ಮೈಸೂರಲ್ಲಿ ಇಂದಿನಿಂದ 6 ದಿನ `ಗಾನಸಿರಿ-ವೇದಾಂತ ಲಹರಿ’
ಮೈಸೂರು

ಮೈಸೂರಲ್ಲಿ ಇಂದಿನಿಂದ 6 ದಿನ `ಗಾನಸಿರಿ-ವೇದಾಂತ ಲಹರಿ’

November 11, 2018

ಮೈಸೂರು: ಮೈಸೂರಿನ ಕೃಷ್ಣಮೂರ್ತಿಪುರಂ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನ.11ರಿಂದ 16ರವರೆಗೆ `ಗಾನಸಿರಿ-ವೇದಾಂತ ಲಹರಿ’ ಭಾಗ -3 ಭಾವಿಸಮೀರ ಶ್ರೀ ವಾದಿರಾಜ ವೈಭವಂ ಸಂಗೀತ ಕಾರ್ಯಕ್ರಮ ನಡೆಯಲಿದೆ. ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಕಾರ್ಯಕ್ರಮ ಆಯೋ ಜಿಸಿದ್ದು, ಪರಮಪೂಜ್ಯ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳ ಸಾನ್ನಿಧ್ಯದಲ್ಲಿ ನವೆಂಬರ್ 11ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಪ್ರತಿದಿನ ಸಂಜೆ 5ರಿಂದ 8ರವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಾದಿರಾಜರು ರಚಿಸಿರುವ ಸಾಹಿತ್ಯಕ್ಕೆ ಸಂಗೀತ ನೀಡಿ, ಕಾರ್ಯಕ್ರಮದಲ್ಲಿ ಗಾಯನ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಎಸ್.ರವಿಕುಮಾರ್ ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.11ರಂದು ಸಂಜೆ 6ಕ್ಕೆ ಸಂಗೀತಾ ಕಟ್ಟಿ ಅವರ `ಜ್ಞಾನ-ಗಾನ ವೈಭವ’, 12ರಂದು `ನಾದ-ಮೋದ ಜುಗಲ್ ಬಂದಿ’, 13ರಂದು `ನಾದ-ಗಾನ-ವೈಭವ’, 14ರಂದು `ರಾಜಾವಧಾನ’, ಮನಸ್ಸಿನ ಏಕಾಗ್ರತೆ, ಬುದ್ಧಿಮತ್ತೆಯ ವೈಭವವನ್ನು ತೋರಿಸುವ ವಿನೂತನ ಕಾರ್ಯಕ್ರಮ, 15ರಂದು `ತ್ರಿವಿಕ್ರಮ ವೈಭವಂ’ (ನೃತ್ಯ-ಗಾನ-ಪ್ರವಚನ)ದಲ್ಲಿ ಬೆಂಗಳೂರಿನ ವೈಷ್ಣವಿ ನಾಟ್ಯಶಾಲೆ ತಂಡದಿಂದ ನೃತ್ಯ ಕಾರ್ಯಕ್ರಮ, ನ.16 ರಂದು `ದಾಸರ ಪದಗಳ ಅಂತ್ಯಾಕ್ಷರಿ’, ಬಳಿಕ ಸಂಜೆ 6.30 ಗಂಟೆಗೆ ಸಮಾರೋಪ ಸಮಾರಂಭ, ಶ್ರೀಪಾದಂಗಳ ವರಿಗೆ ನಾಣ್ಯದಿಂದ ತುಲಾಭಾರ ಹಾಗೂ ಪುಷ್ಪವೃಷ್ಟಿ, ಮೈಸೂರಿನ ಹಿರಿಯ ವಿದ್ವಾಂಸ ರಾದ ವಿದ್ವಾನ್‍ಪಿ.ಎಸ್.ಶೇಷಗಿರಿ ಆಚಾರ್ಯ ಮತ್ತು ಡಾ.ಸಿ.ಎಚ್.ಶ್ರೀನಿವಾಸಮೂರ್ತಿ ಆಚಾರ್ಯ ಅವರಿಗೆ ಸನ್ಮಾನ ನಡೆಯಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಯಶ್ರೀ ರವಿಕುಮಾರ್, ರಾಘವೇಂದ್ರ ಹತ್ವಾರ್, ಪ್ರಸಾದ್ ಉಪಸ್ಥಿತರಿದ್ದರು.

Translate »