ಡಿ.9ರಿಂದ 16ರವರೆಗೆ `ಟೂರ್ ಆಫ್ ನೀಲಗಿರೀಸ್’ 11ನೇ ಆವೃತ್ತಿ 950 ಕಿಮೀ ಸೈಕಲ್ ತುಳಿಯಲಿದ್ದಾರೆ 110 ಸೈಕ್ಲಿಸ್ಟ್‍ಗಳು!
ಹಾಸನ

ಡಿ.9ರಿಂದ 16ರವರೆಗೆ `ಟೂರ್ ಆಫ್ ನೀಲಗಿರೀಸ್’ 11ನೇ ಆವೃತ್ತಿ 950 ಕಿಮೀ ಸೈಕಲ್ ತುಳಿಯಲಿದ್ದಾರೆ 110 ಸೈಕ್ಲಿಸ್ಟ್‍ಗಳು!

December 5, 2018
  • ಡಿ. 9ರಂದು ಮೈಸೂರಿನಿಂದ ಹೊಳೆನರಸೀಪುರ ಮೂಲಕ 125 ಕಿ.ಮೀ ಕ್ರಮಿಸಿ ಹಾಸನ ಪ್ರವೇಶ
  • ಡಿ. 10ರಂದು ಹಾಸನದಿಂದ ಸಕಲೇಶಪುರ, ಸೋಮವಾರಪೇಟೆ ಮೂಲಕ 143 ಕಿ.ಮೀ ಕ್ರಮಿಸಿ ಕುಶಾಲನಗರ ಪ್ರವೇಶ

ಹಾಸನ:  ರೈಡ್ ಎ ಸೈಕಲ್ ಪ್ರತಿ ಷ್ಠಾನದ(ಆರ್‍ಎಸಿಎಫ್)ಯಿಂದ ಏರ್ಪ ಡಿಸಿರುವ 11ನೇ ಆವೃತ್ತಿಯ ಟೂರ್ ಆಫ್ ನೀಲಗಿರೀಸ್‍ನಲ್ಲಿ (ಟಿಎಫ್‍ಎನ್), ಈ ಬಾರಿ 110 ಸೈಕ್ಲಿಸ್ಟ್‍ಗಳು 950ಕಿಮೀ ಅಧಿಕ ದೂರವನ್ನು ಪೆಡಲ್ ಮಾಡಲಿದ್ದಾರೆ. ಕರ್ನಾಟಕ, ಕೇರಳ ಹಾಗೂ ತಮಿಳು ನಾಡುಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದ, ನೀಲಗಿರೀಸ್ ಬಯೋಸ್ಪೇರ್ ರಿಸರ್ವ್ ನಲ್ಲಿ ಈ ಪ್ರಯಾಣ ಸಾಗಲಿದೆ.

ಡೆನ್ಮಾರ್ಕ್‍ನಿಂದ 7, ಅಮೆರಿಕದಿಂದ 4, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಇಂಗ್ಲೆಂಡ್ ನಿಂದ ತಲಾ ಮೂರು, ಬೆಲ್ಜಿಯಂ ಮತ್ತು ಕೆನಡಾದಿಂದ ತಲಾ 2, ಆಸ್ಟ್ರಿಯಾ, ಗ್ರೀಸ್, ಮಲೇಷ್ಯಾ, ಫಿಲಿಫೈನ್ಸ್ ಮತ್ತು ಪೆÇೀಲೆಂಡ್ ನಿಂದ ತಲಾ ಒಬ್ಬ ಸೈಕ್ಲಿಸ್ಟ್‍ಗಳು ಈ ಬಾರಿ ಕಣದಲ್ಲಿದ್ದಾರೆ. ಹಾಲಿ ವರ್ಷ ದಾಖಲೆಯ ಅಂತಾರಾಷ್ಟ್ರೀಯ ರೈಡರ್‍ಗಳನ್ನು ಟಿಎಫ್ ಎನ್ ಆಕರ್ಷಿಸುವುದರೊಂದಿಗೆ, ದೇಶ ಹಾಗೂ ವಿದೇಶದಿಂದ 17 ಮಹಿಳಾ ಸೈಕ್ಲಿಸ್ಟ್‍ಗಳು ಸ್ಪರ್ಧೆ ಮಾಡುತ್ತಿದ್ದಾರೆ

ಮೈಸೂರಿನಲ್ಲಿ ಆರಂಭವಾಗಲಿರುವ ರೇಸ್‍ನಲ್ಲಿ ಸೈಕ್ಲಿಸ್ಟ್‍ಗಳು ಹಾಸನ, ಕುಶಾಲ ನಗರ, ಸುಲ್ತಾನ್ ಬತೇರಿ, ಉದಕ ಮಂಡಲ (ಊಟಿ), ಕಲ್ಪೆಟ್ಟ ಮಾರ್ಗವಾಗಿ ಸಾಗಿ ಮೈಸೂರಿಗೆ ಮರಳುವುದರೊಂದಿಗೆ ಭವ್ಯ ಪ್ರಯಾಣ ಕೊನೆಗೊಳ್ಳಲಿದೆ. ಟಿಎಫ್‍ಎನ್‍ನ ನಾಲ್ಕನೇ ದಿನದಂದು ಸುಲ್ತಾನ್ ಬತೇರಿಯಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸೈಕ್ಲಿಸ್ಟ್ ಗಳು, ಕಠಿಣವಾದ ಕಲ್ಹಟ್ಟಿ ಘಾಟ್ ಹೇರ ಬೇಕಿರುತ್ತದೆ. ಇದು ವಿಶ್ವದ ಅತ್ಯಂತ ಕಠಿಣ ಸೈಕ್ಲಿಂಗ್ ಆರೋಹಣಗಳಲ್ಲಿ ಒಂದಾಗಿದೆ.

ಎಂಟು ದಿನಗಳ ಸೈಕ್ಲಿಂಗ್ ಪ್ರಯಾಣ ದಲ್ಲಿ (ಡಿ. 9 ರಿಂದ 16) ಸೈಕ್ಲಿಸ್ಟ್‍ಗಳು ಹಲವಾರು ನೈಸರ್ಗಿಕ ವಿಸ್ಮಯಗಳನ್ನು ನೋಡಲಿದ್ದಾರೆ. ಕಡಿದಾದ ಕಣಿವೆಗಳು, ಕಾಫಿ-ಟೀ ಸಸ್ಯರಾಶಿಗಳು, ಮೂರು ವನ್ಯಜೀವಿ ಅಭಯಾರಣ್ಯಗಳು ಹಾಗೂ ಪರ್ವತಗಳನ್ನು ದಾಟಿಕೊಂಡು ಹೋಗ ಲಿದ್ದಾರೆ. ಅದರೊಂದಿಗೆ ಪ್ರತಿ ವಲಯದ ಸ್ಥಳೀಯ ಆಹಾರಗಳ ರುಚಿನೋಡುವ ಅವಕಾಶವೂ ಸಿಗಲಿದೆ. ಸೈಕ್ಲಿಸ್ಟ್‍ಗಳು ತಾವು ಸಾಗುವ ಕಡಿದಾದ ಹಾದಿಗಳಲ್ಲಿ, ನೀಲ ಗಿರೀಸ್ ಬಯೋಸ್ಪೇರ್‍ನ ಸೌಂದರ್ಯ ವನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯುವ ಅವಕಾಶವೂ ಇರಲಿದೆ.

ಪ್ರವಾಸದಲ್ಲಿ ಎಂಟಿಬಿ ಚಾಂಪಿಯನ್ ಕಿರಣ್ ಕುಮಾರ್ ರಾಜು, ಇಂಡಿಯಾ ರೋಡ್ ಮಾಜಿ ಚಾಂಪಿಯನ್ ನವೀನ್ ಜಾನ್ ಸೇರಿದಂತೆ ಪ್ರಸಿದ್ಧ ಸೈಕ್ಲಿಸ್ಟ್‍ಗಳು ಟಿಎಫ್‍ಎನ್ 2018ರಲ್ಲಿ ಪೆಡಲ್ ಮಾಡ ಲಿದ್ದಾರೆ. 1984ರ ಒಲಿಂಪಿಕ್ ಸೈಕ್ಲಿಂಗ್ ನಲ್ಲಿ ಚಿನ್ನದ ಪದಕ ವಿಜೇತ ಅಲೆಕ್ಸಿಗ್ರೇವಲ್ ಅವರು ಈ ಆವೃತ್ತಿಯಲ್ಲಿ ಸ್ವಯಂ ಸೇವಕ ರಾಗಿದ್ದು! ದೊಡ್ಡ ಗುರಿಯೊಂದಿಗೆ ಭಾಗವಹಿಸುತ್ತಿರುವ ಯುವ ಪ್ರತಿಭಾನ್ವಿತ ಸವಾರರಿಗೆ ಸಲಹೆಗಾರರಾಗಲಿದ್ದಾರೆ.

ಬೆಂಗಳೂರಿನ ಸೀತಾ ಭತೆಜಾ ಸ್ಪೆಷಾ ಲಿಟಿ ಆಸ್ಪತ್ರೆ, ಬೆಂಗಳೂರಿನ ಇಕ್ಷಾ ಫೌಂಡೇ ಷನ್, ಉತ್ತರಾಖಂಡ್‍ನ ಟೋನ್ಸ್ ವಾಲಿ ಕಮುನಿಟಿ ಹೆಲ್ತ್ ಸೆಂಟರ್ ಆಫ್ ಕಲಪ ಟ್ರಸ್ಟ್, ಗುಂಡಲೂರಿನ ವಿದ್ಯೋದಯ ಸ್ಕೂಲ್, ತಮಿಳು ನಾಡು ಹೊಸೂರಿನ ಕೆನ್ನೆಥ್ ಆ್ಯಂಡ ರ್ಸನ್ ನೇಚರ್ ಸೋಸೈಟಿ ಮತ್ತು ಹೈದರಾ ಬಾದ್‍ನ ಆದಿತ್ಯ ಮೆಹ್ತಾ ಫೌಂಡೇ ಷನ್ ಸಂಸ್ಥೆಗಳು 2018ರ ಟಿಎಫ್‍ಎನ್‍ನಲ್ಲಿ ಕೆಲವು ರೈಡರ್‍ಗಳಿಂದ ಚಾರಿಟಿ ಪಡೆಯಲಿದ್ದಾರೆ.

Translate »