ಚಾಮರಾಜನಗರ: ಪ್ರಪಂಚದಲ್ಲಿ ತಂತ್ರಜ್ಞಾನ ಬಳಸಿದ ಮೊದ ಲಿಗ ಟಿಪ್ಪು ಸುಲ್ತಾನ್ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ದಲ್ಲಿ ಶನಿವಾರ ಆಯೋಜಿಸಿದ್ದ ಹಜûರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಅಪ್ರತಿಮ ವೀರ ಟಿಪ್ಪು ಸುಲ್ತಾನ್. ಮಹಾನ್ ಹೋರಾಟಗಾರನಾಗಿದ್ದ ಟಿಪ್ಪು, ಅಂದೇ ರಾಕೆಟ್ ತಂತ್ರಜ್ಞಾನವನ್ನು ಮೊದಲಿಗೆ ಬಳಕೆ ಮಾಡಿದರು. ಅಷ್ಟೇ ಅಲ್ಲದೇ ಅನೇಕ ತಂತ್ರ ಜ್ಞಾನ ಕೌಶಲ್ಯಗಳನ್ನು ಯುದ್ದದಲ್ಲಿ ಪರಿಣಾ ಮಕಾರಿಯಾಗಿ ಬಳಸಿ ಪ್ರಯೋಜನ ಪಡೆದರು. ಟಿಪ್ಪು ಸುಲ್ತಾನ್ ಚಿಕ್ಕ ವಯಸ್ಸಿ ನಿಂದಲೇ ಹಲವು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಅಲ್ಲದೇ ರಾಜನಾಗಿ ಒಳ್ಳೆಯ ಆಡಳಿತ ನೀಡಿದ್ದಾರೆ ಎಂದರು.
ಕ್ಯಾಲೆಂಡರ್, ಕಾಯಿನ್ (ನಾಣ್ಯ) ಅನ್ನು ಪರಿಚಯಿಸಿದ ಕೀರ್ತಿ ಟಿಪ್ಪು ಸುಲ್ತಾನ್‍ಗೆ ಸಲ್ಲುತ್ತದೆ. 7 ಇಲಾಖೆಗಳಲ್ಲಿ ಭೂ ಸುಧಾ ರಣೆ ಕಾಯ್ದೆ ಜಾರಿಗೆ ತರುವ ಪ್ರಯತ್ನ ವನ್ನು ಆ ಕಾಲದಲ್ಲಿಯೇ ಟಿಪ್ಪು ಮಾಡಿದ್ದರು ಎಂದರೆ ಅವರ ದೂರದೃಷ್ಟಿ ಎಷ್ಟಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇತಿಹಾಸ ತಿಳಿದುಕೊಳ್ಳದವರು ಟಿಪ್ಪು ಜಯಂತಿ ವಿರೋಧಿಸುತ್ತಿದ್ದಾರೆ. ಕೋಮು ವಾದಿಗಳು ಟಿಪ್ಪು ಜಯಂತಿ ಬೇಡ ಎನ್ನುತ್ತಿದ್ದಾರೆ. ಇದು ಅವರ ಸಣ್ಣತನ ತೋರಿಸುತ್ತದೆ. ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿದರೆ ಟಿಪ್ಪು ಬಗ್ಗೆ ತಿಳಿಯುತ್ತದೆ ಎಂದು ಬಿಜೆಪಿ ಹಾಗೂ ಆರ್‍ಎಸ್‍ಎಸ್ ಅನ್ನು ಟೀಕಿಸಿದರು.
ಟಿಪ್ಪು ರಾಷ್ಟ್ರಪ್ರೇಮಿ: ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್ ಓರ್ವ ರಾಷ್ಟ್ರಪ್ರೇಮಿ ಎಂದು ಕೊಂಡಾಡಿದರು. ಆ ಕಾಲದಲ್ಲಿಯೇ ಕಂದಾಯ ವಸೂಲಿ ಮಾಡುವ ಮೂಲಕ ಒಳ್ಳೆಯ ಆಡಳಿತ ಗಾರ ಎಂದು ಟಿಪ್ಪು ಸುಲ್ತಾನ್ ಹೆಸರು ಗಳಿಸಿದ್ದಾರೆ. ರಾಜಕೀಯ ಹಿತದೃಷ್ಟಿ ಯಿಂದ ಕೆಲವರು ಟಿಪ್ಪು ಜಯಂತಿ ವಿರೋಧಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಟಿಪ್ಪು ಸುಲ್ತಾನ್ ಖಡ್ಗ ಧರಿಸಿರಲಿಲ್ಲವೆ? ಜಗದೀಶ್ ಶೆಟ್ಟರ್ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರ ಲಿಲ್ಲವೆ? ಈಗ ಟಿಪ್ಪು ಜಯಂತಿ ಆಚರಣೆ ವಿರೋಧಿಸುವುದು ಸರಿಯಲ್ಲ ಎಂದರು. ಕೌರನೀಕ ಪುರುಷ: ಮುಖ್ಯ ಭಾಷಣ ಮಾಡಿದ ಹಿರಿಯ ಪತ್ರಕರ್ತ ಟಿ.ಗುರುರಾಜ್, ಕೌರನೀಕ ಪುರುಷನಾಗಿ ಬದುಕಿದ ಮನುಷ್ಯ ಟಿಪ್ಪು ಸುಲ್ತಾನ್ ಎಂದರು.
ಟಿಪ್ಪು ಸುಲ್ತಾನ್ ಯಾವುದೇ ಧರ್ಮದ ಮೇಲೆ ಹಲ್ಲೆ ನಡೆಸಿಲ್ಲ. ಆದರೂ ಟಿಪ್ಪು ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡ ಲಾಗುತ್ತಿದೆ. ಟಿಪ್ಪು ಮುಸ್ಲಿಂ ಎಂದು ಬರಿ ಮುಸಲ್ಮಾನರು ಆತನನ್ನು ಪ್ರೀತಿಸಬಾರದು. ಟಿಪ್ಪು ಮುಸ್ಲಿಂ ಎಂದು ಆತನನ್ನು ವಿನಾ ಕಾರಣ ವಿರೋಧಿಸಬಾರದು. ಟಿಪ್ಪುನನ್ನು ಮೊದಲು ಮನುಷ್ಯ ಎಂದು ನೋಡ ಬೇಕು ಎಂದರು.
ಉಪ್ಪಿಗೆ ಹುಳ ಬೀಳುವುದಿಲ್ಲ. ಸಿಹಿಗೆ ಹುಳು ಬೀಳುತ್ತದೆ. ಟಿಪ್ಪು ಹೆಸರಿನಲ್ಲಿಯೇ ಉಪ್ಪು ಇದೆ. ಹೀಗಾಗಿ ಯಾರೇ ಆಗಲಿ ಟಿಪ್ಪು ಹೆಸರಿಗೆ ಹುಳ ಬೀಳಿಸುವ ಪ್ರಯತ್ನ ನಡೆ ಸಿದರೆ ಅದು ಸಾಕಾರ ಆಗುವುದಿಲ್ಲ. ಟಿಪ್ಪು ಬಗ್ಗೆ ಒಳ್ಳೆಯ ಮಾತುಗಳನ್ನು ಆಡದಿದ್ದರೂ ಚಿಂತೆ ಇಲ್ಲ. ಅನಗತ್ಯವಾಗಿ ಆತನ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದು ಬೇಡ ಎಂದು ಟಿಪ್ಪು ಜಯಂತಿ ವಿರೋಧ ಮಾಡುವವರಿಗೆ ಟಾಂಗ್ ನೀಡಿದರು.
ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯ ಕೆರಹಳ್ಳಿ ನವೀನ್, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಧರ್ಮ ಗುರು ಮಹಮದ್ ಇಸ್ಮಾಯಿಲ್, ಡಿಸಿ ಬಿ.ಬಿ. ಕಾವೇರಿ, ಜಿಪಂ ಸಿಇಓ ಡಾ.ಕೆ.ಹರೀಶ್ ಕುಮಾರ್, ಎಸ್ಪಿ ಧರ್ಮೇಂ ದರ್‍ಕುಮಾರ್ ಮೀನಾ, ಎಡಿಸಿ ಕೆ.ಎಂ.ಗಾಯಿತ್ರಿ, ಮುಖಂಡ ರಾದ ಜಿಯಾವುಲ್ಲಾ ಷರೀಫ್, ಇರ್ಷಾದುಲ್ಲಾ ಖಾನ್, ಸೈಯದ್ ರಫಿ, ಸುಹೇಲ್ ಆಲಿ ಖಾನ್, ಮುನ್ನ, ಅತಿಕ್ ಅಹಮದ್, ಚಿನ್ನಮ್ಮ, ಮಹೇಶ್, ಕಲಿವುಲ್ಲಾ, ಅಬ್ರಾರ್ ಅಹಮದ್, ಸಯಿದುಲ್ಲಾ, ಆರ್.ಎಂ. ರಾಜಪ್ಪ, ಉಮೇರ್, ಕಮಲ್ ಖಾನ್ ಇತರರು ಉಪಸ್ಥಿತರಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್
ಚಾಮರಾಜನಗರ: ಇಂದಿಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
ಕಾರ್ಯಕ್ರಮ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಖ್ಯದ್ವಾರ ಹಾಗೂ ಮುಂಭಾಗ ಸುಮಾರು 50ಕ್ಕೂ ಹೆಚ್ಚು ಪೊಲೀಸರು ಹಾಗೂ ಹೋಂ ಗಾರ್ಡ್‍ಗಳನ್ನು ನಿಯೋಜಿಸಲಾಗಿತ್ತು. ಭವನದ ಮುಖ್ಯ ಬಾಗಿಲಿನಲ್ಲಿ ಎರಡು ಲೋಹ ಶೋಧಕ ಯಂತ್ರ ವನ್ನು ಹಾಕಲಾಗಿತ್ತು. ಇದಲ್ಲದೆ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸರ ಭದ್ರತೆ ಹಾಕ ಲಾಗಿತ್ತು. ಒಟ್ಟಾರೆ ಭಾರೀ ಪೊಲೀಸ್ ಬಂದೋಬಸ್ತ್‍ನಲ್ಲಿ ಟಿಪ್ಪು ಜಯಂತಿ ನಡೆಯಿತು.