ತಿ.ನರಸೀಪುರದಲ್ಲಿ ಪ್ರಚಾರದ ಭರಾಟೆ ಜೋರು ಮತದಾರರ ಮನವೊಲಿಕೆಗೆ ಅಂತಿಮ ಕಸರತ್ತು
ಮೈಸೂರು

ತಿ.ನರಸೀಪುರದಲ್ಲಿ ಪ್ರಚಾರದ ಭರಾಟೆ ಜೋರು ಮತದಾರರ ಮನವೊಲಿಕೆಗೆ ಅಂತಿಮ ಕಸರತ್ತು

August 29, 2018

ತಿ.ನರಸೀಪುರ:  ಪುರಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ಪಟ್ಟಣದಾದ್ಯಂತ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದ್ದು, ಮತದಾರರ ಮನವೊಲಿಕೆಗೆ ಅಂತಿಮ ಕಸರತ್ತು ನಡೆಸಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕರು, ಮುಖಂಡರು ವಿವಿಧೆಡೆ ಮತಯಾಚನೆ ಮಾಡಿದರು.

ಪಟ್ಟಣದ ಹಳೇ ತಿರುಮಕೂಡಲಿನಿಂದ ಶಾಸಕ ಎಂ.ಅಶ್ವಿನ್‍ಕುಮಾರ್ ಚುನಾವಣಾ ಪ್ರಚಾರವನ್ನು ಆರಂಭಿಸಿ ವಾರ್ಡ್ 1ರ ಜೆಡಿಎಸ್ ಅಭ್ಯರ್ಥಿ ಸೌಮ್ಯ, 2ನೇ ವಾರ್ಡ್ ಅಭ್ಯರ್ಥಿ ಸಿದ್ದು(ಸಿಸ್ಟಮ್), ವಾರ್ಡ್ 3ರ ಅಭ್ಯರ್ಥಿ ಬಿ.ಉಮಾ, ವಾರ್ಡ್ 4ರ ಎಂ.ರಮೇಶ್, 5ನೇ ವಾರ್ಡ್ ಅಭ್ಯರ್ಥಿ ಟಿ.ಎಸ್.ಚಂದನ್ (ಹರೀಶ) ಅವರ ಪರ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮತಯಾಚಿಸಿದರು.

ಮತಯಾಚನೆ ನಂತರ ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲಮನ್ನಾ ಮಾಡಿ, ಖಾಸಗಿ ಸಾಲವನ್ನು ಮನ್ನಾ ಮಾಡುವಂತಹ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪಟ್ಟಣದ ಜನತೆ ಬದಲಾವಣೆ ಬಯಸುವ ಸಮಯ ಇದಾಗಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಕೂಡ ಹೊಸ ಮುಖಗಳಿಗೆ ಮನ್ನಣೆ ನೀಡುವಂತೆ ಮನವಿ ಮಾಡಿದರು.

ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನ ಸ್ವಾಮಿ, ವರುಣಾ ಕ್ಷೇತ್ರಾಧ್ಯಕ್ಷ ತಾಯೂರು ಪ್ರಕಾಶ್, ಜಿ.ಪಂ ಮಾಜಿ ಸದಸ್ಯ ಎಸ್.ಆರ್. ವರದರಾಜು, ಮುಖಂಡರಾದ ಜಯರಾಂ, ಮುಖಂಡರಾದ ಎಸ್.ಎಂ.ಶಂಭುದೇವನ ಪುರ ಎಂ.ರಮೇಶ್, ನವೀನ್, ರವಿಕುಮಾರ್, ಮಹದೇವಸ್ವಾಮಿ, ಚೇತನ್‍ಕುಮಾರ್, ನಾಗನಾಯ್ಕ, ಶಿವಣ್ಣ, ಗೋವಿಂದ, ಜಗದೀಶ್, ನಾಗೇಶ್, ಸತೀಶ್‍ಗೌಡ, ಸೋಮಶೇಖರ್, ಮುಕುಂದ, ಶಿವಕುಮಾರ, ಕಿರಣ, ಪುರ ಷೋತ್ತಮ್, ಚಿದಂಬರಂಗೌಡ, ಸಾಗರ್, ಎಸ್.ಮಾವಿನಹಳ್ಳಿ ರಾಜೇಶ್ ಇತರರು ಇದ್ದರು.

ಯತೀಂದ್ರ, ಸುನೀಲ್ ಬೋಸ್ ಕ್ಯಾಂಪೇನ್: ಪಟ್ಟಣದ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಚುನಾವಣೆಯಲ್ಲಿ ಮತಯಾಚನೆಗೆ ಜಂಟಿ ಕಾರ್ಯಾಚರಣೆ ಆರಂಭಿಸಿರುವ ವರುಣಾ ಶಾಸಕ ಡಾ.ಯತೀಂದ್ರ ಹಾಗೂ ವಸತಿ ಯೋಜನೆ ಜಾಗೃತಿ ಉಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಸುನೀಲ್ ಬೋಸ್ ಅವರು ಪಟ್ಟಣದ ವಿನಾಯಕ ಕಾಲೋನಿಯಲ್ಲಿ 17ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ರಾಜೇಶ್ವರಿ ಪರ ಮತಯಾಚಿಸಿದರು.

ಮತಯಾಚನೆ ಬಳಿಕ ಸುನೀಲ್ ಬೋಸ್ ಮಾತನಾಡಿ, ಕಾಂಗ್ರೆಸ್ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಎಲ್ಲಾ ವಾರ್ಡ್‍ಗಳಲ್ಲಿಯೂ ಶಾಸಕ ಡಾ.ಎಸ್.ಯತೀಂದ್ರ ಜೊತೆಗೂಡಿ ಮತದಾರರ ಮನವೊಲಿಸುವ ಪ್ರಯತ್ನವನ್ನು ಮಾಡಿದ್ದೇವೆ. 23 ವಾರ್ಡ್‍ಗಳಿಗೂ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಕಾಂಗ್ರೆಸ್ ಗೆಲುವು ಖಚಿತ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಜಿ.ಪಂ ಸದಸ್ಯ ಮಂಜುನಾಥನ್, ಮಾಜಿ ಸದಸ್ಯ ಕೆ.ಮಹದೇವ, ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ನಿರ್ದೇಶಕ ಮಹ ದೇವಣ್ಣ, ವರುಣಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಟಿಎಪಿಎಂಸಿಎಂಎಸ್ ನಿರ್ದೇಶಕ ಬಿ.ಮಹದೇವ, ಪುರಸಭೆ ಸದಸ್ಯ ರಾಘವೇಂದ್ರ, ಪ.ಪಂ ಮಾಜಿ ಅಧ್ಯಕ್ಷರಾದ ಕನಕರಾಜು, ಎನ್.ಮಹದೇವಸ್ವಾಮಿ, ವೀರೇಶ್, ಎಸ್.ನಂಜುಂಡಸ್ವಾಮಿ, ಮೃಗಾ ಲಯ ಪ್ರಾಧಿಕಾರದ ಮಾಜಿ ನಿರ್ದೇಶಕ ಅಮ್ಜದ್‍ಖಾನ್, ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜು(ಚೀಕಾ), ಕೆಪಿಸಿಸಿ ಅಲ್ಪ ಸಂಖ್ಯಾತ ಸಂಚಾಲಕ ಬಿ.ಮನ್ಸೂರ್ ಆಲಿ ಇನ್ನಿತರರು ಹಾಜರಿದ್ದರು.

ಪಕ್ಷೇತರ ಅಭ್ಯರ್ಥಿ ನಿವೃತ್ತಿ: ಪುರಸಭೆ ಚುನಾವಣೆಯ 7ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಅಕ್ಕಿ ನಾಗಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿ ಪಿ.ಪುಟ್ಟರಾಜು ಅವರಿಗೆ ಬೆಂಬಲ ಸೂಚಿಸಿ, ಕಣದಿಂದ ನಿವೃತ್ತಿ ಘೋಷಿಸಿ ದರು. ಹಿರಿಯೂರು ಪಿಎಸಿಸಿಎಸ್ ಅಧ್ಯಕ್ಷ ನಾಗಪ್ಪ, ಮುಖಂಡರಾದ ಮೆಡಿಕಲ್ ನವೀನ, ಹಿರಿಯೂರು ವಿರೇಂದ್ರ(ನವೀನ), ಅಂಗಡಿ ಶೇಖರ, ಫ್ಯಾನ್ಸಿ ಮೋಹನ, ನಟರಾಜು, ಲಕ್ಷ್ಮಣ, ಮಧು ಹಾಗೂ ಇನ್ನಿತರರು ಹಾಜರಿದ್ದರು.

Translate »