ಹಕ್ಕಲಾಪುರದಲ್ಲಿ ಹುಲಿ ದಾಳಿಗೆ ಕರು ಬಲಿ
ಚಾಮರಾಜನಗರ

ಹಕ್ಕಲಾಪುರದಲ್ಲಿ ಹುಲಿ ದಾಳಿಗೆ ಕರು ಬಲಿ

June 29, 2018

ಗುಂಡ್ಲುಪೇಟೆ: ಕಾಡಿನಿಂದ ಆಹಾರ ಅರಸಿ ಬಂದ ಹುಲಿಯ ದಾಳಿಗೆ ಕರುವೊಂದು ಬಲಿ ಯಾಗಿರುವ ಘಟನೆ ತಾಲೂಕಿನ ಹಕ್ಕ ಲಾಪುರ ಗ್ರಾಮದಲ್ಲಿ ನಡೆದಿದೆ.

ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಓಂಕಾರ್ ಅರಣ್ಯ ವಲಯದಿಂದ ಹೊರಬಂದ ಹುಲಿ ಯೊಂದು ಹಕ್ಕಲಾಪುರ ಗ್ರಾಮದ ಸುರೇಶ್ ಎಂಬುವರ ಜಮೀನಿನಿಂದ ಗುರುವಾರ ಬೆಳಿಗ್ಗೆ ಕರುವನ್ನು ಸಮೀಪದ ಹಳ್ಳಕ್ಕೆ ಎಳೆದೊಯ್ದು ತಿಂದು ಹಾಕಿದೆ.

ಹಕ್ಕಲಾಪುರದ ಸುರೇಶ್ ಜಮೀನಿನ ಮನೆಯ ಆವರಣದಲ್ಲಿ ಹಸುಗಳನ್ನು ಕಟ್ಟಿ ಹಾಕಲಾಗಿತ್ತು ಬೆಳಿಗ್ಗೆ ಸುಮಾರು 8.30ರ ವೇಳೆಯಲ್ಲಿ ಸುರೇಶ್ ಹಾಗೂ ಅವರ ಮೈದುನ ಸತೀಶ್ ಕರುವಿನ ಚೀರಾಟದ ಧ್ವನಿ ಕೇಳಿದ್ದಾರೆ. ನಂತರ ಮಣ್ಣಿನಲ್ಲಿ ಮೂಡಿದ್ದ ಹುಲಿ ಹೆಜ್ಜೆ ಗುರುತು ಕಂಡು ಹಿಡಿದ ರೈತರು ಹಿಂಭಾಲಿಸಿದ್ದಾರೆ. ಅಷ್ಟ ರಲ್ಲಾಗಲೇ ಹಕ್ಕಲಾಪುರದಿಂದ ಹುಣಸಿನ ಪುರ ಗ್ರಾಮಕ್ಕೆ ತೆರಳುವ ಅಡ್ಡಹಳ್ಳದ ಪೆÇದೆಯೊಳಗೆ ಕರುವನ್ನು ಕೊಂದು ತಿನ್ನು ತ್ತಿರುವುದನ್ನು ನೋಡಿ ಗಾಬರಿಯಿಂದ ರೈತರು ಚೀರಾಡಿದ್ದಾರೆ. ರೈತರ ಕೂಗಾ ಟದ ಸದ್ದು ಕೇಳಿದ ಹುಲಿಯು ರೈತ ಸುರೇಶ್ ಮೇಲೆ ದಾಳಿ ಮಾಡಲು ಮುಂದಾಗಿದೆ. ಗಾಬರಿಗೊಂಡ ಸುರೇಶ್ ನೆಲಕ್ಕೆ ಬಿದ್ದಿದ್ದಾರೆ. ಆ ಕೂಡಲೇ ಹುಲಿ ಬರುವುದನ್ನು ಗಮನಿಸಿದ ಸತೀಶ ಸಂಗ ಡಿಗರೊಂದಿಗೆ ಕೂಗಾಡಿ ಹುಲಿಯನ್ನು ಓಡಿಸಿದ್ದಾರೆ.

ಹೆಚ್ಚಾದ ವನ್ಯ ಪ್ರಾಣಿಗಳ ಹಾವಳಿ: ಇತ್ತೀಚೆಗೆ ಈ ಭಾಗದಲ್ಲಿ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜಾನುವಾರುಗಳು ಕಾಡುಪ್ರಾಣಿಗಳ ಪಾಲಾಗುತ್ತಿದೆ. ಇದೇ ಜಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ಚಿರತೆ ಯೊಂದು ಹಸುವನ್ನು ಸಾಯಿಸಿತ್ತು. ನಂತರ ಅರಣ್ಯ ಇಲಾಖೆಯು ಬೋನು ಇಟ್ಟು ಸೆರೆ ಹಿಡಿದಿದ್ದರು. ಮತ್ತೆ ಇದೇ ಪ್ರದೇಶದಲ್ಲಿ ಇತ್ತೀಚಿಗೆ ಹುಲಿಯು ಬಂದು ಹಸು ವೊಂದನ್ನು ಸಾಯಿಸಿತ್ತು. ಬುಧವಾರ ಸೋಮ ಹಳ್ಳಿ ಬಳಿ ಜೋಳದ ಜಮೀ ನಿನಲ್ಲಿ ಕಾಡುಹಂದಿಯನ್ನು ಸಾಯಿಸಿದೆ. ಇದೀಗ ಕರುವನ್ನು ಸಾಯಿಸಿದ್ದು, ಗ್ರಾಮ ಸ್ಥರಲ್ಲಿ ಆತಂಕ ಮೂಡಿದೆ. ಇದು ಈ ಭಾಗದ ರೈತರ ನಿದ್ದೆಗೆಡಿಸಿದೆ ಮತ್ತು ಆತಂಕಕ್ಕೆ ಕಾರಣವಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಓಂಕಾರ್ ವಲಯಾರಣ್ಯಾಧಿಕಾರಿ ಎನ್.ಪಿ. ನವೀನ್ ಕುಮಾರ್ ಹಾಗೂ ಸಿಬ್ಬಂದಿ ಆಗಮಿಸಿ ಸ್ಥಳ ಪರಿಶೀಲಿಸಿದಾಗ ಸುರೇಶ್ ಹಾಗೂ ಸ್ವಾಮಿ ಎಂಬುವರ ಜಮೀನಿನಲ್ಲಿ ಹುಲಿ ಹೆಜ್ಜೆ ಗುರುತು ಕಂಡು ಬಂದಿವೆ.

ಕೂಡಲೇ ಅರಣ್ಯ ಸಿಬ್ಬಂದಿ ಕಾರ್ಯಾ ಚರಣೆ ಆರಂಭಿಸಿದರೂ ಹುಲಿಯನ್ನು ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ. ಸುತ್ತಲೂ ದೊಡ್ಡದೊಡ್ಡ ಪೆÇದೆಗಳಿದ್ದು, ಇದರಲ್ಲಿ ಹುಲಿ ಅಡಗಿಕೊಂಡಿರುವ ಸಂಶಯವಿದ್ದು, ಯಾವುದೇ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ. ಹುಲಿಯ ಹೆಜ್ಜೆಯ ಆಧಾ ರದ ಮೇಲೆ ಹುಲಿಗೆ ಸುಮಾರು 6 ವರ್ಷ ಇರಬಹುದೆಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಗೆ ಆನೆ ಬಳಕೆ ಮಾಡಿ ದರೆ ಅದು ಆನೆಯ ಮೇಲೆಯೇ ಎಗ ರುವ ಭೀತಿಯಿದೆ. ಆದ್ದರಿಂದ ಸ್ಥಳದಲ್ಲಿ ಬೋನು ಇರಿಸಲಾಗಿದೆ ಎಂದು ಅರ ಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರ ಆಕ್ರೋಶ: ಹಕ್ಕಲಾಪುರ ಗ್ರಾಮದ ಸುತ್ತಾ ಮುತ್ತಾ ಕಳೆದ ಮೂರು ತಿಂಗಳಿಂದ ಸತತವಾಗಿ ಚಿರತೆ ದಾಳಿ ನಡೆಸುತ್ತಿದ್ದು, ರೈತರ ಸಾಕು ಪ್ರಾಣಿಗಳನ್ನು ಸಾಯಿಸಿದೆ. ಇದೀಗ ಹುಲಿ ದಾಳಿ ನಡೆದು ಕರುವನ್ನು ಕೊಂದಿದೆ. ಜನರ ಮೇಲೆ ಹುಲಿ ದಾಳಿ ನಡೆಸುವ ಮೊದಲೇ ಅರಣ್ಯ ಇಲಾಖೆ ಹುಲಿ ಸೆರೆ ಹಿಡಿಯಬೇಕು ಹಾಗೂ ಕಾಡು ಪ್ರಾಣಿಗಳು ಗ್ರಾಮಗಳತ್ತ ದಾಳಿ ಮಾಡು ವುದನ್ನು ತಡೆ ಹಿಡಿಯಬೇಕು ಎಂದು ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯ ರಾಘವಾ ಪುರದೇವಯ್ಯ ಆಗ್ರಹಿಸಿದ್ದಾರೆ.

ಹಕ್ಕಲಾಪುರ ಗ್ರಾಮದ ಸುತ್ತಲೂ ಪದೇ ಪದೇ ಚಿರತೆ ದಾಳಿ ಮಾಡುತ್ತಿದೆ. ಇದೀಗ ಹುಲಿ ಓಡಾಡುತ್ತಿದೆ. ಕಳೆದ ವಾರ ಚಿಕ್ಕಾಟಿ ಬಳಿ ಹಸುವನ್ನು ಕೊಂದಿತ್ತು. ಇದೀಗ ಗ್ರಾಮ ದಲ್ಲಿ ಹಸು ಹಾಗೂ ಹಂದಿಯನ್ನು ಸಾಯಿಸಿ ಇದೀಗ ನಮ್ಮ ಮನೆಯ ಕರುವನ್ನೂ ಸಾಯಿಸಿದೆ ಹಾಗಾಗಿ ನಮಗೆ ಜಮೀನಿನತ್ತ ಕೃಷಿ ಚಟುವಟಿಕೆಗೆ ತೆರಳಲು ಜೀವ ಭಯ ಕಾಡ ಲಾರಂಭಿಸಿದೆ. ಆದಷ್ಟು ಬೇಗ ಹುಲಿ ಸೆರೆಹಿಡಿ ಯಬೇಕು ಎಂದು ಸ್ವಾಮಿ ಒತ್ತಾಯಿಸಿದ್ದಾರೆ.

Translate »