ಸಭೆ ಕರೆದು ಸಮಸ್ಯೆ ಆಲಿಸುವ ರೈತಪರ ಸಿಎಂ ಹೆಚ್‍ಡಿಕೆ
ಮೈಸೂರು

ಸಭೆ ಕರೆದು ಸಮಸ್ಯೆ ಆಲಿಸುವ ರೈತಪರ ಸಿಎಂ ಹೆಚ್‍ಡಿಕೆ

December 2, 2018

ಕೆ.ಆರ್.ನಗರ: ಇಡೀ ರಾಜ್ಯದಲ್ಲಿ ಪ್ರತೀ ತಿಂಗಳಿಗೊಮ್ಮೆ ರೈತರ ಸಭೆ ಕರೆದು ಸಮಸ್ಯೆ ಆಲಿಸುವ ಮುಖ್ಯ ಮಂತ್ರಿ ಇದ್ದರೆ ಅದು ಹೆಚ್.ಡಿ.ಕುಮಾರಸ್ವಾಮಿ ಮಾತ್ರ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದರು.

ತಾಲೂಕಿನ ಕರ್ತಾಳು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ದೇಶಿಸಿ ಮಾತ ನಾಡಿದ ಅವರು, ಈಗಾಗಲೇ ತಾಲೂಕಿನಲ್ಲಿ ನಡೆಸುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಗಳಿಂದ ಜನತೆಯ ಸಮಸ್ಯೆಗಳನ್ನು ಸುಲಭ ರೀತಿಯಲ್ಲಿ ಬಗೆಹರಿಸಲು ಸಾಧ್ಯವಾಗು ತ್ತದೆ. ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶಕ್ಕೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸುವುದರಿಂದ ಜನತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಬಳಿ ಅಲೆಯುವುದು ತಪ್ಪಲಿದೆ ಎಂದರು.

ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಈಗಾಗಲೇ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದಾರೆ. ಮುಂದಿನ ಅಧಿ ವೇಶನ ಪ್ರಾರಂಭವಾಗುವುದರೊಳಗೆ ರೈತರಿಗೆ ತೀರುವಳಿ ಪತ್ರ ವಿತರಣೆಯಾಗ ಲಿದೆ ಎಂದ ಸಚಿವರು, ಕೆ.ಆರ್.ನಗರ ತಾಲೂಕಿನ ಜನತೆ 3ನೇ ಬಾರಿ ಆಯ್ಕೆ ಮಾಡಿ ಸಚಿವನಾಗಲು ಕಾರಣರಾಗಿದ್ದು, ಅಭಿವೃದ್ಧಿ ಮೂಲಕ ಋಣ ತೀರಿಸುತ್ತೇನೆ ಎಂದರು.

ಈ ಭಾಗದಲ್ಲಿ 6 ಕೋಟಿ ರೂ ವೆಚ್ಚ ದಲ್ಲಿ ಕೆಇಬಿ ಸಬ್‍ಸ್ಟೇಷನ್ ಪ್ರಾರಂಭಿಸಲು ಮುಖ್ಯಮಂತ್ರಿಗಳು ಮಂಜೂರಾತಿ ನೀಡಿದ್ದು, ಹನಸೋಗೆ ಪಶುವೈದ್ಯ ಆಸ್ಪತ್ರೆಗೆ 32, ಲಕ್ಷ ರೂ. ನೀಡಲಾಗಿದೆ. ಈಗಾಗಲೇ ತಾಲೂಕಿ ನಲ್ಲಿ ಹಲವು ರಸ್ತೆಗಳು ಅಭಿವೃದ್ಧಿಯಾಗಿದ್ದು, ಉಳಿದ ರಸ್ತೆಗಳ ಅಭಿವೃದ್ಧಿಗೆ ಶೀಘ್ರದಲ್ಲಿ ಗಮನ ಹರಿಸಲಾಗುವುದು ಎಂದರು.

ಸಚಿವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಸಂಭ್ರಮದಿಂದ ಭರಮಾಡಿ ಕೊಂಡರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ದರು. ಗ್ರಾಮದ ಜನತೆಯೊಂದಿಗೆ ಕುಳಿತು ಸಚಿವ ಸಾ.ರಾ.ಮಹೇಶ್ ಸಹಪಕ್ತಿ ಭೋಜನ ಮಾಡಿದರು. ಬಳಿಕ ಕುಂಬಾರ ಸಮಾಜದ ಗೋವಿಂದಶೆಟ್ಟಿ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು.

ಕಾರ್ಯಕ್ರಮದಲ್ಲಿ ಜಂಟಿ ನಿರ್ದೇಶಕ ಮಹಂತೇಶ್, ಉಪವಿಭಾಗಾಧಿಕಾರಿ ನಿತಿನ್, ತಹಶೀಲ್ದಾರ್ ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿಂದ್ಯಾ, ಎಎಸ್‍ಪಿ ಅರುಣಾಂಗ್ಯೂ ಗಿರಿ, ಪಿಡಿಎಲ್‍ಆರ್ ರಮ್ಯಾ, ಸಿಡಿಪಿಓ ಸುಮಿತ್ರ, ಬಿಇಓ ರಾಜು, ಅಬಕಾರಿ ನಿರೀಕ್ಷಕಿ ಹೆಚ್.ಡಿ.ರಮ್ಯಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್, ಇಓ ಲಕ್ಷ್ಮಿಮೋಹನ್, ಪಿಡಬ್ಲ್ಯೂಡಿ ಇಂಜಿನಿಯರ್ ಟಿ.ಡಿ.ಪ್ರಸಾದ್, ವಲಯ ಅರಣ್ಯಾಧಿಕಾರಿ ಕುಮಾರ್ ಹಲವು ಮುಖಂಡರು, ಕಾರ್ಯಕರ್ತರಿದ್ದರು.

Translate »