ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ಬಿಡುಗಡೆ
ಮೈಸೂರು

ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ಬಿಡುಗಡೆ

November 11, 2018

ಭೇರ್ಯ: ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಯಿಂದ 50 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಕೃಷ್ಣರಾಜನಗರ ತಾಲೂಕು ಮೂಡಲ ಬೀಡು ಗ್ರಾಮದಲ್ಲಿ ಗ್ರಾಮಸ್ಥರಿಂದ ಅಭಿ ನಂದನೆ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ತಾಲೂಕಿನ ಬಹುತೇಕ ಪ್ರಮುಖ ರಸ್ತೆಗಳು ಅಭಿವೃದ್ಧಿಗೊಂಡಿವೆ. ಈಗ ಬಿಡು ಗಡೆಯಾಗಿರುವ ಅನುದಾನದಲ್ಲಿ ಮಂಚನ ಹಳ್ಳಿ-ಬಾಲೂರು, ಮಿರ್ಲೆ-ಅಂಕನಹಳ್ಳಿ ಸೇರಿದಂತೆ ಉಳಿದೆಲ್ಲಾ ರಸ್ತೆಗಳು ಸಮಗ್ರ ವಾಗಿ ಅಭಿವೃದ್ಧಿಯಾಗಲಿದೆ ಎಂದರು.

ರೇಷ್ಮೆ ಮಾರುಕಟ್ಟೆ ಸ್ಥಾಪನೆ: ರೇಷ್ಮೆ ಬೆಳೆಗೆ ಉತ್ತೇಜನ ನೀಡುವ ಜತೆಗೆ ತಾಲೂಕು ಕೇಂದ್ರದಲ್ಲಿ ರೇಷ್ಮೇ ಮಾರುಕಟ್ಟೆ ಸ್ಥಾಪಿಸುವ ಚಿಂತನೆ ಇದೆ. ತಾವೇ ರೇಷ್ಮೆ ಸಚಿವನಾಗರುವು ದರಿಂದ ಆದಷ್ಟೂ ಬೇಗ ಯೋಜನೆ ಕಾರ್ಯ ಗತಗೊಳ್ಳಲಿದೆ ಎಂದು ಹೇಳಿದರು.
ಆಸ್ಪತ್ರೆ ಮೇಲ್ದರ್ಜೆಗೆ: ಸಾಲಿಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಲಾಗುವುದು. ಅಲ್ಲದೆ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈಗಾಗಲೇ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಸಾಲಿ ಗ್ರಾಮ ಮಹಾವೀರ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗುವುದು. ಕಟ್ಟಡ ಹಾಗೂ ನಿವೇಶನ ಕಳೆದುಕೊಂಡಿರುವ ಮಾಲೀಕರಿಗೆ ಅಂದಾಜು 10 ಕೋಟಿ ರೂ. ಪರಿಹಾರದ ಹಣ ಸದ್ಯದಲ್ಲೇ ಸೇರಲಿದೆ. ಅಲ್ಲದೆ ಮೂಡಲಬೀಡು-ಕರ್ಪೂರವಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಹಣದಲ್ಲಿ ಕಾಟ್ನಾಳು ಕೆರೆ ಏರಿ, ಕೋಡಿಯೂ ಅಭಿವೃದ್ಧಿ ಗೊಳ್ಳಲಿದೆ ಎಂದು ಹೇಳಿದರು.

ದೇಗುಲ ಜೀರ್ಣೋದ್ಧಾರ: ಮೂಡಲ ಬೀಡು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯ ನಿರ್ಮಾಣಕ್ಕೆ ಈಗಾಗಲೇ 10 ಲಕ್ಷ ರೂ. ಅನುದಾನ ನೀಡಲಾಗಿದ್ದು, ಮತ್ತೆ 20 ಲಕ್ಷ ರೂ. ಹೆಚ್ಚುವರಿ ಅನುದಾನ ಮಂಜೂರು ಮಾಡುವ ಮೂಲಕ ದೇಗುಲ ವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸ ಲಾಗುವುದು ಎಂದರು.

ಧನುಷ್ಕೋಟಿಗೆ ಜಿಪ್‍ಲೈನ್: ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣ ಚುಂಚನ ಕಟ್ಟೆಯಲ್ಲಿ ಧನುಷ್ಕೋಟಿ ಜಲಪಾತಕ್ಕೆ ಜಿಪ್‍ಲೈನ್ ಅಳವಡಿಕೆ, ಎತ್ತರದ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಸೇರಿದಂತೆ ಹತ್ತು-ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿದೆ. ಮುಂದಿನ ವರ್ಷ ಜ.14 ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡುವರು ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಚಿವರು ಸಾಲಿಗ್ರಾಮ ಮಹಾವೀರ ರಸ್ತೆ ಅಗಲೀಕರಣಕ್ಕೆ ಕಟ್ಟಡ ಹಾಗೂ ನಿವೇಶನ ಕಳೆದುಕೊಂಡ ಮಾಲೀಕ ರೊಂದಿಗೆ ಪರಿಹಾರ ವಿತರಣೆ ಸಂಬಂಧ ಚರ್ಚಿಸಿದರು. ಬಳಿಕ 5 ಲಕ್ಷ ರೂ.ವೆಚ್ಚದ ಶುದ್ಧ ಕುಡಿಯುವ ನೀರು ಘಟಕದ ಉದ್ಘಾಟನೆ ಹಾಗೂ ಸಾಲಿಗ್ರಾಮ ದೊಡ್ಡಕೆರೆ ಹಳ್ಳಕ್ಕೆ 15 ಲಕ್ಷ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಗ್ರಾಪಂ ಅಧ್ಯಕ್ಷ ಸತೀಶ್, ಉಪಾಧ್ಯಕ್ಷೆ ಪಿಂಕಿಸ್ವಾಮಿ, ಎಪಿಎಂಸಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಕರ್ಪೂರವಳ್ಳಿ ಗ್ರಾಪಂ ಅಧ್ಯಕ್ಷ ಪ್ರಸನ್ನ, ಮಾಜಿ ಅಧ್ಯಕ್ಷ ಎಸ್.ಆರ್.ಪ್ರಕಾಶ್, ಪಿಡಿಓ ಹೆಚ್.ಡಿ.ಮಂಜುನಾಥ್, ಸದಸ್ಯ ಮಂಜುನಾಥ್, ನಾಗೇಂದ್ರ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಅಣ್ಣೇಗೌಡ, ಜೆಡಿಎಸ್ ಹೋಬಳಿ ಅಧ್ಯಕ್ಷ ತಿಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ಲಾಲೂಜಿ, ಮುಖಂಡರಾದ ಅಯಾಜ್ ಅಹ್ಮದ್, ಎಸ್.ಪಿ.ಆನಂದ್, ವಸಂತ್, ಸರಗೂರು ನವೀನ್, ಹಾರಂಗಿ ನಾಲಾ ಎಇ ಈಶ್ವರ್, ಲೋಕೋಪಯೋಗಿ ಎಇಇ ಪ್ರಸಾದ್, ಎಇ ಕೃಷ್ಣಮೂರ್ತಿ ಇತರರಿದ್ದರು.

Translate »