ಮೂವರು ದುಷ್ಕರ್ಮಿಗಳಿಂದ ವ್ಯಕ್ತಿ ಸುಲಿಗೆ
ಮೈಸೂರು

ಮೂವರು ದುಷ್ಕರ್ಮಿಗಳಿಂದ ವ್ಯಕ್ತಿ ಸುಲಿಗೆ

November 11, 2018

ಮೈಸೂರು: ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ವ್ಯಕ್ತಿಯೊಬ್ಬರನ್ನು ಬೆದರಿಸಿ, ಸುಲಿಗೆ ಮಾಡಿರುವುದಾಗಿ ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರು ಮೂಲದ ಅರವಿಂದ್ ದೂರು ನೀಡಿದ್ದು, ನ.9ರ ರಾತ್ರಿ ಸುಮಾರು 12 ಗಂಟೆ ವೇಳೆಯಲ್ಲಿ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ, ಮೂವರು ಅಪರಿಚಿತರು ಸರ್ಕಾರಿ ಅತಿಥಿ ಗೃಹದ ಕಾಂಪೌಂಡ್ ಒಳಗೆ ಕರೆದು ಕೊಂಡು ಹೋಗಿ ಬ್ಲೇಡ್ ತೋರಿಸಿ, ಪರ್ಸ್‍ನಲ್ಲಿದ್ದ 2 ಸಾವಿರ ರೂ. ಹಣ, ಮೊಬೈಲ್, ಚಾರ್ಜರ್, ಹೆಡ್‍ಫೋನ್ ಹಾಗೂ ಬೆಳ್ಳಿ ಉಂಗುರವನ್ನು ಕಿತ್ತುಕೊಂಡರು. ಅಲ್ಲದೆ ಓರ್ವ ನನ್ನ ಎಟಿಎಂ ಕಾರ್ಡ್ ಕಿತ್ತುಕೊಂಡು ಹೋಗಿ 7 ಸಾವಿರ ಹಣ ಬಿಡಿಸಿ ಕೊಂಡು ಬಂದು, ನಂತರ ಮೂವರೂ ಪರಾರಿಯಾದರೆಂದು ತಿಳಿಸಿದ್ದಾರೆ. ಪೊಲೀ ಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »