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್‍ರವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಹಾಸನ ನಗರಸಭೆ ಅಧ್ಯಕ್ಷ ರಾಗಿ, ಸಂಜೀವಿನಿ ಆಸ್ಪತ್ರೆಯ ಡಾ.ಮುನಿ ವೆಂಕಟೇಗೌಡ ಮತ್ತು ಡಾ.ಗುರುರಾಜ ಹೆಬ್ಬಾರ್ ಜೊತೆ ಸೇರಿ ಒಂದು ಸಹಕಾರ ಆಸ್ಪತ್ರೆ ನಿರ್ಮಾಣ ಮಾಡಲಾಯಿತು. ನಾಲ್ಕು ಬಾರಿ ಸತತವಾಗಿ ಶಾಸಕರಾಗಿ ದ್ದರು. ಸುಮಾರು 35 ವರ್ಷಗಳ ಕಾಲ ರಾಜಕಾರಣದಲ್ಲಿ ಇದ್ದರು. ಜಿಲ್ಲೆಯ ಜನರು ಅದರಲ್ಲೂ ಹಾಸನದ ಜನತೆ ಒಬ್ಬ ಪ್ರಾಮಾಣಿಕರು ಇಲ್ಲದಂತಾಗಿ ತುಂಬ ಲಾರದ ನಷ್ಟವಾಗಿದೆ. ಇವರ ಅಗಲಿಕೆ ನಮ್ಮ ಪಕ್ಷಕ್ಕೂ ನಷ್ಟವಾಗಿದ್ದು, ಇಂದು ನಾಯಕ ನಟ ಅಂಬರೀಶ್, ಜಾಫರ್ ಷರೀಫ್, ಅನಂತಕುಮಾರ್ ಈಗ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಸೇರಿ ಪ್ರಮುಖ ರನ್ನು ಕಳೆದುಕೊಂಡಿದ್ದೇವೆ. ಜೊತೆಗೆ ಮಂಡ್ಯದಲ್ಲಿ ಬಸ್ಸಿನಲ್ಲಿ 30 ಜನರನ್ನು ಕಳೆದು ಕೊಂಡಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

Translate »