ಕೆಆರ್‍ಎಸ್‍ನಿಂದ ಅಂಬೇಡ್ಕರ್ ಪ್ರತಿಮೆ ಸ್ವಚ್ಛತೆ
ಹಾಸನ

ಕೆಆರ್‍ಎಸ್‍ನಿಂದ ಅಂಬೇಡ್ಕರ್ ಪ್ರತಿಮೆ ಸ್ವಚ್ಛತೆ

December 5, 2018

ಹಾಸನ:  ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಕರ್ನಾಟಕ ರಿಪಬ್ಲಿಕ್ ಸೇನೆ (ಕೆಆರ್‍ಎಸ್) ಕಾರ್ಯಕರ್ತರು ಮಂಗಳ ವಾರ ಬೆಳಿಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮತ್ತು ವೃತ್ತವನ್ನು ಸ್ವಚ್ಛತೆಗೊಳಿಸಿದರು.

ಕರ್ನಾಟಕ ರಿಪಬ್ಲಿಕ್ ಸೇನೆ ಜಿಲ್ಲಾಧ್ಯಕ್ಷ ನಿರ್ವಾಹಣಯ್ಯ ಮಾತನಾಡಿ, ಮಹಾ ರಾಷ್ಟ್ರದ ದಾದರ್‍ನಲ್ಲಿ ಡಿ. 5ರಂದು ನಡೆಯುವ ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣ ದಿನದ ಕಾರ್ಯಕ್ರಮಕ್ಕೆ ರಾಷ್ಟ್ರಾದ್ಯಂತ ಜನರು ಬರಲಿದ್ದಾರೆ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಮತ್ತು ರಿಪಬ್ಲಿಕ್ ಸೇನೆ ರಾಷ್ಟ್ರೀಯ ಅಧ್ಯಕ್ಷ ಆನಂದರಾಜ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ರಾಜ್ಯ ಅಧ್ಯಕ್ಷ ಜಿಗಣಿ ಶಂಕರ್ ಅವರ ನೇತೃತ್ವದಲ್ಲಿ ಮೈಸೂರು ವಿಭಾಗದ ಹಾಸನ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ ಪ್ರಾಂತ್ಯದಿಂದ ಸಾವಿ ರಾರು ಸಂಖ್ಯೆಯಲ್ಲಿ ದಾದರ್‍ಗೆ ಪ್ರಯಾಣ ಬೆಳೆಸಲಿದ್ದಾರೆ. ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲೂ ಕಿನ ಅಂಬೇಡ್ಕರ್ ಪುತ್ಥಳಿಯನ್ನು ಸ್ವಚ್ಛ ಗೊಳಿಸಿ ಕ್ಯಾಂಡಲ್ ಹಚ್ಚಿ ದೀಪ ಬೆಳಗಿಸಲಾಗಿದೆ ಎಂದು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾನಿಲಯಕ್ಕೆ ಡಾ.ಬಿ. ಆರ್.ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡಬೇಕು. ಜಿಲ್ಲೆಯ ಸಕ ಲೇಶಪುರ, ಚನ್ನರಾಯಪಟ್ಟಣ, ಆಲೂರು ತಾಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಕಂಚಿನ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಡಿ.ಗೋಪಾಲ್, ಮುಖಂಡ ರಾದ ಡಿ.ಎಂ.ಹಳ್ಳಿ ರಾಜು, ತಿಮ್ಮಣ್ಣ, ಎಂ.ಸಿ. ರಾಜು, ರಮೇಶ್, ಡಿ.ಟಿ.ಸ್ವಾಮಿ ಇದ್ದರು.

Translate »