Tag: SR Mahesh

ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿ ಸಾ.ರಾ.ಮಹೇಶ್ ನೇಮಕ
ಮೈಸೂರು

ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿ ಸಾ.ರಾ.ಮಹೇಶ್ ನೇಮಕ

October 12, 2019

ಮೈಸೂರು, ಅ.11- ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ನೇಮಕವಾಗಿದ್ದಾರೆ. ಶಾಸಕರಾದ ಹಾಸನದ ಪ್ರೀತಮ್ ಜೆ.ಗೌಡ, ಎಂ.ಎಸ್.ಸೋಮಲಿಂಗಪ್ಪ, ಬಸವರಾಜ್ ದಡ್ಡೇಸೂಗೂರ್, ಸುನೀಲ್ ಬಿಳಿಯಾ ನಾಯ್ಕ, ಕೆ.ಬಿ.ಅಶೋಕ್ ನಾಯ್ಕ್, ರಾಮಪ್ಪ ಸೋಬೆಪ್ಪ ಲಮಾಣಿ, ಪರಣ್ಣ ಈಶ್ವರಪ್ಪ ಮುನವಳ್ಳಿ, ಎಸ್.ಭೀಮಾ ನಾಯ್ಕ್, ಟಿ.ರಘುಮೂರ್ತಿ, ರಹೀಂಖಾನ್, ಗಣೇಶ್ ಪ್ರಕಾಶ್ ಹುಕ್ಕೇರಿ, ಆರ್.ಅಖಂಡ ಶ್ರೀನಿವಾಸಮೂರ್ತಿ ಹಾಗೂ ಎಂ.ಶ್ರೀನಿವಾಸ್ ಸಮಿತಿ ಸದಸ್ಯರಾಗಿದ್ದಾರೆ.

ನೀವು ನಿಜವಾಗಲೂ ಪ್ರಾಮಾಣಿಕರಾದರೆ ಚಾಮುಂಡಿಬೆಟ್ಟದಲ್ಲಿ ಪ್ರಮಾಣ ಮಾಡಿ
ಮೈಸೂರು

ನೀವು ನಿಜವಾಗಲೂ ಪ್ರಾಮಾಣಿಕರಾದರೆ ಚಾಮುಂಡಿಬೆಟ್ಟದಲ್ಲಿ ಪ್ರಮಾಣ ಮಾಡಿ

September 24, 2019

ಮೈಸೂರು,ಸೆ.23(ಪಿಎಂ)- ರೀ ವಿಶ್ವನಾಥ್, ನನ್ನ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಒಂದೇ ಒಂದೂ ಕಪ್ಪು ಚುಕ್ಕೆ ಸಾಬೀತು ಮಾಡಿ. ಮರು ಕ್ಷಣವೇ ರಾಜ ಕೀಯ ಹಾಗೂ ಸಾರ್ವಜನಿಕ ಜೀವನ ದಿಂದ ನಿವೃತ್ತಿಯಾಗುತ್ತೇನೆ ಎಂದು ವಾಗ್ದಾಳಿ ನಡೆಸುವ ಮೂಲಕ ಮಾಜಿ ಸಚಿವರೂ ಆದ ಶಾಸಕ ಸಾ.ರಾ.ಮಹೇಶ್, ಅನರ್ಹ ಶಾಸಕ ಎ.ಹೆಚ್.ವಿಶ್ವನಾಥ್ ವಿರುದ್ಧ ಗುಡುಗಿದ್ದಾರೆ. ಭಾನುವಾರವಷ್ಟೇ ಎ.ಹೆಚ್.ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಸಾ.ರಾ.ಮಹೇಶ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆ…

ಜಿಟಿಡಿ ನಮ್ಮ ನಾಯಕರು, ಅವರು ನನ್ನನ್ನ ಬೈಯೋದು ಹೊಸದೇನಲ್ಲ….
ಮೈಸೂರು

ಜಿಟಿಡಿ ನಮ್ಮ ನಾಯಕರು, ಅವರು ನನ್ನನ್ನ ಬೈಯೋದು ಹೊಸದೇನಲ್ಲ….

September 14, 2019

ಮೈಸೂರು,ಸೆ.13(ಆರ್‍ಕೆಬಿ)- ಜಿ.ಟಿ.ದೇವೇ ಗೌಡರು ನಮ್ಮ ನಾಯಕರು. ಅವರು ನನ್ನನ್ನು ಬೈಯೋದು ಹೊಸದೇನಲ್ಲ. ಈ ಹಿಂದೆ ಚುನಾವಣೆ ಯಲ್ಲೂ ಬೈದಿದ್ರು. ಅವರು ನಮ್ಮ ಜೊತೆಗೇ ಇರು ತ್ತಾರೆ. ಅವರಿಗಾಗಿರುವ ನೋವನ್ನು ಸರಿಪಡಿಸು ತ್ತೇವೆ. ಏನೇ ತಪ್ಪು ಮಾಡಿದ್ರೂ ಎಲ್ಲವನ್ನು ಕ್ಷಮಿಸು ವುದು ಜೆಡಿಎಸ್ ಪಕ್ಷದಲ್ಲಿ ಮಾತ್ರ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಇಂದಿಲ್ಲಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅದೃಷ್ಟದ ಸಿಎಂ. ಅವರಿಗೆ ಕಷ್ಟವೇ ಗೊತ್ತಿಲ್ಲ ಎಂಬ ಜಿ.ಟಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೊಡ್ಡಗೌಡರ ಶ್ರಮದಿಂದ ಹೆಚ್‍ಡಿಕೆ…

‘ಸಮನ್ವಯದಿಂದ ಮೈತ್ರಿ ಧರ್ಮ ಪಾಲನೆ’
ಮೈಸೂರು

‘ಸಮನ್ವಯದಿಂದ ಮೈತ್ರಿ ಧರ್ಮ ಪಾಲನೆ’

March 25, 2019

ಮೈಸೂರು: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇ ಗೌಡ, ಸಿಎಂ.ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾ ಮಯ್ಯರ ಸೂಚನೆ ಯಂತೆ ರಾಜ್ಯದಲ್ಲಿ ಸಮನ್ವಯ ಸಾಧಿಸಿ ಮೈತ್ರಿ ಧರ್ಮ ಪಾಲನೆ ಮಾಡುತ್ತಿದ್ದೇವೆ ಎಂದು ಸಚಿವ ಸಾ.ರಾ.ಮಹೇಶ್ ಅವರು ಇಂದಿಲ್ಲಿ ತಿಳಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಸಿ.ಹೆಚ್. ವಿಜಯ ಶಂಕರ್ ಅವರು ನಾಮಪತ್ರ ಸಲ್ಲಿಸಿದ ವೇಳೆ ಹಾಜರಿದ್ದ ಅವರು, ನಂತರ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲೇ ಮೈಸೂರಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್‍ರನ್ನು ಬೆಂಬಲಿಸ ಲಾಗುತ್ತಿದೆ…

ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರ ಜೊತೆಗೆ  ಪ್ರವಾಸೋದ್ಯಮ ಅಭಿವೃದ್ಧಿ : ಸಚಿವ ಸಾ.ರಾ.ಮಹೇಶ್
ಮೈಸೂರು

ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿ : ಸಚಿವ ಸಾ.ರಾ.ಮಹೇಶ್

January 21, 2019

ಮೈಸೂರು: ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರದ ಜೊತೆಗೆ ಸುತ್ತ ಮುತ್ತಲ ಪ್ರದೇಶವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂವಹನ ಪ್ರಕಾಶನ ಸಹ ಯೋಗದಲ್ಲಿ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಆರ್. ನಗರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಹೆಚ್.ಆರ್.ಚಂದ್ರ ಕಲಾ ಅಶೋಕ್ ಅವರ `ಕೃಷ್ಣರಾಜನಗರ ತಾಲೂಕಿನ ಗ್ರಾಮ ದೇವತೆಗಳು: ಸಾಂಸ್ಕøತಿಕ ಅಧ್ಯಯನ’ ಸಂಶೋದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಅವರು…

ಶ್ರೀರಂಗಪಟ್ಟಣ ಪ್ರವಾಸಿತಾಣ ಅಭಿವೃದ್ಧಿಗೆ 20 ಕೋಟಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್
ಮಂಡ್ಯ

ಶ್ರೀರಂಗಪಟ್ಟಣ ಪ್ರವಾಸಿತಾಣ ಅಭಿವೃದ್ಧಿಗೆ 20 ಕೋಟಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್

December 26, 2018

ಮಂಡ್ಯ: ಶ್ರೀರಂಗಪಟ್ಟಣ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಸರ್ಕಾರದಿಂದ 20 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದ್ದು, ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ತಿಳಿಸಿದರು. ಮಂಗಳವಾರ ಶ್ರೀರಂಗಪಟ್ಟಣದ ಮಯೂರ ರಿವರ್ ವ್ಯೂ ಹೋಟೆಲ್‍ನಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಸೂಚನೆ ಹಾಗೂ ಶಾಸಕರ ರವೀಂದ್ರ ಶ್ರೀಕಂಠಯ್ಯ ಅವರ ಮನವಿ ಮೇರೆಗೆ ಶ್ರೀರಂಗಪಟ್ಟಣ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸರ್ಕಾರ 20 ಕೋಟಿ…

ರೇಸ್‍ಕೋರ್ಸ್ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ
ಮೈಸೂರು

ರೇಸ್‍ಕೋರ್ಸ್ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ

December 10, 2018

ಮೈಸೂರು: ಮೈಸೂರಿನ ಹೃದಯ ಭಾಗದಲ್ಲಿ ರುವ ಲೋಕೋಪಯೋಗಿ ಇಲಾಖೆಗೆ ಸೇರಿದ 139 ಎಕರೆ ಭೂಮಿಯಲ್ಲಿ ನಡೆಯುತ್ತಿರುವ ರೇಸ್‍ಕೋರ್ಸ್ ಅನ್ನು ಸ್ಥಳಾಂತರಗೊಳಿಸುವ ನನ್ನ ನಿರ್ಧಾರಕ್ಕೆ ಬದ್ದವಾಗಿದ್ದು, ಅಧಿವೇಶನದ ನಂತರ ಅಂತಿಮ ಸುತ್ತಿನ ಮಾತುಕತೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೇಸ್‍ಕೋರ್ಸ್‍ನಲ್ಲಿ ಅಕ್ರಮವಾಗಿ 600ಕ್ಕೂ ಹೆಚ್ಚು ಶೆಡ್‍ಗಳನ್ನು ನಿರ್ಮಿಸಿ ಉತ್ತರ ಭಾರತದ ವಿವಿಧ ರಾಜ್ಯಗಳ ನೂರಾರು ಮಂದಿ ನೆಲೆಸಿದ್ದರು. ಸರ್ಕಾರ ಕುದುರೆ ಓಡಿಸುವುದಕ್ಕೆ ಮಾತ್ರ ಅನುಮತಿ ನೀಡಿತ್ತು….

ಸಭೆ ಕರೆದು ಸಮಸ್ಯೆ ಆಲಿಸುವ ರೈತಪರ ಸಿಎಂ ಹೆಚ್‍ಡಿಕೆ
ಮೈಸೂರು

ಸಭೆ ಕರೆದು ಸಮಸ್ಯೆ ಆಲಿಸುವ ರೈತಪರ ಸಿಎಂ ಹೆಚ್‍ಡಿಕೆ

December 2, 2018

ಕೆ.ಆರ್.ನಗರ: ಇಡೀ ರಾಜ್ಯದಲ್ಲಿ ಪ್ರತೀ ತಿಂಗಳಿಗೊಮ್ಮೆ ರೈತರ ಸಭೆ ಕರೆದು ಸಮಸ್ಯೆ ಆಲಿಸುವ ಮುಖ್ಯ ಮಂತ್ರಿ ಇದ್ದರೆ ಅದು ಹೆಚ್.ಡಿ.ಕುಮಾರಸ್ವಾಮಿ ಮಾತ್ರ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದರು. ತಾಲೂಕಿನ ಕರ್ತಾಳು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ದೇಶಿಸಿ ಮಾತ ನಾಡಿದ ಅವರು, ಈಗಾಗಲೇ ತಾಲೂಕಿನಲ್ಲಿ ನಡೆಸುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಗಳಿಂದ ಜನತೆಯ ಸಮಸ್ಯೆಗಳನ್ನು ಸುಲಭ ರೀತಿಯಲ್ಲಿ ಬಗೆಹರಿಸಲು ಸಾಧ್ಯವಾಗು ತ್ತದೆ. ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶಕ್ಕೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸುವುದರಿಂದ ಜನತೆ…

ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ 10 ಕೋಟಿ ಅನುದಾನ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್
ಚಾಮರಾಜನಗರ

ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ 10 ಕೋಟಿ ಅನುದಾನ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್

November 21, 2018

ಚಾಮರಾಜನಗರ: ಜಿಲ್ಲೆಯ ಪ್ರವಾಸಿ ತಾಣಗಳ ಅಭಿ ವೃದ್ಧಿಗಾಗಿ ಕಳೆದ ನಾಲ್ಕು ತಿಂಗಳಿನಲ್ಲಿ 10 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ಸಂಜೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡಲು ಸಿದ್ಧನಿದ್ದೇನೆ. ಆದರೆ, ಅನುದಾನ ಸದ್ಬಳಕೆ ಆಗಬೇಕು ಎಂಬುದು ನನ್ನ ಆಶಯ ಎಂದರು. ಕಳೆದ 2013ರಿಂದ 2018ರವರೆಗೆ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ರಾಜ್ಯ…

ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ಬಿಡುಗಡೆ
ಮೈಸೂರು

ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ಬಿಡುಗಡೆ

November 11, 2018

ಭೇರ್ಯ: ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಯಿಂದ 50 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಕೃಷ್ಣರಾಜನಗರ ತಾಲೂಕು ಮೂಡಲ ಬೀಡು ಗ್ರಾಮದಲ್ಲಿ ಗ್ರಾಮಸ್ಥರಿಂದ ಅಭಿ ನಂದನೆ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ತಾಲೂಕಿನ ಬಹುತೇಕ ಪ್ರಮುಖ ರಸ್ತೆಗಳು ಅಭಿವೃದ್ಧಿಗೊಂಡಿವೆ. ಈಗ ಬಿಡು ಗಡೆಯಾಗಿರುವ ಅನುದಾನದಲ್ಲಿ ಮಂಚನ ಹಳ್ಳಿ-ಬಾಲೂರು, ಮಿರ್ಲೆ-ಅಂಕನಹಳ್ಳಿ ಸೇರಿದಂತೆ ಉಳಿದೆಲ್ಲಾ ರಸ್ತೆಗಳು ಸಮಗ್ರ ವಾಗಿ ಅಭಿವೃದ್ಧಿಯಾಗಲಿದೆ ಎಂದರು. ರೇಷ್ಮೆ ಮಾರುಕಟ್ಟೆ ಸ್ಥಾಪನೆ: ರೇಷ್ಮೆ ಬೆಳೆಗೆ ಉತ್ತೇಜನ…

1 2 3 5
Translate »