ಮರ್ಯಾದೆಗಂಜಿದ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು
ಹಾಸನ

ಮರ್ಯಾದೆಗಂಜಿದ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು

August 28, 2018

ಅರಕಲಗೂಡು: ಮರ್ಯಾದೆಗಂಜಿ ಇಡೀ ಕುಟುಂಬವೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ದೊಡ್ಡನಾಯಕ ಕೊಪ್ಪಲಿನಲ್ಲಿ ನಡೆದಿದೆ.ಗ್ರಾಮದ ಕೃಷ್ಣ (55), ಪತ್ನಿ ನಂಜಮ್ಮ (50), ಪುತ್ರಿ ಭೂಮಿಕಾ (22) ಮೃತರು.

ಘಟನೆ ವಿವರ: ಆ.6ರಂದು ನಡೆದ ಇದೇ ಗ್ರಾಮದ ನಾಗರಾಜು ಎಂಬುವರ ಕೊಲೆ ಪ್ರಕರಣದಲ್ಲಿ ಅಡಿಕೆಬೊಮ್ಮನಹಳ್ಳಿ ಗ್ರಾಮದ ಶ್ರೀಧರ ಮತ್ತು ಕೃಷ್ಣ ಅವರ ಪುತ್ರ ಲೋಕೇಶನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಮಧ್ಯೆ ನಾಗರಾಜು ಕೊಲೆ ಹಿಂದೆ ಕೃಷ್ಣ ಅವರ ಕುಟುಂಬ ಭಾಗಿಯಾಗಿದೆ ಎಂದು ನಾಗರಾಜು ಮನೆಯವರು ಆರೋಪಿಸಿದ್ದರು. ಅಲ್ಲದೆ ಆರೋಪ ಸಾಬೀತಾದರೆ ಕೃಷ್ಣ ಅವರ ಮನೆಯನ್ನು ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಈ ಬೆದರಿಕೆ ಮತ್ತು ಕೊಲೆ ಪ್ರಕರಣದಲ್ಲಿ ತಮ್ಮ ಮಗನನ್ನು ಪೆÇಲೀಸರು ಬಂಧಿಸಿ ವಿಚಾರಣೆ ಮಾಡಿದ ಹಿನ್ನೆಲೆಯಲ್ಲಿ ಕುಟುಂಬದ ಮಾರ್ಯಾದೆ ಹೋಯಿತೆಂದು ಇಡೀ ಕುಟುಂಬವೇ ಊಟದಲ್ಲಿ ವಿಷ ಬೆರೆಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದೆ.

ನಾಗರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಕಲಗೂಡು ಪೆÇಲೀಸರು ಪಕ್ಕದ ಅಡಿಕೆಬೊಮ್ಮನಹಳ್ಳಿ ಗ್ರಾಮದ ಶ್ರೀಧರನನ್ನು ಬಂಧಿಸಿದ್ದರು. ಜೊತೆಗೆ ಎರಡು ದಿನಗಳ ಹಿಂದೆ ಮೃತ ಕೃಷ್ಣ ಪುತ್ರ ಲೋಕೇಶನನ್ನು ಪೆÇಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಭಾನುವಾರ ಸಂಜೆ ಪಕ್ಕದ ಮನೆಯವರಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Translate »