ಜನತೆಗೆ 24×7 ಕುಡಿಯುವ ನೀರು ಸರಬರಾಜು
ಹಾಸನ

ಜನತೆಗೆ 24×7 ಕುಡಿಯುವ ನೀರು ಸರಬರಾಜು

August 28, 2018

ಹೊಳೆನರಸೀಪುರ: ಪಟ್ಟಣದ ಜನತೆಗೆ 24×7 ಕುಡಿಯುವ ನೀರು ಸರಬ ರಾಜು ಮಾಡಲಾಗುವುದು ಎಂದು ಲೋಕೋ ಪಯೋಗಿ, ಜಿಲ್ಲಾ ಉಸ್ತವಾರಿ ಸಚಿವ ಹೆಚ್.ಡಿ.ರೇವಣ್ಣ ಭರವಸೆ ನೀಡಿದರು.

ಇದೇ ತಿಂಗಳ 31ರಂದು ನಡೆಯುವ ಪುರಸಭೆ ಚುನಾವಣೆ ಹಿನ್ನೆಲೆ ಅಭ್ಯರ್ಥಿ ಗಳ ಪರ ಪ್ರಚಾರಕ್ಕೂ ಮುನ್ನ ಪಟ್ಟಣದ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, 20 ವರ್ಷಗಳಿಂದಲೂ ಜೆಡಿಎಸ್ ಪುರ ಸಭಾ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಪ್ರಸ್ತುತ ಚುನಾವಣೆಯಲ್ಲೂ 23 ವಾರ್ಡ್ ಗಳಲ್ಲಿ ಜಯಭೇರಿ ಬಾರಿಸಿ ಅಧಿಕಾರ ಹಿಡಿಯಲಿದೆ ಎಂದರು.

ಪುರಸಭೆ ಚುನಾವಣೆಗೆ ಆಯಾಯ ವಾರ್ಡ್‍ನ ಕಾರ್ಯಕರ್ತರು ಹಾಗೂ ಎಲ್ಲಾ ಜನಾಂಗದ ಪ್ರಮುಖರೊಂದಿಗೆÉ ಚರ್ಚಿಸಿದ ನಂತರ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವ ಕಾಶ ನೀಡಿರುವುದರಿಂದ ಪಟ್ಟಣದ 23 ವಾರ್ಡ್‍ಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಲವು ವಾರ್ಡ್‍ಗಳ ರಸ್ತೆ, ಯುಜಿಡಿ, ಚರಂಡಿ, ಅವ್ಯವಸ್ಥೆಯಿಂದ ಕೂಡಿದ್ದು, ಚುನಾವಣೆ ನಂತರ ದುರಸ್ತಿಪಡಿ ಸಲಾಗುವುದು. ಪಟ್ಟಣಕ್ಕೆ ಅಗತ್ಯ ಸೌಕರ್ಯ ಹಾಗೂ ಹೊಸ ಬಡಾವಣೆಗಳಾದ ವಿದ್ಯುತ್ ನಗರ, ಚಿಟ್ಟನ ಹಳ್ಳಿ ಬಡಾವಣೆ, ಪೂಜೆ ಕೊಪ್ಪಲು ವಾರ್ಡ್ ಗಳಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲು ನೀಲ ನಕ್ಷೆ ಸಿದ್ಧಪಡಿ ಸಲಾಗಿದೆ. ಮೊದಲನೇ ವಾರ್ಡ್‍ನ ಸೂರನಹಳ್ಳಿಯಲ್ಲಿ ಗ್ರಾಮ ದೇವತೆಯ ದೇವಸ್ಥಾನ ಕಾಮಗಾರಿ ಪ್ರಗತಿ ಯಲ್ಲಿದೆ ಎಂದು ತಿಳಿಸಿದ ರೇವಣ್ಣ, ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಟ್ಟಣದ ಅಭಿವೃದ್ಧಿಗೆ ತಮಗೆ ಇನ್ನು ಹೆಚ್ಚಿನ ಅಧಿಕಾರ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ಈಗಾಗಲೇ 20ವರ್ಷಗಳ ಜೆಡಿಎಸ್ ಪಕ್ಷದ ಪುರಸಭಾ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತುಕೊಟ್ಟಿದ್ದು, ಈ ಬಾರಿಯೂ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಸಾವಿರಾರು ಕೋಟಿ ರೂ. ಅನುದಾನ ತರುವುದಾಗಿ ಇದೇ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.

ಬಳಿಕ ಪಟ್ಟಣದ 2, 3, 4, 5ನೇ ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ದರು. ಪ್ರಚಾರದಲ್ಲಿ ಅಭ್ಯರ್ಥಿಗಳಾದ ಎ. ಜಗನ್ನಾಥ್, ಜ್ಯೋತಿ ಮಂಜುನಾಥ್, ಕೆ.ಆರ್. ಸುಬ್ರಹ್ಮಣ್ಯ, ಕೆ.ಶ್ರೀಧರ್, ಸಿ.ಜಿ.ವೀಣಾ, ಜಿಕ್ರಿಯಾ ಷರೀಫ್, ಎಂ.ನಿಂಗಯ್ಯ, ತ್ರಿಲೋಚನಾ, ಜಯಲಕ್ಷ್ಮಿ, ಕುಮಾರಸ್ವಾಮಿ, ಟಿ.ಶಾಂತಿ, ಮಂಜಣ್ಣ ಹಾಜರಿದ್ದರು.

Translate »