ದೇಶಿ ಶಿಕ್ಷಣ ಪದ್ಧತಿಯಿಂದ ನಮ್ಮ  ಸಮಸ್ಯೆಗಳಿಗೆ ಪರಿಹಾರ ಸಾಧ್ಯ
ಮೈಸೂರು

ದೇಶಿ ಶಿಕ್ಷಣ ಪದ್ಧತಿಯಿಂದ ನಮ್ಮ  ಸಮಸ್ಯೆಗಳಿಗೆ ಪರಿಹಾರ ಸಾಧ್ಯ

December 2, 2018

ಮೈಸೂರು: ಆಜಾದಿ ಬಚಾವೋ ಆಂದೋಲನ ಗ್ರಾಮೀಣ ಪ್ರದೇಶಗಳಿಗೂ ಮುಟ್ಟುವುದ ರೊಂದಿಗೆ ಸ್ವದೇಶಿ ವಸ್ತುಗಳ ಬಳಕೆಗೆ ಅರಿವು ಮೂಡಿ ದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ತರಬಹುದು ಎಂದು ಬಂಡನಪುರದ ಮಹಾಂತೇಶ ಮಠದ ಪರ ಶಿವಮೂರ್ತಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ ಆಜಾದಿ ಬಚಾವೋ ಆಂದೋಲನ ಸಮಿತಿ ವತಿಯಿಂದ ನಡೆದ ಸ್ವದೇಶಿ ದಿನಾ ಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶೀ ಶಿಕ್ಷಣ ಪದ್ದತಿಯಿಂದ ಮಾತ್ರ ದೇಶದ ಸಮಸ್ಯೆ ಗಳಿಗೆ ಪರಿಹಾರ ಸಾಧ್ಯ. ಇಂದಿಗೂ ಗ್ರಾಮೀಣ ಜನರಲ್ಲಿ ದೇಶಿ ಮತ್ತು ವಿದೇಶಿ ವಸ್ತುಗಳ ಬಗ್ಗೆ ಅರಿವಿಲ್ಲ. ಈ ಕುರಿತು ಸ್ವದೇಶಿ ವಸ್ತುಗಳ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿದರೆ ಮಾತ್ರ ಸ್ವದೇಶಿ ಆಂದೋಲನ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು.

ಇದೇ ವೇಳೆ ಪುತ್ತೂರಿನ ಮೈತ್ರೇಯಿ ಗುರುಕುಲದ ಶಿP್ಷÀಕಿ ಅಮೃತವರ್ಷಿಣಿ ಉಮೇಶ್ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳು ವಿದೇಶಿ ಶಿP್ಷÀಣಕ್ಕೆ ಮಾರು ಹೋಗಿ ದ್ದಾರೆ. ಯುವ ಸಮೂಹ ಪ್ರೀತಿ, ಪ್ರೇಮಗಳ ನಡು ವಿನ ವ್ಯತ್ಯಾಸವನ್ನೇ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದು, ಶಿP್ಷÀಣ ವ್ಯವಸ್ಥೆಯ¯್ಲÉೀ ದೋಷ ಇರುವುದರಿಂದ ಗುರು ಕುಲದಂತಹ ದೇಶಿ ಶಿP್ಷÀಣ ವ್ಯವಸ್ಥೆ ನಶಿಸಿ ಹೋಗು ತ್ತಿದೆ. ಎಲ್ಲೆಡೆ ಪೆÇಲೀಸ್ ಠಾಣೆ ಹಾಗೂ ಆಸ್ಪತ್ರೆಗಳು ಹೆಚ್ಚಾಗುತ್ತಿವೆ. ಇದನ್ನು ನಾವು ಅಭಿವೃದ್ಧಿ ಎನ್ನುತ್ತೇವೆ. ಅಪರಾಧಗಳು ಹೆಚ್ಚಿದಂತೆ ಪೆÇಲೀಸ್ ಠಾಣೆ, ಅಪಘಾತ ಗಳು ಹೆಚ್ಚಿದಂತೆ ಆಸ್ಪತ್ರೆಗಳು ಹೆಚ್ಚುತ್ತಿವೆ. ಇದನ್ನು ನಾವು ಅಭಿವೃದ್ಧಿ ಎನ್ನಬಹುದೇ ಎಂದು ಪ್ರಶ್ನಿಸಿದರು.

ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ನಮ್ಮ ವ್ಯಕ್ತಿತ್ವ ಬದಲಾಗಬೇಕು. ವ್ಯಕ್ತಿಯಿಂದ ಕುಟುಂಬ ಬದಲಾಗಬೇಕು. ಆದರೆ, ಅಪಾರ ಹಣ ವೆಚ್ಚ ಮಾಡಿ ಮದುವೆಯಾಗುತ್ತಾರೆ. ಒಂದೇ ತಿಂಗಳಲ್ಲಿ ವಿಚ್ಛೇದನ ಪಡೆದುಕೊಳ್ಳುತ್ತಾರೆ. ಇಂಥ ಕುಟುಂಬಗಳು ಸ್ವಾಸ್ಥ್ಯ ಸಮಾಜದ ದುಸ್ಥಿತಿಗೆ ಕಾರಣವಾಗುತ್ತಿವೆ ಎಂದು ಅವರು ವಿಷಾದಿಸಿದರು ಕಾರ್ಯಕ್ರಮದಲ್ಲಿ ರುಡ್‍ಸೆಟ್ ಸಂಸ್ಥೆಯ ತರ ಬೇತುದಾರರಾದ ಸುಧಾಮಣಿ ಸ್ವದೇಶಿ ವಸ್ತುಗಳ ತಯಾರಿಕೆಯ ಕಲಿಕೆ ಕುರಿತು, ಚೆನ್ನೈನ ಭಾರತ e್ಞÁನ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಡಿ.ಕೆ.ಹರಿ ಹಾಗೂ ಡಿ.ಕೆ.ಹೇಮಾಹರಿ ಅವರು ಭಾರತ e್ಞÁನ- ನಾಗರಿ ಕತೆಯ ಅಧ್ಯಯನಗಳು’ ಕುರಿತು ಉಪನ್ಯಾಸ ನೀಡಿ ದರು. ಈ ಸಂದರ್ಭದಲ್ಲಿ ಆಜಾದಿ ಬಚಾವೋ ಆಂದೋಲನ ಸಮಿತಿಯ ಕಾರ್ಯಕರ್ತರಾದ ಹೀರಾಲಾಲ್ ಶರ್ಮಾ, ಜಸವೀರ್ ಸಿಂಗ್ ಇದ್ದರು.

Translate »