ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ರಮದ ಬಂದೋಬಸ್ತ್‍ಗೆ ನಿಯೋ ಜನೆಗೊಂಡಿದ್ದ ಪೇದೆ ಯೊಬ್ಬರು ಹೃದಯಾ ಘಾತಕ್ಕೀಡಾಗಿ ಮೃತಪಟ್ಟಿ ರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೈಸೂರಿನ ವಿವಿ ಪುರಂ ಸಂಚಾರ ಠಾಣೆಯ ಪೇದೆ ಲಕ್ಷ್ಮೀಕಾಂತ ನಗರದ ನಿವಾಸಿ ಗಿರೀಶ್ (33) ಮೃತಪಟ್ಟ ಪೇದೆ.
ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ದಲ್ಲಿ ಶನಿವಾರ ಸಂಜೆ ನಡೆದ ನಿಖಿಲ್ ಕುಮಾರಸ್ವಾಮಿ ಅಭಿನಯದ `ಸೀತಾರಾಮ ಕಲ್ಯಾಣ’ ಚಲನ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭದ್ರತೆ ನೀಡಲು ಪೇದೆ ಗಿರೀಶ್ ಅವರನ್ನು ನಿಯೋಜಿ ಸಲಾಗಿತ್ತು. ಮಧ್ಯ ರಾತ್ರಿ 12 ಗಂಟೆವರೆಗೆ ರಿಂಗ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಗಿರೀಶ್ ಅವರಿಗೆ ಒತ್ತಡ ದಿಂದಾಗಿ ಎದೆನೋವು ಕಾಣಿಸಿ ಕೊಂಡಿತ್ತು. ಆದರೆ ಗ್ಯಾಸ್ಟ್ರಿಕ್‍ನಿಂದಾಗಿ ಎದೆ ನೋವು ತ್ತಿರಬಹುದೆಂದು ಭಾವಿಸಿ ಗಿರೀಶ್ ಕರ್ತವ್ಯ ನಿಭಾಯಿಸಿದ್ದರು. ಮಧ್ಯರಾತ್ರಿ 12ರ ನಂತರ ಮನೆಗೆ ತೆರಳಿದ್ದ ಗಿರೀಶ್ ಅವರಿಗೆ ಮುಂಜಾನೆ ಎದೆ ನೋವು ಹೆಚ್ಚಾಗಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬೆಳಿಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪೇದೆ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆಯೇ ಇಲಾಖೆಯ ಹಿರಿಯ ಅಧಿಕಾರಿಗಳು ಮೃತದೇಹದ ಅಂತಿಮ ದರ್ಶನ ಪಡೆದು ಸಂಬಂಧಿಗಳಿಗೆ ಸಾಂತ್ವನ ಹೇಳಿದರು. ಅಲ್ಲದೇ ವಿವಿಧ ಠಾಣೆಯ ಪೇದೆಗಳು ಸಹೋದ್ಯೋಗಿಯ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.