ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರ ಜೊತೆಗೆ  ಪ್ರವಾಸೋದ್ಯಮ ಅಭಿವೃದ್ಧಿ : ಸಚಿವ ಸಾ.ರಾ.ಮಹೇಶ್
ಮೈಸೂರು

ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿ : ಸಚಿವ ಸಾ.ರಾ.ಮಹೇಶ್

January 21, 2019

ಮೈಸೂರು: ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರದ ಜೊತೆಗೆ ಸುತ್ತ ಮುತ್ತಲ ಪ್ರದೇಶವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂವಹನ ಪ್ರಕಾಶನ ಸಹ ಯೋಗದಲ್ಲಿ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಆರ್. ನಗರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಹೆಚ್.ಆರ್.ಚಂದ್ರ ಕಲಾ ಅಶೋಕ್ ಅವರ `ಕೃಷ್ಣರಾಜನಗರ ತಾಲೂಕಿನ ಗ್ರಾಮ ದೇವತೆಗಳು: ಸಾಂಸ್ಕøತಿಕ ಅಧ್ಯಯನ’ ಸಂಶೋದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಮ್ಮ ಹಿರಿಯರು ದೇವಾಲಯ ಕಟ್ಟಿದ್ದ ರಲ್ಲಿ, ಅವರ ಧಾರ್ಮಿಕ ಆಚರಣೆಗಳಲ್ಲಿ ವೈಜ್ಞಾನಿಕ ಕಾರಣಗಳೂ ಇದ್ದವು. ಆದರೆ ಈಗ ಪಾರ್ಕ್, ರಸ್ತೆ ಬದಿ ಹೀಗೆ ಸಿಕ್ಕ ಸಿಕ್ಕಲ್ಲಿ ಹೊಸ ದೇವಾಲಯಗಳು ನಿರ್ಮಾಣ ವಾಗುತ್ತವೆ. ದೇವರ ಬಳಿ ಹೋಗುವ ಬದಲು ದೇವರನ್ನೇ ತಮ್ಮ ಬಳಿಗೆ ಕರೆಸಿಕೊಳ್ಳು ವಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗೆ ಎಲ್ಲೆಂ ದರಲ್ಲಿ ಹೊಸ ದೇವಾಲಯಗಳನ್ನು ನಿರ್ಮಿ ಸುವ ಬದಲು, ಇತಿಹಾಸ, ಪರಂಪರೆ ಹೊಂದಿ ರುವ ಹಳೆಯ ದೇವಾಲಯಗಳನ್ನು ಜೀರ್ಣೋ ದ್ಧಾರ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮೈಸೂರು, ಮಂಡ್ಯ, ಹಾಸನ, ಚಾಮರಾಜ ನಗರ, ಕೊಡಗು ಇನ್ನಿತರ ಜಿಲ್ಲೆಗಳಲ್ಲಿರುವ ಐತಿಹಾಸಿಕ ದೇವಾಲಯಗಳ ನವೀಕರಣಕ್ಕೆ ನಿರ್ಧರಿಸಲಾಗಿದೆ. ಈಗಾಗಲೇ ಕೆ.ಆರ್.ನಗ ರದ ಅರ್ಕೇಶ್ವರ ದೇವಾಲಯ, ಚುಂಚನ ಕಟ್ಟೆ ದೇವಾಲಯ, ಚಾಮರಾಜನಗರ ಜಿಲ್ಲೆಯ ಮಧ್ಯರಂಗ, ಶ್ರೀರಂಗಪಟ್ಟಣ, ಮೇಲು ಕೋಟೆಯಲ್ಲಿ ದೇವಾಲಯಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಪ್ರವಾಸೋದ್ಯಮ ದೃಷ್ಟಿಯಿಂದ ದೇವಾ ಲಯಗಳ ಸುತ್ತಮುತ್ತಲ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಡಾ.ಚಂದ್ರಕಲಾ ಅವರ ತಾಲೂಕಿನ ಗ್ರಾಮ ದೇವತೆಗಳ ಬಗ್ಗೆ ಅಧ್ಯಯನ ನಡೆಸಿ ಕೃತಿ ರಚಿಸಿರುವುದು ಶ್ಲಾಘನಾರ್ಹ. ಪುಸ್ತಕ ವನ್ನು ಓದಿ ಮತ್ತಷ್ಟು ವಿಷಯಗಳನ್ನು ತಿಳಿದುಕೊಳ್ಳುತ್ತೇನೆ. ದೇವಾಲಯಗಳ ನವೀಕರಣಕ್ಕೆ ನಾವು ಸಿದ್ಧರಿದ್ದೇವೆ. ಅವಕಾಶವಿದ್ದರೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಒಂದಷ್ಟು ಪ್ರತಿಗಳನ್ನು ಖರೀ ದಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ ಅವರು, ಸುಳವಾಡಿಯ ದೇವಾಲಯದ ವಿಷ ಪ್ರಸಾದ ವಿತರಣೆ ದುರಂತದ ಹಿನ್ನೆಲೆ ಯಲ್ಲಿ ಚುಂಚನಕಟ್ಟೆ ರಥೋತ್ಸವದಲ್ಲಿ ಕಟ್ಟೆಚ್ಚರ ವಹಿಸಬೇಕಾಯಿತು. ಸಿಸಿ ಕ್ಯಾಮರಾ, ಪೊಲೀಸರ ಭದ್ರತೆಯಲ್ಲಿ ಪ್ರಸಾದ ತಯಾ ರಿಸಿ, ಮೊದಲು ಅಧಿಕಾರಿಗಳು ಸೇವಿಸಿ, ಬಳಿಕ ಭಕ್ತರಿಗೆ ವಿತರಿಸಲಾಯಿತು. ಎಲ್ಲಾ ಕಡೆ ಜಾತಿ, ದ್ವೇಷ ಮೇಲಾಗುತ್ತಿರುವುದ ರಿಂದ ಪ್ರಸಾದವನ್ನೂ ಅನುಮಾನಿಸುವ ದುರ್ಗತಿ ಬಂದಿದೆ ಎಂದು ವಿಷಾದಿಸಿದರು.

ಪುರುಷ ಪ್ರಧಾನ ವ್ಯವಸ್ಥೆ ಅಹಂಕಾರ: ಕೃತಿ ಕುರಿತು ಮಾತನಾಡಿದ ಜೆಎಸ್‍ಎಸ್ ಮಹಾವಿದ್ಯಾಪೀಠ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಪ್ರತಿಯೊಂದು ಊರಿ ನಲ್ಲೂ ಗ್ರಾಮ ದೇವತೆಗಳಿವೆ. ಗ್ರಾಮೀಣ ಜನರು ದೈವಶಕ್ತಿಯನ್ನು ನಂಬಿ ಬದುಕುತ್ತಿ ದ್ದಾರೆ. ಕೋಟ್ಯಾಂತರ ದೇವತೆಗಳ ನಡುವೆ ಗ್ರಾಮ ದೇವತೆಗೆ ಅಗ್ರಪೂಜೆ. ನಮ್ಮನ್ನು ರಕ್ಷಿಸುತ್ತಾಳೆಂಬ ಕ್ಷೇಮ ಭಾವನೆಯನ್ನು ಹೊಂದಿರುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀ ದೇವತೆಗಳೇ ಮೂಲ ಗ್ರಾಮ ದೇವತೆಗಳು. ಇದು ಮಾತೃ ಪ್ರಧಾನ ಸಮಾ ಜದ ಪ್ರತೀಕವೂ ಆಗಿದೆ. ಆದರೆ ದೇವರ ಮೂಲ, ಸೂಕ್ಷ್ಮತೆ, ಸತ್ಯವನ್ನು ಮರೆತು, ದೇವರು, ಧರ್ಮದ ವಿಚಾರವಾಗಿ ವ್ಯವಹರಿಸುತ್ತಿದ್ದೇವೆ. ಹಾಗೆಯೇ ದೇವಾಲಯಗಳಿಗೆ ಮಹಿಳೆಯರ ಪ್ರವೇಶ ನಿಷಿದ್ಧ, ಪುರುಷ ಪ್ರಧಾನ ವ್ಯವಸ್ಥೆಯ ಅಹಂಕಾರವಾಗಿದೆ ಎಂದು ಹೇಳಿದರು.

ಜನರಿಗೆ ಕ್ಷೇಮ ಭಾವನೆ ನೀಡುವ, ಅಂತಃಕರಣ ವುಳ್ಳ ಗ್ರಾಮ ದೇವತೆಗಳ ಕುರಿತಾದ ಮಾಹಿತಿಯನ್ನು ಕಲೆಹಾಕಿ, ವ್ಯವಸ್ಥಿತವಾಗಿ ಕಟ್ಟಿಕೊಟ್ಟಿರುವ ಡಾ.ಚಂದ್ರಕಲಾ ಅವರು, ವರ್ತಮಾನದಲ್ಲಿ ಈ ದೇವತೆಗಳು ಹೇಗೆ ಮುಖ್ಯವಾಗುತ್ತವೆ?. ಎಂಬು ದನ್ನು ನಂಬಿಕೆ, ಗೌರವಪೂರ್ವಕವಾಗಿ ದಾಖಲಿಸಿದ್ದಾರೆ. ಇದೊಂದು ಅಗತ್ಯ ಸಂಶೋದನಾ ಗ್ರಂಥವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪೆÇ್ರ.ಸಿ.ನಾಗಣ್ಣ, ಪ್ರಕಾಶಕ ಡಿ.ಎನ್.ಲೋಕಪ್ಪ, ಕೆ.ಆರ್.ನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಸಿ.ವೀರಭದ್ರಯ್ಯ, ಕೃತಿ ಕತೃ ಡಾ.ಹೆಚ್.ಆರ್.ಚಂದ್ರಕಲಾ ಅಶೋಕ್, ಲೇಖಕ ಲಕ್ಕೇಗೌಡ, ವೀರಶೈವ ಲಿಂಗಾಯತ ನೌಕರರ ಸಂಘದ ರಾಜ್ಯ ಪದಾಧಿಕಾರಿ ರಾಜಶೇಖರ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್.ನಾಗರಾಜು, ಮಾಜಿ ಅಧ್ಯಕ್ಷರಾದ ಎಂ.ಚಂದ್ರಶೇಖರ್, ಮಡ್ಡಿಕೆರೆ ಗೋಪಾಲ್, ಮುಂತಾದವರು ಇದ್ದರು.

Translate »