ಸಾರ್ವಜನಿಕರಿಂದ 190ಕ್ಕೂ ಅಧಿಕ ಅರ್ಜಿ
ಹಾಸನ

ಸಾರ್ವಜನಿಕರಿಂದ 190ಕ್ಕೂ ಅಧಿಕ ಅರ್ಜಿ

July 12, 2018

ಹೊಳೆನರಸೀಪುರ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದು ಹೊಳೆನರಸೀಪುರದಲ್ಲಿ ಸಾರ್ವಜನಿಕರಿಂದ 190ಕ್ಕೂ ಅಧಿಕ ಕುಂದು-ಕೊರತೆಗಳ ಅರ್ಜಿ ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿದರು.

ಶಿಕ್ಷಕರ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಭೂಮಿಗೆ ಸಂಬಂಧಿಸಿದಂತೆ, ಹೆಚ್ಚು ಮನವಿಗಳನ್ನು ಸ್ವೀಕರಿಸಿದ ಅವರು ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರು. ಎಲ್ಲಾ ತಾಲೂಕುಗಳಂತೆ ಹೊಳೆನರಸೀಪುರದಲ್ಲಿ ಭೂಮಿಗೆ ಸಂಬಂಧಿ ಸಿದ ಮನವಿಗಳೇ ಹೆಚ್ಚಾಗಿ ಬಂದವು ಪೋಡಿ, ಸರ್ವೆ, ಹದ್ದುಬಸ್ತು, ಜಮೀನು ಮಂಜೂರಾತಿ, ಅಕ್ರಮ ಸಕ್ರಮ, ಕೆರೆ ಜಾಗ, ದಾಖಲಾತಿ ಸರಿಪಡಿಸುವುದು ಹೀಗೆ ಹತ್ತಾರು ಮನವಿಗಳು ಬಂದವು.

ಹೇಮಾವತಿ ಯೋಜನಾ ನಿರಾಶ್ರಿತರು ಹಾಗೂ ಇತರ ಪ್ರಕರಣಗಳಲ್ಲಿ ಭೂಮಿ ಯಲ್ಲಿ ವಾಸಿಸುತ್ತಿರುವವರಿಗೆ ಸಾಗುವಳಿ ಚೀಟಿಯನ್ನು ನೀಡಿ ಎಂದು ಹಲವರು ಮನವಿಗಳನ್ನು ಸಲ್ಲಿಸಿದರು. ಕಿಕ್ಕೇರಮ್ಮ ಬಡಾವಣೆಯಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ಸಕ್ರಮಗೊಳಿಸಿ, ಸ್ಮಶಾನಕ್ಕೆ ಜಾಗ ಕಾಯ್ದಿರಿಸಿ, ಚಟ್ಟಳ್ಳಿಯಲ್ಲಿ ಸರ್ಕಾರಿ ಶಾಲೆ ಯಲ್ಲಿ ಅಂಗನವಾಡಿ ನಡೆಸಲು ಕೊಠಡಿ ಒದಗಿಸಿ. ಕೆಲವರ ಸ್ವಾರ್ಥದಿಂದ ಮುಚ್ಚಿರುವ ಗ್ರಾಮದ ತೆರೆದ ಬಾವಿಯನ್ನು ಪುನರುಜ್ಜೀವನಗೊಳಿಸಿ, ಸರ್ಕಾರಿ ಕಟ್ಟೆ ಗಳು, ಕರಾಬು ಜಮೀನು ಒತ್ತುವರಿಯಾಗು ತ್ತಿದ್ದು, ಅದನ್ನು ತಡೆಯಿರಿ ಎಂಬ ಕೋರಿಕೆ ಗಳನ್ನು ಸಾರ್ವಜನಿಕರು ಸಲ್ಲಿಸಿದರು.

ಪ್ರವಾಸೋದ್ಯಮ ಇಲಾಖೆಯಲ್ಲಿ ವಾದ್ಯ ಪರಿಕರಗಳನ್ನು ಒದಗಿಸಿ ಎಂದು ಕಲಾ ವಿದರು ಮನವಿ ಮಾಡಿದರು. ಪಟ್ಟಣದಲ್ಲಿರುವ ಬೀಡಾಡಿ ದನಗಳು, ಕುದುರೆಗಳ ಉಪಟಳ ತಡೆಯಲು ಹಲವರು ಕೋರಿದರು. ಕೆಲವರು ಸಾಮಾಜಿಕ, ಶೈಕ್ಷಣಿಕ ವಿಷಯ ಗಳ ಬಗ್ಗೆ ಗಮನ ಸೆಳೆದರು. ಸರ್ಕಾರಿ ಅನುದಾನ ಬಳಸಿ ನಿರ್ಮಿಸಿದ ಸಮುದಾಯವನ್ನು ಖಾಸಗಿಯವರು ತಮ್ಮ ಸ್ವಂತ ಸ್ವತ್ತಾಗಿಸಿ ಕೊಂಡಿದ್ದಾರೆ. ಇದನ್ನು ಬಿಡಿಸಿ ಕೊಡಿ ಎಂದು ಹಲವರು ಒಟ್ಟಾಗಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

ಉಪವಿಭಾಗಾ ಧಿಕಾರಿ ಡಾ.ಹೆಚ್. ಎಲ್.ನಾಗರಾಜ್, ಭೂ ದಾಖಲೆಗಳ ಉಪ ನಿರ್ದೇಶಕ ಕೃಷ್ಣ ಪ್ರಸಾದ್, ತಹಶೀಲ್ದಾರ್ ರೇಣು ಕುಮಾರ್, ತಾಪಂ ಇಓ ಪ್ರಭು, ಪುರಸಭೆ ಮುಖ್ಯ ಅಧಿಕಾರಿ ಬಸವರಾಜ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು,

Translate »