ಮೈಸೂರು: ಶತಮಾನಗಳಿಂದ ಕೇರಳದಲ್ಲಿ ನೆಲೆಸಿರುವ ಒಂದು ಪ್ರತ್ಯೇಕ ಶಾರೀರಿಕ ಸಾಧನೆಯ ಕೊಡುಗೆಯೇ ಕಳರಿ ಪಯಟ್ಟು ಎಂಬ ಯುದ್ಧ ಕಲೆ. ನಶಿಸುತ್ತಿರುವ ಈ ದೇಹಾಭ್ಯಾಸ ವಿಧಾನ, ಆರ್ಯ ದ್ರಾವಿಡ ಜನಾಂಗದಷ್ಟೆ ಪುರಾತನವಾದದ್ದು.
ಇಂತಹ ಕಲೆಗೆ ಸಂಬಂಧಿಸಿದಂತೆ ಡಿ.29 ಮತ್ತು 30ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 5ನೇ ರಾಷ್ಟ್ರೀಯ ಕಳರಿ ಪಯಟ್ಟು ಚಾಂಪಿಯನ್‍ಶಿಪ್ ನಡೆಯಲಿದೆ.
ಭಾರತೀಯ ಕಳರಿ ಪಯಟ್ಟು ಫೆಡರೇಷನ್ ಸಹಾಯಕ ಕಾರ್ಯ ದರ್ಶಿ ಡಾ.ಶಾಜಿ ಎಸ್.ಕೊಟ್ಯಾನ್ ಶನಿವಾರ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಇದುವರೆಗೂ ಕೇರಳದಲ್ಲಿ ನಡೆಯುತ್ತಿದ್ದ ಈ ಚಾಂಪಿಯನ್ ಶಿಪ್ ಪಂದ್ಯಾವಳಿ ಇದೇ ಮೊದಲ ಬಾರಿಗೆ ಕೇರಳ ರಾಜ್ಯದ ಹೊರಗೆ ನಡೆಯುತ್ತಿದ್ದು, ಅದರಲ್ಲೂ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ. ದೇಶದ 16 ರಾಜ್ಯಗಳಿಂದ ಸುಮಾರು 2 ಸಾವಿರ ಮಂದಿ ಕಳರಿ ಪಯಟ್ಟು ಪಟುಗಳು ಪಾಲ್ಗೊಂಡು ತಮ್ಮ ಸಾಮಥ್ರ್ಯ ಪ್ರದರ್ಶಿಸಲಿದ್ದಾರೆ. ಇವರಿಗೆ ಊಟ, ವಸತಿ ಇನ್ನಿತರ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.
ಡಾ.ಮನು ಮಾತನಾಡಿ, ವಿಶ್ವದ ಎಲ್ಲಾ ಸಮರ ಕಲೆಗಳ ಮೂಲ ಎಂದೇ ಕಳರಿ ಪಯಟ್ಟು ಪರಿ ಗಣಿತವಾಗಿದ್ದು, ದೇಶದ ಯೋಗ, ಆಯುರ್ವೇದಗಳು ಜಗತ್ ಪ್ರಸಿದ್ಧಿಯಾಗಿದೆ. ಅದೇ ರೀತಿ ಕಳರಿ ಪಯಟ್ಟನ್ನೂ ಈಗ ಪುನಶ್ಚೇ ತನಗೊಳಿಸುವ ನಿಟ್ಟಿನಲ್ಲಿ ಫೆಡರೇ ಷನ್ ಎಲ್ಲಾ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿ ಯಲ್ಲಿ ಕಳರಿ ಪಯಟ್ಟು ಪಟುಗಳು ಕೇರಳದ ಹೊರಗೆ ಪರಿಚಿತ ವಿರದ ಅತೀ ಅಪರೂಪದ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು. ಇತರೆ ರೀತಿಯ ಸಮರ ಕಲೆ ಕಲಿಯುತ್ತಿ ರುವವರಿಗೂ ನಗರದಲ್ಲಿ ಒಂದು ತಿಂಗಳ ತರಬೇತಿ ನೀಡಿ, ಅವರು ಸಹ ಪಾಲ್ಗೊಳ್ಳುವ ಅರ್ಹತೆ ಸಹ ದೊರಕಿಸಿಕೊಡಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಜಯನ್ ಗುರುಕುಲ್, ಇಬ್ರಾಹಿಂ ಗುರುಕುಲ್, ಮಹದೇವ್, ರಾಜೀವ್ ಉಪಸ್ಥಿತರಿದ್ದರು.