ವಿಜೃಂಭಣೆಯ ಕನ್ನಂಬಾಡಿಯಮ್ಮ, ಕೆಂಚಮ್ಮ ಜಾತ್ರಾ ಮಹೋತ್ಸವ
ಹಾಸನ

ವಿಜೃಂಭಣೆಯ ಕನ್ನಂಬಾಡಿಯಮ್ಮ, ಕೆಂಚಮ್ಮ ಜಾತ್ರಾ ಮಹೋತ್ಸವ

June 29, 2018

ಹಾಸನ: ನಗರದ ಗಾಣಿಗರ ಬೀದಿಯಲ್ಲಿರುವ ಕನ್ನಂಬಾಡಿಯಮ್ಮ, ಕೆಂಚಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಗುರುವಾರ ನಡೆಯಿತು.

ಉತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ಪ್ರೀತಮ್ ಜೆ.ಗೌಡ ಅವರು ದೇವರ ಅಡ್ಡ ಪಲ್ಲಕ್ಕಿಯನ್ನು ಹೊತ್ತು ಗಮನ ಸೆಳೆದರು.
ಬೆಳಿಗ್ಗೆ ಶ್ರೀಜವೇನಹಳ್ಳಿ ಮಠದ ಸಂಗ ಮೇಶ್ವರ ದೇವಸ್ಥಾನದಲ್ಲಿ ಕಳಸ ಪ್ರತಿಷ್ಠಾ ಪಿಸಿ ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳ ಗಳಾದ ರಾಮದೇವರಹಳ್ಳ, ರಾಮನಾಥ ಪುರ, ಗೊರೂರು, ಪಶ್ಚಿಮವಾಹಿನಿ ಮತ್ತು ಯಗಚಿ ನದಿಗಳಿಂದ ತರಲಾಗಿರುವ ಪವಿತ್ರ ಗಂಗಾಜಲದಿಂದ ಪುಣ್ಯಹಾನಂದಿಗೊಳಿ ಸಿದ ಬಳಿಕ ಕಳಸಕ್ಕೆ ಮಹಾ ಪೂಜೆ ಸಲ್ಲಿಸ ಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಡನೆ ದೇವಸ್ಥಾನ ವರೆಗೆ ಮೆರವಣಿಗೆ ನಡೆಸಲಾಯಿತು.

ಮಹೋತ್ಸವದ ಅಂಗವಾಗಿ ಇಂದು (ಶುಕ್ರವಾರ) ಬೆಳಿಗ್ಗೆ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ನಡೆಯುತ್ತದೆ. ಬಳಿಕ, ಅಲಂಕೃತ ಅಡ್ಡ ಪಲ್ಲಕ್ಕಿಯಲ್ಲಿ ಕನ್ನಂಬಾಡಿಯಮ್ಮ ಮತ್ತು ಕೆಂಚಮ್ಮ ದೇವರ ಮೆರವಣಿಗೆ ನಡೆಯಲಿದೆ.

ನಾಳೆ (ಶನಿವಾರ) ಅಡ್ಲಿಮನೆ ರಸ್ತೆಯಲ್ಲಿ ರುವ ಶಿವಜ್ಯೋತಿ ಗಾಣಿಗರ ಸಮು ದಾಯ ಭವನದಲ್ಲಿ ಅನ್ನದಾನ ಏರ್ಪಡಿ ಸಲಾಗಿದೆ ಎಂದು ಕನ್ನಂಬಾಡಿಯಮ್ಮ, ಕೆಂಚಮ್ಮ ಟ್ರಸ್ಟ್‍ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.

Translate »