ಜಿಟಿಡಿ ನಮ್ಮ ನಾಯಕರು, ಅವರು ನನ್ನನ್ನ ಬೈಯೋದು ಹೊಸದೇನಲ್ಲ….
ಮೈಸೂರು

ಜಿಟಿಡಿ ನಮ್ಮ ನಾಯಕರು, ಅವರು ನನ್ನನ್ನ ಬೈಯೋದು ಹೊಸದೇನಲ್ಲ….

September 14, 2019

ಮೈಸೂರು,ಸೆ.13(ಆರ್‍ಕೆಬಿ)- ಜಿ.ಟಿ.ದೇವೇ ಗೌಡರು ನಮ್ಮ ನಾಯಕರು. ಅವರು ನನ್ನನ್ನು ಬೈಯೋದು ಹೊಸದೇನಲ್ಲ. ಈ ಹಿಂದೆ ಚುನಾವಣೆ ಯಲ್ಲೂ ಬೈದಿದ್ರು. ಅವರು ನಮ್ಮ ಜೊತೆಗೇ ಇರು ತ್ತಾರೆ. ಅವರಿಗಾಗಿರುವ ನೋವನ್ನು ಸರಿಪಡಿಸು ತ್ತೇವೆ. ಏನೇ ತಪ್ಪು ಮಾಡಿದ್ರೂ ಎಲ್ಲವನ್ನು ಕ್ಷಮಿಸು ವುದು ಜೆಡಿಎಸ್ ಪಕ್ಷದಲ್ಲಿ ಮಾತ್ರ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಇಂದಿಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅದೃಷ್ಟದ ಸಿಎಂ. ಅವರಿಗೆ ಕಷ್ಟವೇ ಗೊತ್ತಿಲ್ಲ ಎಂಬ ಜಿ.ಟಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೊಡ್ಡಗೌಡರ ಶ್ರಮದಿಂದ ಹೆಚ್‍ಡಿಕೆ ಸಿಎಂ ಆದರು. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಅವರು ಸಿಎಂ ಆದ ಕಾರಣ ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡರು, ಕೆ.ಆರ್.ನಗರದಲ್ಲಿ ನಾನು ಶಾಸಕ, ಮಂತ್ರಿಯೂ ಆದೆವು. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅನು ಭವಿಸಿದ ನೋವು, ಕಷ್ಟ ಏನೆಂಬುದು ನಮಗೆ ಚೆನ್ನಾಗಿ ಗೊತ್ತು. ನಾನು ಅವರ ಹತ್ತಿರ ಇದ್ದ ಕಾರಣ ಅವರ ನೋವನ್ನು ಚೆನ್ನಾಗಿ ಬಲ್ಲೆ ಎಂದರು. ಅಧಿಕಾರ ಇರಲಿ, ಬಿಡಲಿ, ನಾನಂತೂ ಪಕ್ಷಕ್ಕೆ ನಿಷ್ಠನಾಗಿ ಇರುತ್ತೇನೆ ಎಂದು ಹೇಳಿದರು.

ಮೊದಲು ಅತೃಪ್ತ ಶಾಸಕರನ್ನು ಸಮಾಧಾನಪಡಿಸಲಿ: ಜಿ.ಟಿ.ದೇವೇಗೌಡರ ಜೊತೆಗೆ 27 ಶಾಸಕರು ಬಂದರೂ ಸ್ವೀಕಾರ ಮಾಡುವುದಾಗಿ ಹೇಳಿರುವ ಸಚಿವ ವಿ.ಸೋಮಣ್ಣ ಅವರ ಹೇಳಿಕೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ತೀಕ್ಷ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈಗಾ ಗಲೇ ಅಲ್ಲಿಗೆ ಹೋಗಿರುವ ಅತೃಪ್ತ ಶಾಸಕರನ್ನು ಮೊದಲು ದಡ ಸೇರಿಸಲಿ. ನಂತರ ಮತ್ತಷ್ಟು ಶಾಸಕರನ್ನು ಸ್ವೀಕಾರ ಮಾಡಲಿ. ಬಿಜೆಪಿ ಹೈಕಮಾಂಡ್ ಗಟ್ಟಿಯಾಗಿದೆ. ಅವರ ಬಳಿ ಇಡಿ, ಐಟಿ ಇವೆ. ಹೀಗಾಗಿ ಬಿಜೆಪಿ ಶಾಸಕರು ಅಲು ಗಾಡುತ್ತಿಲ್ಲ. ಬಿಜೆಪಿ ಸರ್ಕಾರ ದ್ವೇಷದ ರಾಜ ಕಾರಣ ಮಾಡಿದ್ರೆ ಕಷ್ಟ ಎಂದು ಸಚಿವ ಸೋಮಣ್ಣ ಅವರಿಗೆ ಸಾರಾ ತಿರುಗೇಟು ನೀಡಿದರು.

ಸೆ.21ಕ್ಕೆ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಭೆ: ಸೆ.21ರಂದು ಮೈಸೂರು ಜಿಲ್ಲಾ ಜೆಡಿಎಸ್ ಕಾರ್ಯ ಕರ್ತರ ಸಭೆ ನಡೆಯಲಿದೆ. ಮಾಜಿ ಸಚಿವ ಜಿ.ಟಿ. ದೇವೇಗೌಡರ ನೇತೃತ್ವದಲ್ಲಿಯೇ ಸಭೆ ನಡೆಯ ಲಿದೆ. ನಿನ್ನೆ ನಡೆದದ್ದು ಮೈಸೂರು ನಗರ ಮಟ್ಟದ ಕಾರ್ಯಕರ್ತರ ಸಭೆ. ಪಕ್ಷ ಸಂಘಟನೆಯ ಹಿನ್ನೆಲೆ ಯಲ್ಲಿ 21ರಂದು ಜಿಲ್ಲಾ ಮಟ್ಟದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾಗವ ಹಿಸಲಿದ್ದಾರೆ. ಅಲ್ಲದೆ ಜಿಲ್ಲೆಯ ಜಿಪಂ ಸದಸ್ಯರು, ತಾಲೂಕು ಪಂಚಾಯಿತಿಗಳ ಸದಸ್ಯರು ಸೇರಿದಂತೆ ಪಕ್ಷದ ಎಲ್ಲಾ ಕಾರ್ಯಕರ್ತರೂ ಭಾಗವಹಿ ಸಲಿದ್ದಾರೆ ಎಂದರು.

ಹುಣಸೂರಲ್ಲಿ ಜಿ.ಡಿ.ಹರೀಶ್‍ಗೌಡರಿಗೆ ಮೊದಲ ಆದ್ಯತೆ: ಹುಣಸೂರಿನಲ್ಲಿ ಜಿ.ಟಿ. ದೇವೇ ಗೌಡರ ಪುತ್ರ ಜಿ.ಟಿ.ಹರೀಶ್‍ಗೌಡ ಪಕ್ಷದ ಮೊದಲ ಆಯ್ಕೆ. ಅವರು ಒಪ್ಪದಿದ್ದರೆ ಪರ್ಯಾಯ ಚಿಂತನೆ ನಡೆಸಲಾಗುವುದು ಎಂದರು. ಹುಣಸೂರಿನಲ್ಲಿ ಜಿ.ಟಿ.ದೇವೇಗೌಡರು ಶಾಸಕರಾಗಿದ್ದರು. ಹಾಗಾಗಿ ನಮ್ಮ ಆದ್ಯತೆ ಅವರ ಪುತ್ರ ಹರೀಶ್ ಗೌಡರಿಗೆ. ಹುಣಸೂರಿನಲ್ಲಿ ಜೆಡಿಎಸ್ ಗಟ್ಟಿ ಯಾಗಿದೆ ಎಂದು ಹೇಳಿದರು.

ಕುಮಾರಸ್ವಾಮಿ ಸಲಹೆ ಸ್ವೀಕರಿಸಲಿ: ರಾಜ್ಯದಲ್ಲಿ ಎರಡು ಬಾರಿ ಸಿಎಂ ಆಗಿ ಅನುಭವ ಹೊಂದಿ ರುವ ಹೆಚ್.ಡಿ.ಕುಮಾರಸ್ವಾಮಿ ಅವರ ಸಲಹೆ ಯನ್ನು ಸಚಿವ ಸೋಮಣ್ಣ ಸ್ವೀಕರಿಸಲಿ. ರಾಜ್ಯ ದಲ್ಲಿ ಪ್ರವಾಹ ಉಂಟಾಗಿ ಜನ ಕಷ್ಟಕ್ಕೆ ತುತ್ತಾಗಿ ದ್ದಾರೆ, ನಿಮ್ಮ ವಸತಿ ಇಲಾಖೆಯ ಪ್ರಯೋಜನ ಅಲ್ಲಿ ನೀಡಿ ಎಂದು ಸಾ.ರಾ.ಮಹೇಶ್ ಹೇಳಿದರು.
ಸಚಿವರು ದಸರಾಕ್ಕೆ ಮಾತ್ರ ಸೀಮಿತವಾಗ ಬಾರದು ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿರುವ ಕುಮಾರಸ್ವಾಮಿ ಅವರಿಗೆ ಜನರ ನೋವು ಏನು ಎಂಬುದು ಗೊತ್ತಿದೆ. ಹೀಗಾಗಿ ರಾಜ್ಯದ ಜನರ ಪರಿಸ್ಥಿತಿ ನೋಡಿ ಈ ರಾಜ್ಯದ ಜನತೆಗೆ ನೆರವಾಗಿ ಎಂದು ಸೋಮಣ್ಣಗೆ ಸಲಹೆ ನೀಡಿದರು.

Translate »