30 ಕೋಟಿ ರೂ.ವೆಚ್ಚದಲ್ಲಿ ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾಹಿತಿ
ಹಾಸನ

30 ಕೋಟಿ ರೂ.ವೆಚ್ಚದಲ್ಲಿ ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾಹಿತಿ

June 19, 2018

ಬೇಲೂರು: ವಿಶ್ವದಲ್ಲೇ ಶಿಲ್ಪ ಕಲೆಗೆ ಹೆಸರಾದ ಬೇಲೂರು, ಹಳೇಬೀಡಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ 30 ಕೋಟಿ ರೂ. ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಮಾಹಿತಿ ನೀಡಿದರು.

ಪಟ್ಟಣಕ್ಕೆ ಆಗಮಿಸಿ ಶ್ರೀಚನ್ನಕೇಶವಸ್ವಾಮಿ ದರ್ಶನ ಪಡೆದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಎರಡು ಪಟ್ಟಣಗಳಿಗೆ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಇಲ್ಲಿಗೆ ಆಗಮಿಸುವವರಿಗೆ ಮೂಲಸೌಕರ್ಯ ಕಲ್ಪಿಸುವ ಜೊತೆಗೆ ಸ್ಥಳೀಯವಾಗಿಯೂ ಅನೇಕ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ಅಗತ್ಯವಿದೆ ಎಂದರು.

ಬೇಲೂರು-ಹಳೇಬೀಡು, ಶ್ರವಣಬೆಳಗೊಳ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸ ಲಾಗುವುದು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದ್ದು, ಅವÀರ ನಿರ್ದೇಶನದಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು.

ಬೇಲೂರು ದೇವಾಲಯದ ಸುತ್ತ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಅಭಿ ವೃದ್ಧಿಗೆ ಅಂದಾಜು 19 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಲಾಗಿದೆ. ಬೇಲೂರು ಹಳೇಬೀಡುಗಳಲ್ಲಿ ಒಟ್ಟಾರೆ 30 ಕೋಟಿ ರೂ.ಅಭಿವೃದ್ಧಿ ಕಾಮಗಾರಿಗಳನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು. ತಾವು ಇಲಾಖೆ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಕೇವಲ 15 ದಿನಗಳಲ್ಲಿ ಈಗಾಗಲೇ 2 ಬಾರಿ ಇಲಾಖಾಧಿಕಾರಿಗಳ ಸಭೆ ನಡೆಸಿ ಪರಾಮರ್ಶಿಸಲಾಗಿದೆ. ಮುಂದಿನ 6 ತಿಂಗಳೊಳಗೆ ಎಲ್ಲಾ ನೆನೆ ಗುದಿಗೆ ಬಿದ್ದಿರುವ ಯೋಜನೆಗಳನ್ನು ಪುನರಾಂಭಿಸಲಾಗುವುದು ಎಂದರು.

ದೇವಾಲಯದ 300 ಮೀ. ವ್ಯಾಪ್ತಿಯಲ್ಲಿ ಉದ್ಯಾನವನ, ಕ್ಯಾಂಟೀನ್, ವಸತಿಗೃಹ, ರಸ್ತೆ ವಿಭಜಕ, ತಂಗುದಾಣ, ಶೌಚಾಲಯ, ಕುಡಿಯುವ ನೀರು, ವಾಣಿಜ್ಯ ಮಳಿಗೆಗಳು, ವಸ್ತುಸಂಗ್ರಹಾಲಯ ನಿರ್ಮಿಸಲಾಗುವುದು. ಹೊಯ್ಸಳ ಕಾಲದ ಮೂಲ ವಿಗ್ರಹಗಳಿಗೆ ಯಾವುದೇ ರೀತಿ ಧಕ್ಕೆ ಆಗದಂತೆ ಎಚ್ಚರ ವಹಿಸಿ, ಕೋಟೆಕೊತ್ತಲಗಳಿಗೆ ಮರುಜೀವ ನೀಡಲಾಗುವುದು. ಇದರಿಂದ ಪ್ರವಾಸಿಗ ರಿಗೆ ಇತಿಹಾಸದ ನೆನಪು ಮರುಕಳಿಸಿದಂತೆ ಆಗುತ್ತದೆ. ರಾಜ್ಯದ ಪ್ರವಾಸಿ ಕೇಂದ್ರಗಳಲ್ಲಿ ಶೌಚಾಲಯದ ಕೊರತೆ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗು ವುದು ಎಂದು ತಿಳಿಸಿದರು.

ಬೇಲೂರು ಮತ್ತು ಹಳೇಬೀಡು ಅವಳಿ ಪಟ್ಟಣಗಳಾಗಿದ್ದು, ಇವುಗಳನ್ನುಅಭಿವೃದ್ಧಿ ಪಡಿಸಲಾಗುವುದು. ರಸ್ತೆ ಅಗಲೀಕರಣ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇದೇ ತಿಂಗಳ 25ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಬೇಲೂರು ಹಳೇಬೀಡು ಅಭಿವೃದ್ಧಿಗೆ ಹೆಚ್ಚು ವರಿಯಾಗಿ ಎಷ್ಟು ಅನುದಾನ ಬೇಕಾಗುತ್ತದೆ ಎಂಬ ಬಗ್ಗೆ ಚರ್ಚಿಸಿ ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಶಾಸಕ ಕೆ.ಎಸ್.ಲಿಂಗೇಶ್, ಪುರ ಸಭಾಧ್ಯಕ್ಷೆ ಭಾರತಿ, ಪ್ರವಾಸೋದ್ಯಮ ನಿರ್ದೇಶಕ ರಾಮು, ಪುರಾತತ್ವ ಇಲಾಖೆ ಆಯುಕ್ತ ವೆಂಕಟೇಶ್, ಜಿಪಂ ಸಿಇಓ ಜಗದೀಶ್, ಎಸಿ ಲಕ್ಷ್ಮೀಕಾಂತ್ ರೆಡ್ಡಿ, ಪ್ರವಾ ಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ಧನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Translate »