ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆ ಮಾಡಿದ್ದೇ ಟಿಪ್ಪು
ಮೈಸೂರು

ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆ ಮಾಡಿದ್ದೇ ಟಿಪ್ಪು

November 11, 2018

ನಂಜನಗೂಡು: ಸ್ವಾತಂತ್ರ್ಯ ಹೋರಾಟದ ಪರಿ ಕಲ್ಪನೆ ಶುರುವಾದುದ್ದೇ ಟಿಪ್ಪುವಿನಿಂದ. ಅವರ ಹೋರಾಟ ಸ್ವಾಭಿ ಮಾನದ ಸಂಕೇತ ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಟಿಪ್ಪು ಸುಲ್ತಾನ್ 269ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಸರ್ಕಾರ ಟಿಪ್ಪು ಜಯಂತಿ ಮಾತ್ರವಲ.್ಲ ಮೂವತ್ತಕ್ಕೂ ಹೆಚ್ಚು ಮಹನೀಯರ ಜಯಂತಿ ಆಚರಣೆ ಮಾಡಿದೆ. ಆದರೆ ಟಿಪ್ಪು ಜಯಂತಿಗೆ ಮಾತ್ರ ವಿರೋಧ ಸಲ್ಲದು ಎಂದ ಅವರು, ಭಯದ ವಾತಾವರಣದಲ್ಲಿ ಟಿಪ್ಪು ಜಯಂತಿ ಆಚರಿಸುತ್ತಿರುವುದು ವಿಪರ್ಯಾಸ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರೊ.ಡಾ. ಪುರುಷೋತ್ತಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಜಿಪಂ ಸದಸ್ಯೆ ಲತಾ ಸಿದ್ದಶೆಟ್ಟಿ, ನಗರಸಭೆ ಅಧ್ಯಕ್ಷೆ ಪುಷ್ಪ ಲತಾ ಕಮಲೇಶ್, ಉಪಾಧ್ಯಕ್ಷ ಪ್ರದೀಪ್, ತಹಶೀಲ್ದಾರ್ ದಯಾನಂದ್. ಶಿಕ್ಷಣಾಧಿಕಾರಿ ನಾರಾಯಣ್, ತಾಪಂ ಉಪಾಧ್ಯಕ್ಷ ಗೋವಿಂದ ರಾಜ್. ಎಪಿಎಂಸಿ ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ಹೆಚ್.ಎಸ್.ಮೂಗಶೆಟ್ಟಿ. ತಾಪಂ ಇಓ ಶ್ರೀಕಂಠರಾಜೇ ಅರಸ್, ನಗರಸಭೆ ಆಯುಕ್ತ ವಿಜಯ್, ನಗರಸಭೆ ಸದಸ್ಯ ರಾಮಕೃಷ್ಣ, ಮಂಜುನಾಥ್, ಚಂದ್ರಶೇಖರ್, ಖಾಲಿದ್, ಬಾಬು, ರಾಜೇಶ್, ಕಾಂಗ್ರೆಸ್ ಮುಖಂಡರಾದ ಅಕ್ಬರ್ ಅಲಿ, ಅಬ್ದುಲ್ ಖಾದರ್, ಶೌಕತ್ ಅಲಿ ಖಾನ್, ಗುರುಮಲ್ಲಪ್ಪ, ಮದುರ ದಾಸ್ ಮುಂತಾದವರಿದ್ದರು.

Translate »