ಪರಂಪರೆ ಬಿಂಬಿಸಿದ ಕಂಡಾಯ, ನೀಲಗಾರರ ಮೆರವಣಿಗೆ
ಮೈಸೂರು

ಪರಂಪರೆ ಬಿಂಬಿಸಿದ ಕಂಡಾಯ, ನೀಲಗಾರರ ಮೆರವಣಿಗೆ

November 11, 2018

ಮೈಸೂರು: ಮಂಟೇಸ್ವಾಮಿ ಪರಂಪರೆಯನ್ನು ಬಿಂಬಿಸುವ ಕಂಡಾಯಗಳ ಹಾಗೂ ನೀಲಗಾರರ ಮೆರ ವಣಿಗೆ ಶನಿವಾರ ವಿಜೃಂಭಣೆಯಿಂದ ನಡೆಯಿತು.

ತೋಟಗಾರಿಕಾ ಇಲಾಖೆ ಕರ್ಜನ್‍ಪಾರ್ಕ್ ಆವರಣ ದಲ್ಲಿ ಚಾಮರಾಜನಗರ, ಮಂಡ್ಯ, ಮೈಸೂರು ಸೇರಿ ದಂತೆ ಮತ್ತಿತರೆ ಕಡೆಗಳಿಂದ ಆಗಮಿಸಿದ್ದ ಮಂಟೇಸ್ವಾಮಿ ಪರಂ ಪರೆಯ ಸಿದ್ದಪ್ಪಾಜಿ, ರಾಚಪ್ಪಾಜಿ, ಚೆನ್ನಾಜಮ್ಮ, ದೊಡ್ಡಮ್ಮ ತಾಯಿ ಹೀಗೆ 40ಕ್ಕೂ ಹೆಚ್ಚು ಕಂಡಾಯಗಳನ್ನು ಹೂವಿ ನಿಂದ ಅಲಂಕರಿಸಿ, ಪೂಜೆ ನೆರವೇರಿಸಲಾಯಿತು. ನಂತರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕೊಂಬು ಕಂಸಾಳೆ, ಡೊಳ್ಳು ಕುಣಿತ, ನಗಾರಿ-ತಮಟೆ ಯೊಂದಿಗೆ ಹೊರಟ ಕಂಡಾಯ ಹಾಗೂ ನೀಲಗಾರರ ಮೆರವ ಣಿಗೆಯು ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ, ಮೆಟ್ರೋ ಪಾಲ್ ವೃತ್ತ ಮೂಲಕ ಸಾಗಿ ಕಲಾಮಂದಿರ ತಲುಪಿತು.

Translate »