ದಾಖಲಾತಿ ಇಲ್ಲದ ಹಳೇ ಬಸ್‍ಗಳ ವಶ
ಮೈಸೂರು

ದಾಖಲಾತಿ ಇಲ್ಲದ ಹಳೇ ಬಸ್‍ಗಳ ವಶ

December 2, 2018

ಮೈಸೂರು: ವಾರದ ಹಿಂದೆ ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ಸಂಭ ವಿಸಿದ ಖಾಸಗಿ ಬಸ್ ದುರಂತದಲ್ಲಿ 30 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮೈಸೂರಿನ ಆರ್‍ಟಿಓ ಅಧಿಕಾರಿಗಳು ದಾಖಲಾತಿ ಇಲ್ಲದ ಹಳೆಯ ಬಸ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

ಶನಿವಾರ ಬನ್ನೂರು ರಸ್ತೆ ಮತ್ತಿತರೆ ಕಡೆಗಳಲ್ಲಿ ಆರ್‍ಟಿಓ ಅಧಿಕಾರಿಗಳು ಖಾಸಗಿ ಬಸ್‍ಗಳು, ಶಾಲಾ ವಾಹನಗಳ ತೀವ್ರ ತಪಾಸಣೆ ನಡೆಸಿ, ವಾಹನಗಳ ಎಫ್‍ಸಿ, ವಿಮೆ, ಸೂಕ್ತ ದಾಖಲೆ ಗಳಿಲ್ಲದ 2 ಖಾಸಗಿ ಬಸ್, 1 ಶಾಲಾ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಶಾಲಾ ವಾಹನ ವಶಕ್ಕೆ ಪಡೆದ ಅಧಿಕಾರಿಗಳು, ಮಕ್ಕಳನ್ನು ತಮ್ಮ ವಾಹನದಲ್ಲೆ ಡ್ರಾಪ್ ಮಾಡಿದ್ದಾರೆ.

Translate »