ಹುಣಸಿನಕೆರೆ ಭರ್ತಿ: ಶಾಸಕ ಪ್ರೀತಮ್‍ರಿಂದ ಬಾಗಿನ
ಹಾಸನ

ಹುಣಸಿನಕೆರೆ ಭರ್ತಿ: ಶಾಸಕ ಪ್ರೀತಮ್‍ರಿಂದ ಬಾಗಿನ

June 19, 2018

ಹಾಸನ: ಕೆಲ ದಿನಗಳಿಂದ ಸುರಿದ ಮಳೆಯಿಂದ ನಗರ ಸಮೀಪದ ಐತಿಹಾಸಿಕ ಹುಣಸಿನಕೆರೆ ಸಂಪೂರ್ಣ ಭರ್ತಿಯಾಗಿದ್ದು, ಶಾಸಕ ಪ್ರೀತಮ್ ಜೆ.ಗೌಡ ಇಂದು ಬೆಳಿಗ್ಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಇದೇ ವೇಳೆ ಸುತ್ತ ಮುತ್ತಲ ಅನೇಕರು ಹುಣಸಿನಕೆರೆ ಅಭಿವೃದ್ಧಿ ಕುರಿತು ಶಾಸಕರಲ್ಲಿ ಮನವಿ ಮಾಡಿದರು ಕೆರೆ ಸುತ್ತ ಭೂಮಿ ಒತ್ತುವರಿಯಾಗಿದ್ದು, ಕರೆ ಅಭಿವೃದ್ಧಿ ಗೊಳಿಸಿ, ಬೋಟಿಂಗ್ ವ್ಯವಸ್ಥೆ ಮಾಡು ವಂತೆ ಒತ್ತಾಯಿಸಿದರು.

ಮನವಿ ಆಲಿಸಿದ ಶಾಸಕ ಪ್ರೀತಮ್ ಜೆ.ಗೌಡ, ಐತಿಹಾಸಿಕ ಹುಣಸಿನಕೆರೆ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಲಾಗು ವುದು. ನಿಯಮಾನುಸಾರ ಇಲ್ಲಿನ ಒಟ್ಟು ಪ್ರದೇಶ ಸರ್ವೇ ನಡೆಸಿ ಸುತ್ತ ಕಾಂಪೌಂಡ್ ಹಾಕಿ ಸಂರಕ್ಷಿಸಿ, ನಂತರ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಕಳೆದ 20 ವರ್ಷಗಳಿಂದ ಹಂತ ಹಂತ ವಾಗಿ ಅಭಿವೃದ್ಧಿ ಮಾಡಿದ್ದರೆ ಇಂದು ಈ ಪ್ರದೇಶ ಪ್ರವಾಸಿ ತಾಣವಾಗುತ್ತಿತ್ತು. ಹಿಂದಿನ ಜನಪ್ರತಿನಿಧಿಗಳು ಆಸಕ್ತಿ ತೋರದೆ ಕೆರೆ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಕೊಳಚೆ ನೀರನ್ನು ಕೆರೆಗೆ ಬಿಡುತ್ತಿರುವುದ ರಿಂದ ನೀರು ಕಲುಷಿತಗೊಳ್ಳುತ್ತಿದೆ ಎಂಬ ದೂರು ಕೇಳಿ ಬಂದಿದೆ. ನಗರದ ಯುಜಿಡಿ ನೀರು ಯಾವ ಕಡೆ ಹೋಗಬೇಕು. ಶುದ್ಧ ಮಾಡಿ ಕೆರೆಗೆ ಬಿಡಬೇಕಾ? ಬೇಡವೇ ಎಂದು ಪರಿಶೀಲಿಸಿದ ಬಳಿಕ ನಿರ್ಧರಿಸಲಾಗುವುದು. ಕೆರೆಗೆ ತ್ಯಾಜ್ಯ ಸೇರದಂತೆ ಮುಂದಿನ ದಿನಗಳಲ್ಲಿ ಎಚ್ಚರ ವಹಿಸಿ ಅಭಿವೃದ್ಧಿಪಡಿಸಲಾವುದು ಎಂದು ಭರವಸೆ ನೀಡಿದರು. ಇದೇ ವೇಳೆ ಬೆಸ್ತರ ಸಂಘದ ಲಕ್ಷ್ಮಣ್, ಮುಖಂಡ ಮಂಜುನಾಥ್ ಮೊರೆ, ನಗರಸಭೆ ಸದಸ್ಯೆ ನಿರ್ಮಲಾ ಯೋಗೀಶ್ ಇತರರಿದ್ದರು.

Translate »