ಮದ್ಯದಂಗಡಿಯಲ್ಲಿ ಎಂಆರ್‍ಪಿ ಬೆಲೆ ಫಲಕ ಹಾಕಲಿ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ
ಹಾಸನ

ಮದ್ಯದಂಗಡಿಯಲ್ಲಿ ಎಂಆರ್‍ಪಿ ಬೆಲೆ ಫಲಕ ಹಾಕಲಿ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

December 6, 2018

ಹಾಸನ: ಮದ್ಯದಂಗಡಿಯಲ್ಲಿ ಎಂಆರ್‍ಪಿ ಫಲಕ ಹಾಕದೆ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿದ್ದು, ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಗಮನ ನೀಡಿ ಸೂಕ್ತ ಕ್ರಮ ಜರುಗಿಸಿ ಫಲಕ ಹಾಕಿಸುವಂತೆ ತಾಲೂಕು ಪಂಚಾ ಯಿತಿ ಸದಸ್ಯರು ಒತ್ತಾಯಿಸಿದರು.

ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪ್ರಮುಖ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಬಳಿ ಗಮನ ಸೆಳೆದರು. ಮದ್ಯವನ್ನು ಎಂಆರ್‍ಪಿ ದರದಲ್ಲಿ ಮಾರ ಬೇಕು ಎಂದು ಹೇಳಲಾಗಿದ್ದರೂ ಯಾವ ಮದ್ಯದಂಗಡಿಯಲ್ಲಿಯೂ ಕೂಡ ದರದ ಬಗ್ಗೆ ಫಲಕ ಹಾಕದೆ ಅವರಿಗೆ ಇಷ್ಟ ಬಂದ ದರವನ್ನು ಪಡೆಯುತ್ತಿದ್ದಾರೆ ಎಂದು ದೂರಿದರು.

ಗಾಢೇನಹಳ್ಳಿ ಬಳಿ ಡಾಬಾ ಮತ್ತು ಮನೆ ಒಳಗೆ ಮದ್ಯವನ್ನು ಮಾರಾಟ ಮಾಡು ತ್ತಿದ್ದು, ಕುಡಿದು ಅಪಘಾತವಾಗಿ ಈಗಾ ಗಲೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದರು. ಗೊರೂರು ಪ್ರವಾಸಿ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಸಣ್ಣ ಪುಟ್ಟ ಅಂಗಡಿ ಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಅದರ ಬಗ್ಗೆ ಯಾಕೆ ಕ್ರಮವಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು. ಹೈವೇ ಬಳಿ ಬೀದಿ ಬೀದಿಯಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು, ರಾತ್ರಿ ಯಾವ ಸಮಯ ದಲ್ಲೂ ಹೋದರೂ ಸಿಗುತ್ತಿದ್ದು, ಇದಕ್ಕೆ ಕೂಡಲೆ ಕಡಿವಾಣ ಹಾಕಬೇಕು ಎಂದರು.

ಇದಕ್ಕೆ ಉತ್ತರಿಸಿದ ಅಬಕಾರಿ ಅಧಿಕಾರಿ ಗಳು ಗೊರೂರಿನಲ್ಲಿ ಹಾಸನ ಅಬಕಾರಿ ಇಲಾಖೆಗೆ ಅಧಿಕಾರಿಯಾಗಿ ಬಂದು ಕೇವಲ ಒಂದು ವಾರವಾಗಿದೆ. ಮುಂದಿನ ದಿನಗಳಲ್ಲಿ ನಿಗಾವಹಿಸಲಾಗುವುದು ಎಂದರು. ಗೊರೂರು ಗ್ರಾಮದಲ್ಲಿ 3479 ಜನ ಸಂಖ್ಯೆ ಇರುವುದರಿಂದ ಮದ್ಯದಂಗಡಿ ತೆರೆಯಲು ಅವಕಾಶ ಇರುವುದಿಲ್ಲ. ಕನಿಷ್ಟ 5 ಸಾವಿರ ಜನಸಂಖ್ಯೆ ಇರಬೇಕು. ಅಕ್ರಮ ವಾಗಿ ಮದ್ಯ ಮಾರಾಟ ಮಾಡುತ್ತಿರು ವುದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಸರ್ಕಾರಿ ಅನುದಾನದಲ್ಲಿ ಕುರಿ ಮತ್ತು ಕೋಳಿ ಹಂಚಲು ಬಿಟ್ಟರೆ ಬೇರೆ ಯಾವು ದಕ್ಕೂ ಉಪಯೋಗವಾಗುವುದಿಲ್ಲವೇ. ಪಶು ಇಲಾಖೆಯಿಂದ ಎಲ್ಲೆಲ್ಲಿ ಪಶು ಆಸ್ಪತ್ರೆ ಇದೆ ಎಂದು ಪರಿಶೀಲನೆ ಮಾಡಿದ್ದೀರಾ, ಗೊರೂರು ಪಶು ಆಸ್ಪತ್ರೆ ಕಟ್ಟಡ ಒಂದು ಬಾರಿ ನೋಡಿ ತಿಳಿಯುತ್ತದೆ. ಮಳೆ ಬಂದರೆ ಆಸ್ಪತ್ರೆ ಒಳಗೆ ನೀರು ಸೋರು ತ್ತಿದ್ದು, ಪರಿಶೀಲನೆ ಮಾಡಿ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ತಾಲೂಕು ಪಂಚಾಯಿತಿ ಸದಸ್ಯರು ಪಶು ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಸರಕಾರದಿಂದ ಬರುವ ಅನು ದಾನವನ್ನು ಯಾವ ರೀತಿ ಸದುಪಯೋಗ ವಾಗುತ್ತಿದೆ ಎಂಬುದರ ಬಗ್ಗೆ ತಾಪಂ ಅಧ್ಯಕ್ಷ ಬಿ.ಟಿ.ಸತೀಶ್ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಶು ಇಲಾಖೆ ಅಧಿಕಾರಿಗಳು, ಸರಕಾರ ನೀಡುವ ಅನು ದಾನದಲ್ಲಿ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದ್ದು, ಕುರಿ ಮತ್ತು ಕೋಳಿ ಸಾಗ ಣಿಕೆ ಬಗ್ಗೆ ತರಬೇತಿ ಕೂಡ ಕೊಡಲಾಗು ತ್ತಿದ್ದು, ಎಲ್ಲೆಲ್ಲಿ ಪಶು ಆಸ್ಪತ್ರೆಗಳಿವೆ ಆ ಸ್ಥಳಕ್ಕೆ ಭೇಟಿ ನೀಡಲಾಗಿದೆ ಎಂದರು. ಗೊರೂರು ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಮಳೆ ಬಂದರೆ ನೀರು ಸೋರುತ್ತದೆ. ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಗಮನ ಕೊಡುವುದಾಗಿ ಹೇಳಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ದೇವರಾಜೇಗೌಡ ಮಾತನಾಡಿ, ಏನೇ ಸಮಸ್ಯೆ ಇದ್ದರೂ ಸಭೆವರೆಗೂ ಕಾಯಬೇಡಿ, ನಮಗೆ ತಿಳಿಸಿ ಎಂದು ಸಲಹೆ ನೀಡಿದರು.

ಚೆಸ್ಕಾಂ ಅಧಿಕಾರಿಗಳು ಇದಕ್ಕೆ ಉತ್ತರಿಸಿ, ತಮ್ಮ ಇಲಾಖೆಯಲ್ಲಿರುವ ಕೆಲ ಸಮಸ್ಯೆ ಯನ್ನು ತೋಡಿಕೊಂಡರು. ನಿಮ್ಮ ಸಮಸ್ಯೆ ಗಳಿಗೆ ಸ್ಪಂದಿಸುವುದಾಗಿ ಭರವಸೆ ನುಡಿ ದರು. ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಬೇಬಿ, ಸಾಮಾಜಿಕ ಸ್ಥಾಯಿ ಸಮಿತಿಯ ಯು.ಕೆ. ಶಿವನಂಜಪ್ಪ ಇತರರು ಇದ್ದರು.

Translate »