ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಮನೆಗಳ್ಳನ ಬಂಧನ
ಹಾಸನ

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಮನೆಗಳ್ಳನ ಬಂಧನ

June 19, 2018

ಹೊಳೆನರಸೀಪುರ: ಎರಡು ವರ್ಷಗಳಿಂದ ಮನೆಗಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಹಳ್ಳಿಮೈಸೂರು ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಟ್ಟದಪುರ ಮೂಲದ ಹಳಿಯೂರು ಜಗ ಎಂಬಾತ ಬಂಧಿತ ಖದೀಮ. ಕಳೆದ 2ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆ ಮರೆಸಿಕೊಂದಿದ್ದ. ಹಳ್ಳಿಮೈಸೂರು ಹೋಬಳಿ ಮತ್ತು ಅರಕಲಗೂಡು ಸುತ್ತ ಮುತ್ತ ತನ್ನ ಕೈಚಳಕ ತೋರಿದ್ದು, ಈತನ ವಿರುದ್ಧ 11 ಪ್ರಕರಣಗಳು ದಾಖಲಾಗಿದ್ದವು. ಬಂಧಿತನಿಂದ ಸರಗಳ್ಳತನದಿಂದ 273 ಗ್ರಾಂ. ಚಿನ್ನಾಭರಣ, 2 ಪಲ್ಸರ್ ಬೈಕ್, 5 ತಾಳಿ, ನೀರಿನ ಹಂಡೆಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಡಿವೈಎಸ್‍ಪಿ ರಾಮಲಿಂಗೇಗೌಡ ವಸಂತಕುಮಾರ್ ಒಳಗೊಂಡ ತಂಡ ಪ್ರಕರಣ ಭೇದಿಸಿದ್ದು, ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಬಸವರಾಜ್, ಹರೀಶ್, ಶ್ರೀಕಂಠ, ಗೃಹರಕ್ಷರಾದÀ ನವೀನ್ ರಂಗನಾಥ್ ಇನ್ನೂ ಹಲವರು ಭಾಗವಹಿಸಿದ್ದರು.

Translate »