ಮಾದಕವಸ್ತು ಸೇವನೆಯಿಂದ ಸಂಸಾರಗಳು ನಾಶ
ಹಾಸನ

ಮಾದಕವಸ್ತು ಸೇವನೆಯಿಂದ ಸಂಸಾರಗಳು ನಾಶ

June 29, 2018

ಹೊಳೆನರಸೀಪುರ: ‘ಕುಡಿತ, ಧೂಮಪಾನ, ಮಾದಕ ವಸ್ತುಗಳನ್ನು ಸೇವನೆ ಮಾಡುವುದರಿಂದ ಸಂಸಾರಗಳು ನಾಶವಾಗು ತ್ತದೆ’ ಎಂದು ಪಿಎಸ್‍ಐ ನಾಗಮ್ಮ ಹೇಳಿದರು.

ತಾಲೂಕಿನ ದೊಡ್ಡಕಾಡನೂರು ಗ್ರಾಮದ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಮಾದಕ ವಸ್ತುಗಳ ಬಗ್ಗೆ ಅರಿವು ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಹಲವು ಭಯಾನಕ ರೋಗಗಳು ಬರುತ್ತವೆ. ದೇಶದಾದ್ಯಂತ ಸಾವಿರಾರು ಜನರು ಮಾದಕ ವಸ್ತುಗಳನ್ನು ಸೇವಿಸಿ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಅವರ ಕುಟುಂಬಗಳು ಬೀದಿಪಾಲಾಗುತ್ತಿವೆ ಎಂದರು.
ಪ್ರಾಂಶುಪಾಲ ಡಾ.ಚೌಡಯ್ಯ ಕಟ್ನವಾಡಿ ಮಾತನಾಡಿ, ಮಾದಕ ವಸ್ತುಗಳ ಸೇವನೆ ಯನ್ನು ತಡೆಗಟ್ಟಲು ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸಬೇಕು. ಪೋಷಕರು, ಅಕ್ಕ ಪಕ್ಕದ ಮನೆಯವರು ಹಾಗೂ ಸಂಬಂಧಿ ಕರು ಯಾರೇ ಆಗಲಿ ಮಾದಕ ವಸ್ತುಗಳ ವ್ಯಸನಿಗಳಾಗಿದ್ದರೆ ಅವರಿಗೆ ಅರಿವು ಮೂಡಿ ಸಬೇಕು ಎಂದು ಸಲಹೆ ನೀಡಿದರು.

ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಎಸ್.ಬಸವಣ್ಣ ಮಾತನಾಡಿ, ಎಲ್ಲರೂ ಮಾದಕ ವಸ್ತುಗಳನ್ನು ಬಿಟ್ಟು. ಆರೋಗ್ಯ ವೃದ್ಧಿಸು ವಂತಹ ಆಹಾರ ಸೇವನೆ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಶ್ರೀಕಂಠಮೂರ್ತಿ, ರೂಪ, ಅಶೋಕ, ಉಪನ್ಯಾಸಕರಾದ ಸೋಮಣ್ಣ, ಪ್ರಕಾಶ್, ಎಂ.ಮಹೇಶ್, ಡಾ.ಪಂಕಜಾ, ಪಿ. ಮಹೇಶ್, ಎನ್.ಎಸ್. ಜಗದೀಶ್, ಜ್ಯೋತಿರಾಣಿ , ಅಂಬಿಕಾ, ಪ್ರವೀಣ್, ಪ್ರದೀಪ್‍ಕುಮಾರ್, ಸೋಮಶೇಖರ್ ಹಾಜರಿದ್ದರು.

Translate »