ಕಾಲೂರಿನ ಸಂತ್ರಸ್ತರಿಗೆ ಮೈಸೂರಿನ ತರಕಾರಿ ವ್ಯಾಪಾರಿ ನೆರವು
ಮೈಸೂರು

ಕಾಲೂರಿನ ಸಂತ್ರಸ್ತರಿಗೆ ಮೈಸೂರಿನ ತರಕಾರಿ ವ್ಯಾಪಾರಿ ನೆರವು

December 2, 2018

ಮೈಸೂರು: ಭೂ ಕುಸಿತ ಹಾಗೂ ಭಾರಿ ಮಳೆಯಿಂದ ಕಳೆದ ಎರಡು ತಿಂಗಳ ಹಿಂದೆ ಮನೆ ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾಗಿರುವ ಮಡಿಕೇರಿಯ ಕಾಲೂರು ಗ್ರಾಮದ ಕೆಲ ಕುಟುಂಬಗಳಿಗೆ ಮೈಸೂರಿನ ತರಕಾರಿ ವ್ಯಾಪಾರಿಯೊಬ್ಬರು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದಂತಹ ಭೂ ಕುಸಿತದಿಂದ ಕಾಲೂರು ಸೇರಿದಂತೆ ಕೆಲವು ಗ್ರಾಮಗಳು ಕೊಚ್ಚಿ ಹೋಗಿವೆ. ಮನೆ, ತೋಟ, ಕಾಫಿ ಎಸ್ಟೇಟ್ ಕಳೆದುಕೊಂಡಿರುವ ಹಲವು ಕುಟುಂಬಗಳು ಇಂದಿಗೂ ಪುನರ್ವಸತಿ ಕೇಂದ್ರದಲ್ಲೇ ಆಶ್ರಯ ಪಡೆದಿದ್ದರೆ. ಮತ್ತೆ ಕೆಲವು ಕುಟುಂಬಗಳವರು ಸಣ್ಣ ಪುಟ್ಟ ಶೆಡ್ ನಿರ್ಮಿಸಿಕೊಂಡು ಜೀವನ ದೂಡು ತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಎಪಿಎಂಸಿಯಲ್ಲಿ ತರಕಾರಿ ವ್ಯಾಪಾರಿ ಯಾಗಿ ರುವ ಲಯನ್ ಉಮಾಪತಿ ರಾವ್ ಎಂಬ ವರು ಸ್ವಇಚ್ಛೆಯಿಂದ ಮಡಿಕೇರಿಗೆ ಕಣ್ಣು-ತರಕಾರಿಗಳೊಂದಿಗೆ ತೆರಳಿ, ತೀವ್ರತರನಾದ ಸಂಕಷ್ಟಕ್ಕೆ ಸಿಲುಕಿರುವ ಕಡು ಬಡ ಕುಟುಂಬ ಗಳಿಗೆ ಆರ್ಥಿಕ ನೆರವು ನೀಡಿದ್ದಾರೆ.

ಕಾಲೂರು ಗ್ರಾಮದ 8 ಕುಟುಂಬಗಳಿಗೆ ತಲಾ ಆರು ಸಾವಿರ ರೂ. ನಗದು ಹಾಗೂ ಒಂದು ಮೂಟೆ ಹÀಣ್ಣು-ತರಕಾರಿ ನೀಡಿ ಗಮನ ಸೆಳೆದಿದ್ದಾರೆ. ಈ ಹಿಂದೆ ವಿವಿಧ ಸಂಘ ಸಂಸ್ಥೆಗಳು ಸಂತ್ರಸ್ಥರಿಗೆ ಅಗತ್ಯ ವಸ್ತುಗಳನ್ನು ವಿತರಿಸಲು ಮುಂದೆ ಬಂದಿದ್ದವು. ಘಟನೆ ನಡೆದು ಎರಡು ತಿಂಗಳಾದರೂ ಅಲ್ಲಿನ ಪರಿಸ್ಥಿತಿ ಸುಧಾರಿ ಸಿಲ್ಲ. ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ನೆರವು ನೀಡುವುದರೊಂದಿಗೆ ಆತ್ಮಸ್ಥೈರ್ಯ ತುಂಬಿರುವುದಕ್ಕೆ ಉಮಾ ಪತಿ ರಾವ್ ಅವರನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.

ಇತ್ತೀಚೆಗೆ ತರಕಾರಿ ವ್ಯಾಪಾರಿ ಉಮಾ ಪತಿ ರಾವ್ ಅವರು ಮೈಸೂರಿನ ಪುಟ್ಟ ರಾಜು, ವಿಜಯ್, ಉಮೇಶ್, ವೆಂಕ ಟೇಶ್ ಹಾಗೂ ಇನ್ನಿತರರೊಂದಿಗೆ ತೆರಳಿ ನೆರವು ನೀಡಿದ್ದಾರೆ.

Translate »