ಮೈಸೂರಲ್ಲಿ ಯೋಧರ ಚಿತ್ರಕಲಾ ಪ್ರದರ್ಶನ
ಮೈಸೂರು

ಮೈಸೂರಲ್ಲಿ ಯೋಧರ ಚಿತ್ರಕಲಾ ಪ್ರದರ್ಶನ

January 21, 2019

ಮೈಸೂರು: ಸೈನಿಕ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿ ಯಲ್ಲಿ ಶಿಕ್ಷಕ, ಕಲಾವಿದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ರಚಿಸಿರುವ `ಯೋಧರ ಚಿತ್ರ ಕಲಾ ಪ್ರದರ್ಶನ’ ಗಮನ ಸೆಳೆಯಿತು.

ಕಾರ್ಗಿಲ್ ಯುದ್ಧ, ಹುರಿ ದಾಳಿ ಸೇರಿ ದಂತೆ ವಿವಿಧ ಸಂಧರ್ಭದಲ್ಲಿ ಉಗ್ರರ ದಾಳಿಗೆ ಒಳಗಾಗಿ ವೀರಮರಣವನ್ನಪ್ಪಿ ಪರಮ ವೀರ ಚಕ್ರ’ ಹಾಗೂಮಹಾವೀರ ಚಕ್ರ’ ಬಿರುದು ಪಡೆದಿರುವ 55 ವೀರ ಯೋಧರ ಚಿತ್ರವನ್ನು ಪ್ರದರ್ಶಿಸಲಾಗಿದೆ. ಒಂದು ದಿನದ ಈ ಪ್ರದರ್ಶನವನ್ನು ಇಂದು ಬೆಳಿಗ್ಗೆ ನಿವೃತ್ತ ಸುಬೇದಾರ್ ಮೇಜರ್ ಪಿ.ಶ್ರೀಧರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶದ ರಕ್ಷಣೆಗಾಗಿ ಯೋಧರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ. ಸೈನಿಕರ ದಿನಾಚರಣೆ ಹಿನ್ನೆಲೆಯಲ್ಲಿ ಶಿಕ್ಷಕ ಮೋಹನ್‍ಕುಮಾರ್ ಏಕಾಂಗಿಯಾಗಿ ದೇಶ ಕ್ಕಾಗಿ ವೀರಮರಣವನ್ನಪ್ಪಿದ ಯೋಧರ ಚಿತ್ರ ವನ್ನು ಬರೆದು ಪ್ರದರ್ಶಿಸಿರುವುದು ಶ್ಲಾಘ ನೀಯ. ಆದರೆ ಈ ಕಾರ್ಯಕ್ರಮಕ್ಕೆ ಶಾಲಾ -ಮಕ್ಕಳನ್ನು ಆಹ್ವಾನಿಸಿದ್ದರೆ, ದೇಶಕ್ಕಾಗಿ ಮಡಿದ ಯೋಧರ ಬಗ್ಗೆ ಮಾಹಿತಿ ನೀಡ ಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಸರ್ಜೆಂಟ್ ಎಸ್.ಪುರು ಷೋತ್ತಮ ಮಾತನಾಡಿ, ದೇಶದ ಜನತೆ ಸಂತೋಷ ಹಾಗೂ ಶಾಂತಿಯಿಂದ ಜೀವನ ನಡೆಸುತ್ತಿದ್ದರೆ ಅದಕ್ಕೆ ಯೋಧರ ತ್ಯಾಗ, ಬಲಿದಾನ, ಶ್ರಮ ಕಾರಣವಾಗಿದೆ. ಕರ್ತವ್ಯದಲ್ಲಿದ್ದಾಗಲೇ ಸಾವಿರಾರು ಯೋಧರು ವೀರಮರಣವನ್ನಪ್ಪಿದ್ದಾರೆ. ಜನತೆ ಯೋಧ ರನ್ನು ಗೌರವಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ ಮಾತ ನಾಡಿ, ಯೋಧರು ದೇಶಕ್ಕಾಗಿ ಸದಾ ತಮ್ಮ ಜೀವವನ್ನೇ ಮುಡುಪಾಗಿಟ್ಟಿರುತ್ತಾರೆ. ದೇಶ ಕಾಯುವ ಯೋಧರಿಗೆ ಜನರು ಜನರು ಗೌರವ ನೀಡಬೇಕು. ಇದುವರೆಗೂ ಸರ್ಕಾರ ಗಳು ಯೋಧರ ಹೆಸರನ್ನು ಬಳಸಿ ಕೊಂಡು ರಾಜಕೀಯ ಮಾಡಿಕೊಂಡು ಲೂಟಿ ಮಾಡಿವೆ. ಅತ್ಯಾಧುನಿಕ ಶಸ್ತ್ರಾಸ್ತ್ರ ನೀಡದೆ, ಬುಲೆಟ್ ಪ್ರೂಫ್ ಜಾಕೆಟ್ ನೀಡದೆ ಯೋಧರ ಬಗ್ಗೆ ನಿರ್ಲಕ್ಷ ವಹಿ ಸಿವೆ. ಇಂದು ಕರ್ತವ್ಯಕ್ಕೆ ತೆರಳುವ ಯೋಧರು ನಾಳೆ ವಾಪಸ್ಸು ಬರುತ್ತಾರೆ ಎಂಬ ನಂಬಿ ಕೆಯೇ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಲೂಟಿ ಮಾಡುವುದನ್ನು ಕಡಿಮೆ ಮಾಡಿ ಯೋಧರ ಕಲ್ಯಾಣಕ್ಕಾಗಿ ಯೋಜನೆ ರೂಪಿಸಬೇಕೆಂದು ಅವರು ಸಲಹೆ ನೀಡಿದರು.

ಇದೇ ವೇಳೆ ಕಲಾವಿದ, ಶಿಕ್ಷಕ ಯು.ಜಿ. ಮೋಹನ್ ಕುಮಾರ್ ಆರಾಧ್ಯ ಮಾತ ನಾಡಿ, ಕಳೆದ 3 ವರ್ಷದಿಂದ ಸೈನಿಕರ ದಿನ ದಂದು ಸೈನಿಕರ ಚಿತ್ರಗಳನ್ನು ಪ್ರದರ್ಶಿ ಸುತ್ತಿದ್ದೇನೆ. ಈ ಬಾರಿ ಹುರಿ ದಾಳಿ, ಕಾರ್ಗಿಲ್ ಯುದ್ಧ ಸೇರಿದಂತೆ ವಿವಿಧ ಯುದ್ದಗಳಲ್ಲಿ ವೀರಮರಣವನ್ನಪ್ಪಿದ ಯೋಧರ ಚಿತ್ರ ಗಳನ್ನು ಸಾಮಾನ್ಯ ಪೆನ್ನಿನಿಂದ ಬರೆದಿ ದ್ದೇನೆ. ಇದುವರೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರ ಚಿತ್ರಗಳನ್ನು ಬರೆ ದಿದ್ದೇನೆ. ಈ ಪ್ರದರ್ಶನದಲ್ಲಿ 55 ಮಹಾನ್ ವೀರ ಯೋಧರ ಚಿತ್ರ ಪ್ರದರ್ಶಿಸಿ, ಗೌರ ವಿಸುತ್ತಿದ್ದೇನೆ ಎಂದರು. ಕಲಾಮಂದಿರದಲ್ಲಿ ಭಾನುವಾರ ನಡೆದ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಸಾಹಿತ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಆಗಮಿಸಿದ್ದ ಸಾಹಿತ್ಯ ಪ್ರೇಮಿಗಳು ಯೋಧರ ಚಿತ್ರಕಲಾ ಪ್ರದರ್ಶನ ವೀಕ್ಷಿಸಿ, ನಮನ ಸಲ್ಲಿಸಿದರು.

Translate »