ವಿವಿಧ ಬೇಡಿಕೆ ಈಡೇರಿಸುವಂತೆ ರೈತರ ಪ್ರತಿಭಟನೆ
ಹಾಸನ

ವಿವಿಧ ಬೇಡಿಕೆ ಈಡೇರಿಸುವಂತೆ ರೈತರ ಪ್ರತಿಭಟನೆ

June 19, 2018

ಹಾಸನ: ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.ನಗರದ ಅಂಬೇಡ್ಕರ್ ಪ್ರತಿಮೆ ಬಳಿ ಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾ ರರು, ಡಿಸಿ ಕಚೇರಿ ಆವರಣ ತಲುಪಿ ಬೇಡಿಕೆ ಈಡೇರಿಕೆಗೆ ಘೋಷಣೆ ಕೂಗಿ ಆಗ್ರಹಿಸಿದರು.

ರಾಜ್ಯದ ನೂತನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೃಷಿ ಕ್ಷೇತ್ರದ ತೊಂದರೆಗಳನ್ನು ಅರಿತು ಸಂಕಷ್ಟದಲ್ಲಿ ರುವ ಕೃಷಿ ಕ್ಷೇತ್ರಕ್ಕೆ ಕೊಂಚ ನೆರವಾಗಲು ರೈತರ ಸಾಲಮನ್ನಾ ಮಾಡಲೇಬೇಕು. ಮೂರು ವರ್ಷಗಳಿಂದ ಅನಾವೃಷ್ಟಿಯಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ವರ್ಷ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವೇಳೆ ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಕೂಡಲೇ ಹೊಸ ಸಾಲವನ್ನು ವಿತರಿಸ ಬೇಕು ಎಂದು ಒತ್ತಾಯಿಸಿದರಲ್ಲದೆ, ತಂಬಾಕು ಬೆಳೆಗಾರರಿಗೆ ಪರವಾನಗಿ ನವೀಕರಣಕ್ಕಾಗಿ ನಿಗದಿಪಡಿಸಿರುವ 4,500 ರೂ. ಮೊತ್ತವನ್ನು ರದ್ದುಪಡಿಸಬೇಕು. ಜಿಲ್ಲೆಯಲ್ಲಿ ಆಲೂಗಡ್ಡೆ, ತರಕಾರಿ ಸೇರಿದಂತೆ ಎಲ್ಲಾ ಬೆಳೆಗಳು ಮಳೆಯಿಂದ ನಾಶವಾಗಿದೆ. ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಮನವಿ ಮಾಡಿದರು.

ಕಳೆದ ವರ್ಷ ದೃಢಿಕೃತ ಆಲೂಗಡ್ಡೆ ಬೀಜ ಖರೀದಿಸಿದ್ದ ರೈತರಿಗೆ ಇಲ್ಲಿವರೆಗೂ ವಿಮೆ ಹಣ ಪಾವತಿಯಾಗಿಲ್ಲ. ಆಲೂಗಡ್ಡೆ ಬೆಳೆಗಾರ ರಿಗೆ ಮಾಹಿತಿ ನೀಡುವಲ್ಲಿ ತೋಟಗಾರಿಕಾ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ತಾಲೂಕಿನ ಸೋಮನ ಹಳ್ಳಿ ಕಾವಲಿನಲ್ಲಿರುವ ಆಲೂಗಡ್ಡೆ ಸಂಶೋ ಧನಾ ಘಟಕ ಸಂಪೂರ್ಣ ನಿಷ್ಕ್ರಿಯವಾ ಗಿದ್ದು, ಅದನ್ನು ಸದೃಢಗೊಳಿಸಿದರೆ ಹಾಸನ ದಲ್ಲಿಯೇ ಬಿತ್ತನೆ ಆಲೂಗಡ್ಡೆ ಪಡೆಯ ಬಹುದು. ಇದರಿಂದ ಹೊರ ರಾಜ್ಯದ ಮೇಲಿನ ಬಿತ್ತನೆ ಆಲೂ ಬೀಜ ಅವ ಲಂಬನೆ ಕಡಿಮೆ ಮಾಡಬಹುದು. ಆದರೆ ಈ ಸಂಬಂಧ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ತೀರ್ಪಿನಿಂದ ಕಾವೇರಿ ಜಲಾಶಯದಲ್ಲಿ 7 ಟಿಎಂಸಿ ನೀರು ಹೆಚ್ಚು ವರಿಯಾಗಿ ಉಳಿಯುತ್ತಿದೆ. ಹೆಚ್ಚಿನ ಪಾಲನ್ನು ಹಾಸನ ತಾಲೂಕು ನೀರಾವರಿಗಾಗಿ ಬಳಸುವುದು ಮತ್ತು ಇಲ್ಲಿನ ಎಲ್ಲಾ ಕೆರೆ ಗಳಿಗೆ ನೀರನ್ನು ಹಾಯಿಸುವ ಯೋಜನೆ ಯನ್ನು ಕೂಡಲೇ ಕಾರ್ಯರೂಪಕ್ಕೆ ಬರು ವಂತೆ ಒತ್ತಾಯಿಸಿದರಲ್ಲದೆ, ಹೇಮಾವತಿ ಜಲಾಶಯದಿಂದ ನದಿಗೆ ನಿಗದಿಗಿಂತ ಅಧಿಕ ನೀರು ಬಿಡಲಾಗುತ್ತಿದೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದಿದ್ದರೆ ಜಲಾಶಯಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಇದೇ ವೇಳೆ ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಬಳ್ಳೂರು ಸ್ವಾಮಿ, ಹೆಚ್.ಸಿ.ಕಣಾಗಲ್ ಮೂರ್ತಿ, ಜಗದೀಶ್, ಕೆ.ಜೆ.ರುದ್ರೇಶ್‍ಗೌಡ, ದೊಡ್ಡಳ್ಳಿ ಮಂಜು ಇತರರಿದ್ದರು.

Translate »