ಮೈಸೂರಲ್ಲಿ ನ.21ರಿಂದ 25ರವರೆಗೆ 15  ವರ್ಷದೊಳಗಿನವರ ಮುಕ್ತ ಚೆಸ್ ಪಂದ್ಯಾವಳಿ
ಮೈಸೂರು

ಮೈಸೂರಲ್ಲಿ ನ.21ರಿಂದ 25ರವರೆಗೆ 15  ವರ್ಷದೊಳಗಿನವರ ಮುಕ್ತ ಚೆಸ್ ಪಂದ್ಯಾವಳಿ

November 11, 2018

ದೇಶದ 300ಕ್ಕೂ ಹೆಚ್ಚು ಚೆಸ್ ಪಟುಗಳು ಭಾಗವಹಿಸುವ ನಿರೀಕ್ಷೆ
ಮೈಸೂರು: ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ನ.21ರಿಂದ 25ರವರೆಗೆ ಅಖಿಲ ಭಾರತ 15 ವರ್ಷದೊಳಗಿನವರ ಮುಕ್ತ ಚೆಸ್ ಪಂದ್ಯಾವಳಿ ಮೈಸೂರು ವಿಶ್ವವಿದ್ಯಾನಿಲಯದ ಜಿಮ್ನಾಸ್ಟಿಕ್ ಹಾಲ್‍ನಲ್ಲಿ ನಡೆಯಲಿದೆ ಎಂದು ಮೈಸೂರು ಚೆಸ್ ಕ್ಲಬ್‍ನ ಉಪಾಧ್ಯಕ್ಷ ನಾಗೇಂದ್ರ ಮುರಳೀಧರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪಂದ್ಯಾ ವಳಿಯ ವಿವರಗಳನ್ನು ನೀಡಿದ ಅವರು, 5 ದಿನಗಳ ಚೆಸ್ ಪಂದ್ಯಾವಳಿಗೆ ನ.21ರಂದು ಬೆಳಿಗ್ಗೆ 9.30 ಗಂಟೆಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸದಸ್ಯ ಎಂ.ಆರ್.ಜಯರಾಂ ಚಾಲನೆ ನೀಡಲಿದ್ದಾರೆ. ಮೈಸೂರು ಜಿಪಂ ಸಿಇಓ ಕೆ.ಜ್ಯೋತಿ ಇನ್ನಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿ ಯಲ್ಲಿ ದೇಶದ 300 ಮಂದಿ ಪ್ರಮುಖ ಚೆಸ್ ಪಟುಗಳು ಭಾಗವಹಿಸುತ್ತಿದ್ದು, ಒಟ್ಟಾರೆ 2.50 ಲಕ್ಷ ರೂ.ಗಳಷ್ಟು ಬಹುಮಾನ ವಿಜೇತರಿಗೆ ಲಭ್ಯವಾಗಲಿದೆ. ಒಟ್ಟು 8 ವಿಭಾಗಗಳಲ್ಲಿ ಸ್ವಿಸ್ ಲೀಗ್ ಮಾದರಿಯಲ್ಲಿ 9 ಸುತ್ತಿನಲ್ಲಿ ಪಂದ್ಯಗಳು ನಡೆಯಲಿವೆ. ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಬಹುಮಾನಗಳಿವೆ. ನ.25ರಂದು ಪಂದ್ಯಾವಳಿ ಸಮಾರೋಪಗೊಳ್ಳಲಿದೆ. ಅಂದೇ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ನೋಂದಣಿ ಹಾಗೂ ಹೆಚ್ಚಿನ ಮಾಹಿತಿಯನ್ನುwww.mysorech essclub. com.ಅಥವಾ Email:[email protected] ಮೂಲಕ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿ ಕೆ.ಜಿ.ಜಯಪ್ರಕಾಶ್, ಮೊ- 9880547121 ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ಮೈಸೂರು ಚೆಸ್‍ಕ್ಲಬ್‍ನ ಸಿ.ಕೆ.ಮುರಳೀಧರನ್, ಗೌರವಾಧ್ಯಕ್ಷ ಎಚ್.ಇ.ಶ್ರೀವರ, ಜಿಲ್ಲಾ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಲ.ಜಗನ್ನಾಥ್, ಕಾರ್ಯದರ್ಶಿ ಜಯಪ್ರಕಾಶ್ ಉಪಸ್ಥಿತರಿದ್ದರು.

Translate »