ಕುರುಬ ಸಮುದಾಯವನ್ನು ಸಂಘಟಿಸಿದ ಕೀರ್ತಿ ಸಿದ್ದರಾಮಯ್ಯರದ್ದು
ಮೈಸೂರು

ಕುರುಬ ಸಮುದಾಯವನ್ನು ಸಂಘಟಿಸಿದ ಕೀರ್ತಿ ಸಿದ್ದರಾಮಯ್ಯರದ್ದು

January 21, 2019

ಮೈಸೂರು: ಸಂತ ಭಕ್ತ ಕನಕದಾಸ ಜಯಂತಿಯನ್ನು ನಗರ ದಿಂದ ಗ್ರಾಮೀಣ ಪ್ರದೇಶದವರೆಗೂ ಆಚ ರಿಸುವ ಮೂಲಕ ಕುರುಬ ಸಮುದಾಯ ವನ್ನು ಸಂಘಟಿಸಿದ ಕೀರ್ತಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಶ್ಲಾಘಿಸಿದ್ದಾರೆ.

ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಕಾಗಿನೆಲೆ ಶಾಖಾ ಮಠದ ಆವರಣದಲ್ಲಿ ಭಾನುವಾರ `ಕನಕ ಶಕ್ತಿ’ ಮಹಿಳಾ ಕ್ಷೇಮಾ ಭಿವೃದ್ಧಿ ಸಂಘ ಆಯೋಜಿಸಿದ್ದ 531ನೇ ಭಕ್ತ ಕನಕದಾಸರ ಜಯಂತಿ ಮಹೋತ್ಸವ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ವರೆಗೂ ಕನಕದಾಸರ ಜಯಂತಿಯನ್ನು ಮಹಿಳಾ ಸಂಘಟನೆ ಆಯೋಜಿಸಿರುವುದು ಎಲ್ಲಿಯೂ ಕಂಡುಬಂದಿರಲಿಲ್ಲ. ಆದರೆ ಕನಕ ಶಕ್ತಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಕನಕದಾಸರ ಜಯಂತಿ ಹಮ್ಮಿಕೊಳ್ಳುವು ದರ ಮೂಲಕ ಮೊದಲ ಬಾರಿಗೆ ಮಹಿಳೆ ಯರೇ ಕನಕದಾಸರ ಜಯಂತಿಯನ್ನು ಆಚರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಸಮು ದಾಯದ ಮಹಿಳೆಯರು ಸಂಘಟಿತರಾ ಗಲು ಇದೊಂದು ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.

ಈ ಹಿಂದೆ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ಕನಕ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವುದಕ್ಕೆ ಕ್ರಮ ಕೈಗೊಂಡರು. ಅಂದಿ ನಿಂದ ಕನಕ ಜಯಂತಿಯು ನಗರ ಪ್ರದೇಶ ದಿಂದ ಜಿಲ್ಲಾ ಮಟ್ಟಕ್ಕೆ, ಜಿಲ್ಲೆಯಿಂದ ತಾಲೂಕು ಮಟ್ಟಕ್ಕೆ ಹಾಗೂ ಹಳ್ಳಿ-ಹಳ್ಳಿ ಗಳಲ್ಲೂ ಆಚರಿಸುವ ಮೂಲಕ ಕುರುಬ ಸಮುದಾಯವನ್ನು ಸಂಘಟಿಸಲಾಯಿತು. ದಾಸರಲ್ಲಿಯೇ ಕನಕದಾಸರು ಶ್ರೇಷ್ಠ ಎನಿಸಿ ದ್ದಾರೆ. ಕಂಡದ್ದನ್ನು ಕಂಡ ಹಾಗೆಯೇ ಹೇಳಿ ದ್ದಾರೆ. ಇದರಿಂದ ಕನಕದಾಸರು ಒಂದೇ ಸಮುದಾಯಕ್ಕೆ ಸೀಮಿತವಾಗಿಯೇ ಎಲ್ಲಾ ವರ್ಗಗಳ ಗೌರವಕ್ಕೆ ಪಾತ್ರವಾಗಿದ್ದಾರೆ.
ವ್ಯಾಸರಾಯರ ಶಿಷ್ಯರಾಗಿದ್ದ ಇವರು, ತಮಗೆ ಸಿಕ್ಕ ಕನಕ (ಆಭರಣ)ವನ್ನು ಹಂಚುವ ಮೂಲಕ ಕನಕದಾಸ ಎನಿಸಿದರು. ವ್ಯಾಸ ರಾಯರು ಶಿಷ್ಯರಿಗೆ ಬಾಳೆಹಣ್ಣೊಂದನ್ನು ಕೊಟ್ಟು ಯಾರೂ ನೋಡದ ಸ್ಥಳದಲ್ಲಿ ತಿಂದು ಬರುವಂತೆ ಸೂಚನೆ ನೀಡಿದ್ದರು. ಆದರೆ ಕನಕದಾಸರು ಮಾತ್ರ ಹಣ್ಣನ್ನು ತಿನ್ನದೇ ವಾಪಸ್ ತಂದಿದ್ದರು. ಉಳಿದವ ರೆಲ್ಲರೂ ಹಣ್ಣನ್ನು ತಿಂದಿದ್ದರು. ಇದನ್ನು ವ್ಯಾಸರಾಯರು ಪ್ರಶ್ನಿಸಿದ್ದಕ್ಕೆ ಕನಕದಾಸರು, ಎಲ್ಲಾ ಸ್ಥಳದಲ್ಲಿಯೂ ನಾನು ದೇವರನ್ನು ಕಂಡೆ. ಅದಕ್ಕಾಗಿ ಹಣ್ಣನ್ನು ತಿನ್ನಲು ಆಗ ಲಿಲ್ಲ ಎಂಬ ಉತ್ತರ ನೀಡಿದ ಮಹಾತ್ಮರಾಗಿ ದ್ದರು. ಇದರಿಂದ ವ್ಯಾಸರಾಯರ ಪ್ರೀತಿಗೆ ಪಾತ್ರರಾದರು ಎಂದು ವಿಶ್ಲೇಷಿಸಿದರು.

ಇದೇ ವೇಳೆ `ಕನಕ ಶಕ್ತಿ’ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಎಂ.ಎ. ಕಮಲ ಮಾತನಾಡಿ, ಕಳೆದ ಎರಡು ವರ್ಷ ದಿಂದ ಮಹಿಳೆಯರೇ ಇರುವ ಕ್ಷೇಮಾಭಿ ವೃದ್ಧಿ ಸಂಘವನ್ನು ಸ್ಥಾಪಿಸಿ ಸಂಘಟಿಸ ಲಾಗುತ್ತಿದೆ. ಈಗಾಗಲೇ 150ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದು, ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ವಿಸ್ತರಿಸುವುದಾಗಿ ತಿಳಿಸಿದರಲ್ಲದೇ, ಸಂಘದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವುದಾಗಿ ತಿಳಿಸಿದರು.

ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾ ನಂದಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಶಾಂತಮೂರ್ತಿ, ಹಿರಿಯ ವೈದ್ಯೆ ಡಾ. ಪಿ.ಎಸ್.ಸವಿತಾ, ಪಾಲಿಕೆ ಸದಸ್ಯೆ ಗೋಪಿ, ಹಿಂದುಳಿದ ವರ್ಗಗಳ ಜಾಗೃತಿ ಸಮಿತಿ ಅಧ್ಯಕ್ಷ ಕೆ.ಎಸ್.ಶಿವರಾಂ, ಬಿಎಸ್ ಎನ್‍ಎಲ್ ಸಂಸ್ಥೆಯ ಮಹದೇವ, ಕ್ಷೇಮಾ ಭಿವೃದ್ಧಿ ಸಂಘದ ಉಪಾಧ್ಯಕ್ಷೆ ದೀಪಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆಪರೇಷನ್ ಕಮಲದಿಂದ ಮೈತ್ರಿ ಸರ್ಕಾರಕ್ಕೆ ಅಪಾಯವಿಲ್ಲ

ಮೈಸೂರು: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಮಾಡಿ ವಿಫಲರಾಗಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಆಪರೇಷನ್ ಕಮಲದಿಂದ ಯಾವುದೇ ಅಪಾಯವಿಲ್ಲ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಸಿದ್ದಾರ್ಥನಗರದ ಶ್ರೀ ಕಾಗಿನೆಲೆ ಶಾಖಾ ಮಠದ ಆವರಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಆರಂಭದ ದಿನದಿಂದಲೂ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ನಿರಂತರವಾಗಿ ನಡೆಸುತ್ತಲೇ ಇದ್ದಾರೆ. ಅಸ್ಥಿರ ಗೊಳಿಸುವ ಸಂಚಿನಲ್ಲಿ ಕೇವಲ ಯಡಿಯೂರಪ್ಪ ಮಾತ್ರವಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ನೇರವಾಗಿ ಆಪರೇಷನ್ ಕಮಲ ಮಾಡಲು ಮುಂದಾಗಿದ್ದಾರೆ. ಹರಿಯಾಣದ ರೆಸಾರ್ಟ್‍ನಲ್ಲಿ ಬಿಜೆಪಿ ಶಾಸಕರನ್ನು ಕೂಡಿ ಹಾಕುವ ಪ್ರಮೇಯ ಇರಲಿಲ್ಲ. ಬಿಜೆಪಿ ನಾಯಕರು ಎಷ್ಟೇ ಸರ್ಕಸ್ ಮಾಡಿ ದರೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದರು.

ರೆಸಾರ್ಟ್ ರಾಜಕೀಯ ಒಳ್ಳೆ ಬೆಳವಣಿಯಲ್ಲ. ಕೋಟ್ಯಾಂತರ ರೂ ನೀಡಿ ಕುದುರೆ ವ್ಯಾಪಾರ ಮಾಡಲು ಬಿಜೆಪಿ ನಾಯಕರು ಮುಂದಾಗಿರುವುದರಿಂದ ನಮ್ಮ ಎಚ್ಚರಿಕೆಯಲ್ಲಿ ನಾವು ಇರೋದು ಒಳ್ಳೆಯದು. ಇಬ್ಬರು ಪಕ್ಷೇತರರು ಬೆಂಬಲ ವಾಪಸ್ ಪಡೆದ ಮಾತ್ರಕ್ಕೆ ಸರ್ಕಾರ ಬೀಳುವುದಿಲ್ಲ. ನಮಗೆ ಸಂಪೂರ್ಣ ಬೆಂಬಲ ಇದೆ. ನಾವು ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಲ್ಲ. ಬಿಜೆಪಿ ನಡೆಯನ್ನು ನಾವು ಖಂಡಿಸುತ್ತೇವೆ. ಆನಂದ್ ಸಿಂಗ್ ಮೇಲೆ ಹ¯್ಲÉ ವಿಚಾರ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕ ಸಭೆ ಚುನಾವಣೆ ಸಂಬಂಧ ನಾವು ರೆಸಾರ್ಟ್‍ನಲ್ಲಿ ಚರ್ಚೆ ಮಾಡುತ್ತಿz್ದÉೀವೆ. ಆನಂದ್ ಸಿಂಗ್ ಮೇಲೆ ಯಾವುದೇ ಹ¯್ಲÉ ನಡೆ ದಿಲ್ಲ. ನಾನು ಕೂಡ ಆನಂದ್ ಸಿಂಗ್ ಜೊತೆಯಲ್ಲಿ ಇz್ದÉೀ. ಹ¯್ಲÉ ಮಾಡಿz್ದÁರೆ ಅನ್ನೋದು ಸುಳ್ಳು ಎಂದರು.

ನಾನು ಆಕಾಂಕ್ಷಿ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪರ್ಧೆ ವಿಚಾರ ವಾಗಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿz್ದÉೀನೆ. ನಾನು ಮಾಗಡಿ, ಹೆಬ್ಬಾಳು ಕ್ಷೇತ್ರಗಳಲ್ಲಿ ಶಾಸಕನಾಗಿ ಸೇವೆ ಸಲ್ಲಿಸಿz್ದÉೀನೆ. ಕಳೆದ 12 ವರ್ಷಗಳಿಂದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಉತ್ತಮ ಒಡನಾಟದಲ್ಲಿz್ದÉೀನೆ. ಅಲ್ಲದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಐವರು ಶಾಸಕರಿದ್ದಾರೆ. ಈ ಹಿನ್ನೆಲೆಯಲ್ಲಿ ನಾನೇ ಆ ಭಾಗದ ಅಭ್ಯರ್ಥಿ ಯಾಗಬೇಕು ಎಂಬ ವಿಷಯ ಮಂಡನೆ ಮಾಡಿz್ದÉೀನೆ. ಆದರೆ, ಟಿಕೆಟ್ ಯಾರಿಗೆ ನೀಡಬೇಕು ಎಂದು ಎರಡೂ ಪP್ಷÀದ ವರಿಷ್ಠರು ತೀರ್ಮಾನ ಮಾಡ್ತಾರೆ. ಯಾರು ತ್ಯಾಗ ಮಾಡಬೇಕು ಅನ್ನೋದು ಬಳಿಕ ಗೊತ್ತಾಗಲಿದೆ ಎಂದರು.

Translate »