ಗ್ರಾಮ ಲೆಕ್ಕಿಗನ ವರ್ಗಾವಣೆಗೆ ಒತ್ತಾಯಿಸಿ ಧರಣಿ
ಮಂಡ್ಯ

ಗ್ರಾಮ ಲೆಕ್ಕಿಗನ ವರ್ಗಾವಣೆಗೆ ಒತ್ತಾಯಿಸಿ ಧರಣಿ

July 12, 2018

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಅರಕೆರೆ ಹೋಬಳಿ ಪೀಹಳ್ಳಿ ಮತ್ತು ಬನ್ನಹಳ್ಳಿ ವೃತ್ತದ ಗ್ರಾಮಲೆಕ್ಕಿ ಗರ (ವಿಎ) ವರ್ಗಾವಣೆಗೆ ಒತ್ತಾಯಿಸಿ ನಗರದ ವಿಶ್ವೇಶ್ವ ರಯ್ಯ ಪ್ರತಿಮೆ ಎದುರು ಬುಧ ವಾರ ವೃತ್ತಗಳ ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲಾಧಿ ಕಾರಿ ಅವರಿಗೆ ಮನವಿ ಸಲ್ಲಿ ಸಿದ ಪ್ರತಿಭಟನಾಕಾರರು, ಪೀಹಳ್ಳಿ ಮತ್ತು ಬನ್ನಹಳ್ಳಿ ವೃತ್ತದಲ್ಲಿ ಕಳೆದ 4 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಗ್ರಾಮಲೆಕ್ಕಾಧಿಕಾರಿ ನಿಂಗಪ್ಪಾಜಿ ಲಂಚಕೋರರಾಗಿದ್ದಾರೆಂದು ಆರೋಪಿಸಿದರು.

ಲಂಚ ನೀಡದಿದ್ದರೆ ಸಬೂಬು ಹೇಳುತ್ತಾರೆ. ಪ್ರಶ್ನಿಸಿದರೆ ಕ್ರಿಮಿನಲ್ ಮೊಕದ್ದಮೆ ಹಾಕುವುದಾಗಿ ರೈತರನ್ನು ಹೆದರಿಸುತ್ತಾರೆ. ವಾರದಲ್ಲಿ ಎರಡು ದಿನವೂ ಕಚೇರಿಯಲ್ಲಿ ಇರುವುದಿಲ್ಲ. ಒಟ್ಟಾರೆ ಲಂಚ ನೀಡದೆ ಯಾವುದೇ ಕೆಲಸ ಆಗಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ನಿಂಗಪ್ಪಾಜಿ ವಿರುದ್ಧ ಶ್ರೀರಂಗಪಟ್ಟಣ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಹಿಸಿಲ್ಲ. ನೀವಾದರೂ ಕ್ರಮವಹಿಸಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಬಿಜೆಪಿ ಯುವ ಮುಖಂಡ ಪೀಹಳ್ಳಿ ರಮೇಶ್, ಶಿವಣ್ಣ, ರವಿ, ಪ್ರಸನ್ನ, ಪಾಪಣ್ಣ, ಇತರರಿದ್ದರು.

Translate »