ಟಿಪ್ಪು ಸುಲ್ತಾನ್ ರೈತ ಪರ ಆಡಳಿತಗಾರ
ಮೈಸೂರು

ಟಿಪ್ಪು ಸುಲ್ತಾನ್ ರೈತ ಪರ ಆಡಳಿತಗಾರ

November 11, 2018

ಹುಣಸೂರು:  ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆ ಯನ್ನು ಸೃಷ್ಟಿ ಮಾಡಿದ್ದೇ ಟಿಪ್ಪು. ರೈತರ ಬಗ್ಗೆ ಕಾಳಜಿಯಿಂದ ಭೂಮಿ ಒಡೆತನ, ಆರ್‍ಟಿಸಿ ವಿಧಾನ ಜಾರಿಗೆ ತಂದ ಮಹಾನ್ ರಾಷ್ಟ್ರನಾಯಕ ಎಂದು ಶಾಸಕ ಎ.ಎಚ್.ವಿಶ್ವನಾಥ್ ಬಣ್ಣಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ 269ನೇ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ರಾಷ್ಟ್ರಕ್ಕೆ ಸಕ್ಕರೆ ಮತ್ತು ಪರ್ಶಿಯನ್ ದೇಶದಿಂದ ರೇಷ್ಮೆ ತಂದಿದ್ದು, ಭೂ ಸುಧಾರಣೆ, ದಲಿತರಿಗೆ ಭೂಒಡೆತನ, ಹಿಂದೂ ದೇವಾಲಯ ಗಳ ಅಭಿವೃದ್ಧಿ ಮಾಡಿದ್ದು ಟಿಪ್ಪು ಸುಲ್ತಾನ್ ಎಂದು ಸ್ಮರಿಸಿದರು.
ಟಿಪ್ಪು ಹಿಂದೂ ವಿರೋಧಿ ಅಲ್ಲ. ಅರಮನೆ ಮುಂದೆಯೇ ಶ್ರೀರಂಗನಾಥಸ್ವಾಮಿ ದೇವಾ ಲಯವಿದೆ ಎಂದರು. ಮೂವರು ಮಾಜಿ ಮುಖ್ಯಮಂತ್ರಿಗಳು ಟಿಪ್ಪುವಿನ ವೇಷ ತೊಟ್ಟು, ಟೋಪಿ ಧರಿಸಿ, ಖಡ್ಗ ಹಿಡಿದು, ಟಿಪ್ಪು ರಾಷ್ಟ್ರದ ವೀರ ಎಂದು ಹೊಗಳಿ, ಟಿಪ್ಪುವಿನ ಸಮಾಧಿ ಮುಂದೆ ಕುಳಿತು ಪ್ರಾರ್ಥನೆ ಮಾಡಿದ್ದರು. ಅವರೇ ಇಂದು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಸಿದ್ದೇಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಭಾರ ತಹಶೀಲ್ದಾರ್ ರಾಜು, ತಾಪಂ ಇಓ ಕೃಷ್ಣಕುಮಾರ್, ಬಿಇಓ ನಾಗರಾಜ್, ಪೌರಾಯುಕ್ತ ಶಿವಪ್ಪನಾಯ್ಕ, ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮ್ ಕುಮಾರ್, ನಗರಸಭಾಧ್ಯಕ್ಷ ಹೆಚ್.ವೈ. ಮಹದೇವ್, ಮುಖಂಡರಾದ ಸುನಿತಾ ಜಯರಾಮೇ ಗೌಡ, ನಸ್ರುಲ್ಲಾ, ಶಿವಕುಮಾರ್, ಕಾಟನಾಯ್ಕ, ಫಜಲುಲ್ಲಾ, ಮಾದೇಗೌಡ, ಇದ್ರೀಶ್ ಅಹಮ್ಮದ್, ಬಸೀರ್‍ಅಹಮ್ಮದ್, ಪುಟ್ಟರಾಜು, ನಿಂಗರಾಜ್ ಮಲ್ಲಾಡಿ, ಡಿ.ಕುಮಾರ್, ಶಿವಶೇಖರ್, ಗಣೇಶ್ ಗೌಡ, ಸರ್ದಾರ್, ಸಾಹಿಜಮ, ಮೊಹಮ್ಮದ್ ಫಿರ್, ಹರಿಹರ ಆನಂದಸ್ವಾಮಿ, ಮುಸಾಯಿದ್, ಜಬ್ಬಾರ್, ಮಸೀದಿ ಗುರುಗಳಾದ ಖಯಿಮುದ್ದೀನ್ ಷಾ ಹಾಗೂ ಇನ್ನೂ ಅನೇಕರು ಭಾಗವಹಿಸಿದ್ದರು.

Translate »