ದಸರಾ ಆನೆ ಹಾಗೂ ಕುದುರೆಗಳಿಗೆ ಸಿಡಿಮದ್ದು ತಾಲೀಮು
ಮೈಸೂರು

ದಸರಾ ಆನೆ ಹಾಗೂ ಕುದುರೆಗಳಿಗೆ ಸಿಡಿಮದ್ದು ತಾಲೀಮು

September 14, 2019

ಮೈಸೂರು,ಸೆ.13(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜ ಪಡೆ ಹಾಗೂ ಅಶ್ವಪಡೆಗೆ ಶುಕ್ರವಾರ ಅರ ಮನೆಯ ವರಾಹ ಗೇಟ್ ಬಳಿಯಿ ರುವ ವಾಹನ ನಿಲುಗಡೆಯ ಸ್ಥಳದಲ್ಲಿ ಈ ಸಾಲಿನ ಮೊದಲ ಸಿಡಿಮದ್ದು ಸಿಡಿಸುವ ತಾಲೀ ಮನ್ನು ಯಶಸ್ವಿಯಾಗಿ ನಡೆಸಲಾಯಿತು.

ಜಂಬೂಸವಾರಿ ಹಾಗೂ ಬನ್ನಿ ಮಂಟ ಪದ ಪಂಜಿನ ಕವಾಯಿತು ವೇಳೆ ವಿಜ ಯದ ಸಂಕೇತವಾಗಿ 21 ಸುತ್ತು ಕುಶಾಲ ತೋಪು ಸಿಡಿಸುವ ಪರಂಪರೆಯಿದೆ. ಈ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆ ಯಲ್ಲಿ ಜನಸಂದಣಿಯ ನಡುವೆ ಸಾಗಲಿ ರುವ ಆನೆ, ಕುದುರೆಗಳು ಕುಶಾಲ ತೋಪಿನ ಶಬ್ಧಕ್ಕೆ ಹೆದರದಂತೆ ತರಬೇತಿ ನೀಡುವುದ ಕ್ಕಾಗಿ ಸಿಡಿಮದ್ದಿನ ತಾಲೀಮು ನಡೆಸಲಾಗು ತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ 3 ಬಾರಿ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗುತ್ತದೆ. ಇಂದು ನಡೆಸಿದ ಮೊದಲ ತಾಲೀಮಿನಲ್ಲಿ 2ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಧನಂ ಜಯ ಹಾಗೂ 3 ಹೊಸ ಆನೆಗಳಾದ ಈಶ್ವರ, ಲಕ್ಷ್ಮೀ ಹಾಗೂ ಜಯಪ್ರಕಾಶ ಬೆದರಿದವು. ಬಹುತೇಕ ಕುದುರೆಗಳು ಸಿಡಿಮದ್ದಿನ ಶಬ್ದಕ್ಕೆ ವಿಚಲಿತಗೊಂಡವು. ಎಆರ್‍ಎಸ್‍ಐ ಕುಮಾರ ಸ್ವಾಮಿ ನೇತೃತ್ವದಲ್ಲಿ ಪಿರಂಗಿ ದಳದ 30 ಮಂದಿ ಸಿಎಆರ್ ಪೊಲೀಸರು 6 ಪಿರಂಗಿ ಗಳ ಮೂಲಕ 3 ಸುತ್ತು ಹಾಗೂ ಕೊನೆ ಯಲ್ಲಿ 3 ಪಿರಂಗಿಯಲ್ಲಿ ತಲಾ ಒಂದೊಂ ದರಂತೆ ಒಟ್ಟು 21 ಸಿಡಿಮದ್ದನ್ನು ಸಿಡಿ ಸುವ ಮೂಲಕ ಗಜಪಡೆ ಹಾಗೂ ಅಶ್ವಾ ರೋಹಿ ಪಡೆಗೆ ಸ್ಫೋಟ ಶಬ್ದದ ತಾಲೀಮು ನೀಡಿದರು. ಸಿಡಿಮದ್ದು ಸಿಡಿಸಿ ಆನೆಗಳಿಗೆ ತಾಲೀಮು ನೀಡುವುದಕ್ಕಾಗಿ ವರಾಹ ಗೇಟ್ ಬಳಿಯಿರುವ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿತ್ತು. ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ ನೇತೃತ್ವದ 11 ಆನೆಗಳು ಹಾಗೂ ಅಶ್ವ್ವಾರೋಹಿ ದಳದ 25 ಕುದುರೆಗಳನ್ನು ಸಾಲಾಗಿ ನಿಲ್ಲಿಸಿ ಶುಕ್ರವಾರ ಮಧ್ಯಾಹ್ನ 1.45ಕ್ಕೆ ತಾಲೀಮು ಆರಂಭಿಸಲಾಯಿತು. ಮೊದಲ ತಾಲೀಮಾಗಿದ್ದರಿಂದ 6 ಪಿರಂಗಿ ಯಲ್ಲಿ ಒಂದೊಂದು ಸಿಡಿಮದ್ದು ಸಿಡಿ ದಾಗ ಕೆಲ ಸಮಯದ ನಂತರ ಮತ್ತೊಂದು ಸುತ್ತು ಸಿಡಿಮದ್ದು ಸಿಡಿಸಿ ಆನೆ, ಕುದುರೆ ಗಳ ವರ್ತನೆಯಲ್ಲಿ ಚೇತರಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿತ್ತು. ಅಂತಿಮವಾಗಿ 21 ಸಿಡಿಮದ್ದನ್ನು ಸಿಡಿಸಲಾಯಿತು. ಇಂದಿನ ತಾಲೀಮಿನಲ್ಲಿ 1ಕೆಜಿ 250 ಗ್ರಾಂ ಗನ್ ಪೌಡರ್‍ನಿಂದ ತಯಾರಿಸಿದ್ದ ಸಿಡಿಮದ್ದು ಬಳಕೆ ಮಾಡಿದ್ದರಿಂದ ಶಬ್ಧದ ಪ್ರಮಾಣ ಕಡಿಮೆಯಿತ್ತು. ಮೊದಲ ಬಾರಿಗೆ ಬಂದಿ ರುವ ಈಶ್ವರ, ಲಕ್ಷ್ಮೀ, ಜಯಪ್ರಕಾಶ್, 2ನೇ ಬಾರಿ ಬಂದಿರುವ ಧನಂಜಯ ಹಾಗೂ ದುರ್ಗಾಪರಮೇಶ್ವರಿ ಆನೆಯನ್ನು ಮರಕ್ಕೆ ಕಟ್ಟಿಹಾಕಲಾಗಿತ್ತು. ಉಳಿದಂತೆ ಕ್ಯಾಪ್ಟನ್ ಅರ್ಜುನ ಹಾಗೂ ಬಲರಾಮ ನಡುವೆ ಕಾವೇರಿ, ವಿಜಯ, ಗೋಪಿ, ವಿಕ್ರಮ ಆನೆ ಕಟ್ಟಿ ಹಾಕಿರದೇ ಸಾಲಾಗಿ ನಿಲ್ಲಿಸಲಾಗಿತ್ತು.

ಮೂರು ಸುತ್ತುಗಳಲ್ಲಿ ಸಿಡಿಮದ್ದು ಸಿಡಿಸುವಾಗ ಹಂತಹಂತವಾಗಿ ಆನೆ ಗಳನ್ನು ಪಿರಂಗಿಗಳ ಸಮೀಪಕ್ಕೆ ಕರೆ ತರಲಾಯಿತು. ಈ ಆರು ಆನೆಗಳು ಶಬ್ಧಕ್ಕೆ ಬೆದರದೇ ಸುಮ್ಮನಿದ್ದವು.

ಸಿಡಿಮದ್ದಿನ ತಾಲೀಮನ್ನು ವೀಕ್ಷಿಸಲು ಎಡಿಜಿಪಿ ಅಮರ್ ಕುಮಾರ್ ಪಾಂಡೆ, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲ ಕೃಷ್ಣ, ಡಿಸಿಎಫ್ ಅಲೆಗ್ಸಾಂಡರ್, ಡಿಸಿಪಿ ಎಂ.ಮುತ್ತುರಾಜ್, ಅರಮನೆ ಭದ್ರತಾ ಮಂಡಳಿ ಎಸಿಪಿ ಚಂದ್ರಶೇಖರ್, ಎಸಿಪಿ ಸುರೇಶ್, ಆರ್‍ಎಫ್‍ಒ ಸುರೇಂದ್ರ, ಪಶು ವೈದ್ಯ ಡಾ.ಡಿ.ಎನ್.ನಾಗರಾಜು ಇನ್ನಿತ ರರು ಆಗಮಿಸಿದ್ದರು. ವಿವಿಧೆಡೆಗಳಿಂದ ಅರಮನೆ ವೀಕ್ಷಿಸಲು ಆಗಮಿಸಿದ್ದ ಪ್ರವಾಸಿ ಗರು ಸಿಡಿಮದ್ದು ತಾಲೀಮನ್ನು ಕುತೂಹಲ ದಿಂದ ರಸ್ತೆ ಬದಿಯಲ್ಲಿ ನಿಂತು ವೀಕ್ಷಿಸಿದರು.

Translate »