ಉದ್ಘಾಟನೆಗೂ ಮುನ್ನವೆ 3ನೇ ಬಾರಿ ಕುಸಿದ ರೈಲ್ವೆ ಸೇತುವೆ
ಹಾಸನ

ಉದ್ಘಾಟನೆಗೂ ಮುನ್ನವೆ 3ನೇ ಬಾರಿ ಕುಸಿದ ರೈಲ್ವೆ ಸೇತುವೆ

August 29, 2018

ಹೊಳೆನರಸೀಪುರ: ತಾಲೂಕಿನ ಹಂಗರ ಹಳ್ಳಿ ಬಳಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇ ತುವೆ ಉದ್ಘಾಟನೆಗೂ ಮುನ್ನವೇ ಪದೇ-ಪದೇ ಕುಸಿಯುತ್ತಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ಮೂಡಿಸಿದೆ.

ಹಾಸನ- ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಹಂಗರಹಳ್ಳಿ ಗ್ರಾಮದ ಬಳಿ ನಿರ್ಮಾಣವಾಗಿ ಅಂತಿಮ ಹಂತದಲ್ಲಿರುವ ರೈಲ್ವೆ ಮೇಲ್ಸೇತುವೆಯು ಈಗಾಗಲೇ 3 ಬಾರಿ ಕುಸಿದಿದ್ದು, ಸುತ್ತಲಿನ ಗ್ರಾಮ ಸ್ಥರು ಹಾಗೂ ಸೇತುವೆ ಸಮೀಪ ಸಂಚರಿಸುವ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ಸೇತುವೆ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೋಟ್ಯಾಂತರ ರೂ. ಅನುದಾನ ವ್ಯರ್ಥವಾಗಿದೆ. ಹಾಸನ ನಗರ ಮತ್ತು ಹೊಳೆನರಸೀಪುರ ರೈಲ್ವೆ ಮೇಲ್ಸೇತುವೆಗೆ ಆದ್ಯತೆ ನೀಡುವ ಬದಲು, ಹಂಗರಹಳ್ಳಿ ಸೇತುವೆಗೆ ಆದ್ಯತೆ ನೀಡಿದ್ದು ಯಾಕೆ? ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ಹಂಗರಹಳ್ಳಿ ಹಾಗೂ ಹೊಳೆನರಸೀಪುರ ರೈಲ್ವೆ ಮೇಲ್ಸೇತುವೆಗೆ ಅನುದಾನ ಮಂಜೂರಾತಿ ಮಾಡಿಸುವಲ್ಲಿ ಯಶಸ್ವಿ ಯಾಗಿದ್ದರು. ಇದರಲ್ಲಿ ಹೊಳೆನರಸೀಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಆದರೆ, ಕೋಟ್ಯಾಂತರ ರೂಪಾಯಿ ವೆಚ್ಚದಡಿ ನಿರ್ಮಾಣವಾಗಿ ಅಂತಿಮ ಹಂತದಲ್ಲಿರುವ ಹಂಗರಹಳ್ಳಿ ರೈಲ್ವೆ ಸೇತುವೆ ಕಳಪೆಯಾಗಿದ್ದು, ದಿನದಿಂದ ದಿನಕ್ಕೆ ಕುಸಿ ಯುತ್ತಾ ಆತಂಕ ಸೃಷ್ಟಿಸುತ್ತಿದೆ.

2 ತಿಂಗಳ ಈಚೆಗೆ ಸೇತುವೆಯ ಒಂದು ಭಾಗ ಕುಸಿದಿತ್ತು. ಬಳಿಕ ವಾರಹಿಂದೆಯೂ ಕುಸಿತವಾಗಿತ್ತು. ಈಗ ಸೋಮವಾರ ಮಧ್ಯಾಹ್ನ ಸುರಿದ ಮಳೆಯಿಂದ ರಾತ್ರಿ ಮತ್ತೊಮ್ಮೆ ಕುಸಿತಗೊಂಡಿದೆ. ಸೇತುವೆ ಪದೇ-ಪದೇ ಕುಸಿತವಾಗುತ್ತಿರುವುದರಿಂದ ಸೇತುವೆಯ ತಡೆ ಗೋಡೆಯು ಸಹ ಕುಸಿಯುತ್ತಿದ್ದು ಕಳಪೆ ಕಾಮಗಾರಿ ನಡೆದಿದೆ ಎಂಬುದನ್ನು ದೃಢಪಡಿಸುತ್ತಿದೆ.

ಕಾಮಗಾರಿ ವೇಳೆ ಗುಣಮಟ್ಟದ ವಸ್ತುಗಳು ಉಪ ಯೋಗಿಸಿಲ್ಲ. ರೈಲ್ವೆ ಸೇತುವೆಗೆ ಹಾಕಿರುವ ಮಣ್ಣು ಉಸುಬಿನಂತಿದ್ದು, ಸೇತುವೆ ಕುಸಿಯಲು ಕಾರಣವಾಗಿದೆ. ಗ್ರಾವಲ್ ಮಣ್ಣನ್ನು ತುಂಬಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ. ಕಳೆದ ಎರಡು ವರ್ಷಗಳಿಂದ ನಿರ್ಮಾಣ ವಾಗುತ್ತಿದ್ದ ರೈಲ್ವೆ ಮೇಲ್ ಸೇತುವೆ ಸಂಪೂರ್ಣ ಕುಸಿಯುವ ಸ್ಥಿತಿಯಲ್ಲಿದೆ. ಆದರೆ, ಅಧಿಕಾರಿಗಳು ಇದನ್ನು ಮರೆಮಾಚುತ್ತಿದ್ದು, ಅತಿ ದೊಡ್ಡದಾದ ಟಾರ್ಪಲ್ ಗಳನ್ನು ಮುಚ್ಚಿದ್ದಾರೆ. ಇದನ್ನು ನೋಡಿ ಸಾರ್ವ ಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕಾಮ ಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದ್ದು ಇದರ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಬೇಕು. ಮತ್ತು ರೈಲ್ವೆ ಇಲಾಖೆ ಇಂಜಿನಿಯರ್‍ಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ಕಾಮಗಾರಿ ನಡೆಸಿದ ಇಂಜಿನಿಯರ್‌ಗಳನ್ನು ಕೂಡಲೇ ಅಮಾನತು ಗೊಳಿಸಬೇಕು ಎಂದು ಸುತ್ತಲಿನ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಒತ್ತಾಯಿಸಿದ್ದಾರೆ.

ರೈಲ್ವೆ ಇಲಾಖೆ ಕಾಮಗಾರಿಯೇ ಈ ಮಟ್ಟದಲ್ಲಿ ನಡೆದರೆ ಹೇಗೆ? ಭಾರತೀಯ ರೈಲ್ವೆ ಇಲಾಖೆ ಕಾಮಗಾರಿ ಇಡೀ ಪ್ರಪಂಚದಲ್ಲೇ ಹೆಸರು ವಾಸಿಯಾಗಿದೆ. ಆದರೆ, ಈ ಕಾಮಗಾರಿಯ ಗುಣಮಟ್ಟ ಇನ್ನಿತರ ಕಾಮಗಾರಿಗಳ ಬಗ್ಗೆ ಅನುಮಾನ ಮೂಡಿಸು ತ್ತಿದೆ ಎಂದು ಸಾರ್ವಜನಿಕರು ದೂರಿದರು.

ಸೇತುವೆಯ ಕಳಪೆ ಕಾಮಗಾರಿಯ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ಕೇಂದ್ರ ರೈಲ್ವೆ ಸಚಿವರಿಗೂ ದೂರು ನೀಡಲು ಸಿದ್ಧತೆ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

Translate »