ಮೈಸೂರು ಜಿಲ್ಲಾ ಬ್ರಾಹ್ಮಣ  ಸಂಘದಿಂದ ಸ್ವಚ್ಛ ನಗರ ಅಭಿಯಾನ
ಮೈಸೂರು

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದಿಂದ ಸ್ವಚ್ಛ ನಗರ ಅಭಿಯಾನ

January 21, 2019

ಮೈಸೂರು: ಮೈಸೂರನ್ನು ಸ್ವಚ್ಛ ನಗರ ನಂ.1 ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಚಾಮುಂಡಿ ಪುರಂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ಕೈಗೊಳ್ಳ ಲಾಯಿತು. ಮನೆ ಮನೆಗೂ ತೆರಳಿ ಮೈಸೂರು ನಗರವನ್ನು ನಂ.1 ಸ್ಥಚ್ಛ ನಗರವಾಗಿ ಸಲು ಕಸ ವಿಲೇವಾರಿ ಕುರಿತು ಕರಪತ್ರಗಳನ್ನು ವಿತರಿಸಿ ಜನಜಾಗೃತಿ ಮೂಡಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಸ್ವಚ್ಛ ಸರ್ವೇಕ್ಷಣಾ ತಂಡವು ಈಗಾಗಲೇ ಸರ್ವೇಕ್ಷಣೆ ನಡೆಸುತ್ತಿದ್ದು, ಇದಕ್ಕಾಗಿ ಮೈಸೂರನ್ನು ಸಂಪೂರ್ಣ ಸ್ವಚ್ಛತೆ ಯಿಂದಿರುವಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ. ಸ್ವಚ್ಛ ಸರ್ವೇಕ್ಷಣಾ ಆ್ಯಪ್ ಸಹಾಯದಿಂದ ಮೊಬೈಲ್ ಮೂಲಕ ನೋಂದಣಿ ಮಾಡಿಕೊಂಡು ಮೈಸೂರನ್ನು ದೇಶ ದಲ್ಲಿಯೇ ನಂ.1 ಸ್ವಚ್ಛ ನಗರ ಸ್ಥಾನಕ್ಕೆ ತರುವುದು ಅಭಿಯಾನದ ಉದ್ಧೇಶವಾಗಿದೆ ಎಂದರು.

ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಮಾತನಾಡಿ, ಎಲ್ಲರೂ ಕೈಜೋಡಿಸಿದರೆ ಮೈಸೂರು ಸ್ವಚ್ಛನಗರಿ ಪಟ್ಟ ಪಡೆಯುವುದರಲ್ಲಿ ಸಂದೇಹವೇ ಇಲ್ಲ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು. ಪಾಲಿಕೆ ಮಾಜಿ ಸದಸ್ಯರಾದ ಸೌಭಾಗ್ಯ ಮೂರ್ತಿ, ಸದಸ್ಯರಾದ ಮುಳ್ಳೂರು ಸುರೇಶ್, ರಾಧಾಕೃಷ್ಣ, ರಂಗನಾಥ್, ಜ್ಯೋತಿ, ಅರವಿಂದ್, ಅಪೂರ್ವ ಸುರೇಶ್, ಶ್ರೀನಿವಾಸಪ್ರಸಾದ್, ಸಂದೀಪ್ ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.

Translate »