ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಮಹಿಳೆಯರಿಗೆ ಗ್ರಾಮ ವಿಕಾಸ ಯೋಜನೆ ಬಗ್ಗೆ ಮಾಹಿತಿ
ಹಾಸನ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಮಹಿಳೆಯರಿಗೆ ಗ್ರಾಮ ವಿಕಾಸ ಯೋಜನೆ ಬಗ್ಗೆ ಮಾಹಿತಿ

December 6, 2018

ಬೇಲೂರು: ಗ್ರಾಮ ವಿಕಾಸ ಕಾರ್ಯಕ್ರಮ ಯೋಜನೆಯಡಿ ಕೃಷಿ ಇಲಾಖೆ, ಪೊಲೀಸ್ ಠಾಣೆ, ಮಹಿಳಾ ಸಹಾಯ ವಾಣಿ ಕೇಂದ್ರದಲ್ಲಿ ಏನೆಲ್ಲಾ ಪ್ರಯೋಜನ ವನ್ನು ಯಾವ ರೀತಿ ಪಡೆದುಕೊಳ್ಳಬೇಕೆಂಬ ಕುರಿತು ಇಂದು ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಸಂಘದಿಂದ ತಾಲೂಕಿನ ಸಾಣೇನಹಳ್ಳಿ ಹಾಗೂ ಕಬ್ಬಿಗರಹಳ್ಳಿ ಗ್ರಾಮದ ಧರ್ಮ ಸ್ಥಳ ಸಂಘದ ಮಹಿಳೆಯರಿಗೆ ಸ್ಥಳ ಭೇಟಿ ಮೂಲಕ ಅರಿವು ಮೂಡಿಸಲಾಯಿತು.

ಮೊದಲಿಗೆ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿದ ಮಹಿಳೆಯರು, ಮನೆಯಲ್ಲಿ ಗ್ಯಾಸ್ ಸಿಲಿಂಡರ್ ನಿರ್ವಹಣೆ, ಬೆಂಕಿ ಹತ್ತಿದ ಸಂದರ್ಭ ಅದನ್ನು ಆರಿಸುವುದು ಹೇಗೆ ಹಾಗೂ ಏನೆಲ್ಲಾ ಮುಂಜಾಗ್ರತೆ ವಹಿಸಬೇಕೆಂಬುದರ ಕುರಿತು ಮಾಹಿತಿ ಪಡೆದರು. ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ, ಮಹಿಳೆಯರ ಮೇಲಿನ ದೌರ್ಜನ್ಯ, ಪತಿಯಿಂದ ದೌರ್ಜನ್ಯ ನಡೆದಾಗ ದೂರು ಯಾವ ರೀತಿ ಕೊಡುವುದು, ಕೆಲಸ ನಿರ್ವಹಿಸುವ ಸ್ಥಳದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಲಾಯಿತು.

ಕೃಷಿ ಇಲಾಖೆಗೆ ಭೇಟಿ ನೀಡಿದ ಸಂದರ್ಭ ಮಣ್ಣಿನ ಪರೀಕ್ಷೆ, ಸಬ್ಸಿಡಿ, ಇಲಾಖೆಯಿಂದ ದೊರೆಯುವ ಸೌಲಭ್ಯಗಳು, ಬೀಜದ ಗುಣ ಗಳು, ಬಿತ್ತನೆ ಬೀಜ, ಗೊಬ್ಬರ ಬಳಕೆ ಇತ್ಯಾದಿ ಗಳ ಕುರಿತು ಹೆಚ್ಚಿನ ಮಾಹಿತಿ ಪಡೆದು ಕೊಂಡರು. ನಂತರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಮುಖ್ಯಪೇದೆ ಸುರೇಶ್ ಅವರು, ಪೋಷಕರು ಮಕ್ಕಳಿಗೆ ಮೊಬೈಲ್ ಕೊಡುವುದನ್ನು ನಿಲ್ಲಿಸಬೇಕು. ಅಪರಿಚಿತ ವ್ಯಕ್ತಿ ಕಂಡೊಡನೆ ಸ್ನೇಹ ಬೆಳೆಸುವುದನ್ನು ತಡೆಯಬೇಕು. ಮೊಬೈಲ್ ಮೂಲಕ ಸೆಲ್ಫಿ ತೆಗೆದುಕೊಳ್ಳುವ ವೇಳೆ ಎಚ್ಚರ ವಹಿಸಬೇಕು.

ಮೊಬೈಲ್ ಬಳಕೆ ಮಾಡುವವರು ತಮ್ಮ ಪಾಸ್ ವರ್ಡ್ ಯಾರಿಗೂ ಕೊಡಬಾರದು. ಆಭ ರಣ ತೊಡುವುದು ಅಲಂಕಾರಕ್ಕೆ ಇರಬೇಕೇ ಹೊರತು ಅದು ಕಳ್ಳರಿಗೆ ಅನುಕೂಲ ಆಗು ವಂತೆ ಪ್ರದರ್ಶನ ಇರಕೂಡದು ಎಂದು ಸಲಹೆ ನೀಡಿದರು. ಗ್ರಾಮಾಭಿವೃದ್ಧಿ ಸಂಘದ ಜ್ಞಾನವಿಕಾಸ ಅಧಿಕಾರಿ ಜಯಲಕ್ಷ್ಮೀ, ಸಂಘದ ಸೇವಾ ಪ್ರತಿನಿಧಿ ಲತಾ ಇತರರು ಇದ್ದರು.

Translate »