ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳಿಗೆ ಅನ್ವೇಷಣಾ ಶಕ್ತಿ ಇದೆ
ಮೈಸೂರು

ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳಿಗೆ ಅನ್ವೇಷಣಾ ಶಕ್ತಿ ಇದೆ

January 21, 2019

ಮೈಸೂರು: ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಗಳಿಗೆ ಅನ್ವೇಷಣಾ ಶಕ್ತಿಯಿದೆ ಎಂದು ರಾಜ ಸ್ಥಾನದ ನಾಟಕಕಾರ, ಕವಿ, ವಿಮರ್ಶಕ ಡಾ. ನಂದಕಿಶೋರ್ ಆಚಾರ್ಯ ಹೇಳಿದರು.

ಮೈಸೂರಿನ ಕಲಾಮಂದಿರಲ್ಲಿ ಹಮ್ಮಿ ಕೊಂಡಿದ್ದ ಡಾ.ಎಸ್.ಎಲ್.ಭೈರಪ್ಪ ಸಾಹಿ ತ್ಯೋತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ಸಾಹಿತ್ಯ ಜ್ಞಾನಾರ್ಜನೆಯ ಪ್ರಕಾರ. ಲೇಖಕ ಕೂಡ ತಾನು ಸಂಪಾದನೆ ಮಾಡಿದ ಜ್ಞಾನವನ್ನು ಕೃತಿಯ ಮೂಲಕ ಸಮಾಜಕ್ಕೆ ಅನಾವರಣಗೊಳಿಸಬೇಕು. ಸಾಹಿತಿಗಳು ಅನುಭವ, ಸಂವೇದನೆಯನ್ನು ಸಾಹಿತ್ಯದಲ್ಲಿ ಕಟ್ಟಿಕೊಡಬೇಕು. ಇದರಲ್ಲಿ ಭೈರಪ್ಪ ಅವರು ಅಗ್ರಸ್ಥಾನದಲ್ಲಿದ್ದು, ಓದುಗರಿಗೆ ಹತ್ತಿರವಾಗಿ ದ್ದಾರೆ ಎಂದು ನುಡಿದರು.

ಭೈರಪ್ಪ ಅವರು ಸಮಾಜದ ಮೂಲ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸಿ ಉತ್ಕøಷ್ಟ ಸಾಹಿತ್ಯವನ್ನು ರಚಿಸಿದ್ದಾರೆ. ಇದ ರಿಂದಲೇ ಅವರ ಕೃತಿಗಳು ದೇಶದ ಎಲ್ಲಾ ಭಾಷೆಗಳಿಗೂ ಅನುವಾದಗೊಂಡಿವೆ. ಕಾದಂ ಬರಿಗಳು ನಮ್ಮ ಅಂತಃಕರಣವನ್ನು ಕೆದಕ ಬೇಕು. ಭೈರಪ್ಪ ಅವರ ಸಾಕ್ಷಿ’,ಪರ್ವ’ ಕಾದಂ ಬರಿಗಳು ಆ ಕೆಲಸ ಮಾಡುತ್ತವೆ. ಭೈರಪ್ಪ ಅವರು ತಮ್ಮ ಕಾದಂಬರಿಗಳಲ್ಲಿ ಕರ್ನಾಟಕದ ಒಂದು ಸಣ್ಣ ಗ್ರಾಮದ ಚಿತ್ರಣವನ್ನು ನೀಡಿದರೆ, ಅದನ್ನು ಓದುವಾಗ ಆ ಚಿತ್ರಣ ಇಡೀ ಭಾರತಕ್ಕೆ ಸಂಬಂಧಿಸಿದ್ದು ಎಂಬ ಭಾವನೆ ಓದುಗರ ಮನಸ್ಸಿನಲ್ಲಿ ಮೂಡುತ್ತದೆ ಎಂದು ತಿಳಿಸಿದರು.

ಭೈರಪ್ಪ ಅವರ ಉಲ್ಲಂಘನೆ' ಕಾದಂಬರಿ ಕಲಾತ್ಮಕವಾದ ಶ್ರೇಷ್ಠ ಕೃತಿ. ಇದು ಗ್ರಾಮ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತದೆ. ಭಾರತ ಸಂಸ್ಕøತಿಯ ಏಕಾತ್ಮಕ ದರ್ಶನ ಮಾಡಿಕೊಡು ತ್ತದೆ. ಈ ಕೃತಿ ಮನಸ್ಸಿನಲ್ಲಿ ಸಾಕ್ಷಾತ್ಕಾರದ ಕಲ್ಪನೆಯನ್ನು ಕಟ್ಟಿಕೊಡುತ್ತದೆ. ಮತ್ತೊಂದು ಕಾದಂಬರಿಯಾದಸಾಕ್ಷಿ’ ನವನವೀನ ಕಲಾ ರೂಪ. ಮನುಷ್ಯನಲ್ಲಿರುವ ದ್ವಂದ್ವಗಳು ಇಲ್ಲಿ ಅನಾವರಣಗೊಂಡಿವೆ ಎಂದರು.

Translate »