ನಿವೇಶನ ರಹಿತರಿಗೆ ನೀಡುವ ಜಮೀನು ದಾಖಲಾತಿ ಗ್ರಾಪಂಗೆ ಹಸ್ತಾಂತರ
ಹಾಸನ

ನಿವೇಶನ ರಹಿತರಿಗೆ ನೀಡುವ ಜಮೀನು ದಾಖಲಾತಿ ಗ್ರಾಪಂಗೆ ಹಸ್ತಾಂತರ

December 6, 2018

ರಾಮನಾಥಪುರ: ಹಾಸನ ಅಪರ ಜಿಲ್ಲಾಧಿಕಾರಿಗಳ ನಿರ್ದೇಶನ ದನ್ವಯ ರಾಮನಾಥಪುರ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಕೋಟವಾಳು ಗ್ರಾಮದ ಸುಬ್ರಹ್ಮಣ್ಯನಗರದಲ್ಲಿ 6 ಎಕರೆ ಪ್ರದೇಶ ವನ್ನು ನಿವೇಶನ ರಹಿತರಿಗೆ ನಿವೇಶನ ನೀಡಲು ಕಾಯ್ದಿರಿಸಿರುವ ಜಮೀನನ್ನು ನಾಡಕಚೇರಿ ರಾಜಸ್ವ ನಿರೀಕ್ಷಕ ಸ್ವಾಮಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೇಶ್ ಅವರಿಗೆ ಸದರಿ ಜಾಗದ ದಾಖ ಲಾತಿ ಪತ್ರ ಇಂದು ಹಸ್ತಾಂತರಿಸಿದರು.

ಸಾರ್ವಜನಿಕರಿಂದ ಒತ್ತಾಯವಾಗಿತ್ತು: ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟವಾಳು ಗ್ರಾಮದ ಸುಬ್ರಹ್ಮಣ್ಯನಗರದಲ್ಲಿ ಮಾಜಿ ಕೋಟ ವಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೋಟ ವಾಳು ಬಸವರಾಜಶೆಟ್ಟಿ ಅವರ ಸಹಕಾರ ದಿಂದ ಮಂಜೂರಾಗಿರುವ ನಿವೇಶನ ರಹಿತ ರೈತರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ದೀನದಲಿತರಿಗೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು.

ಇತ್ತೀಚೆಗೆ ಅತಿವೃಷ್ಠಿಯಿಂದ ಕಾವೇರಿ ನದಿ ಪ್ರವಾಹದಿಂದ ರಾಮನಾಥಪುರ ಐ.ಬಿ.ಸರ್ಕಲ್ ದೇವಸ್ಥಾನದ ಸುಮಾರು 50ಕ್ಕೂ ಹೆಚ್ಚು ಮನೆಗಳು ಹಾಳಾಗಿದ್ದು, ಅಲ್ಲಿಯ ನಿವಾಸಿಗಳ ತೊಂದರೆ ಅರಿತ ಶಾಸಕ ಡಾ. ಎ.ಟಿ.ರಾಮಸ್ವಾಮಿ ಅವರ ತುರ್ತಾಗಿ ಈ 6 ಎಕರೆ ಜಮೀನನ್ನು ತಹ ಶೀಲ್ದಾರ್ ಕಾರ್ಯಾಲಯದಿಂದ ರಾಮನಾಥ ಪುರ ನಾಡಕಚೇರಿ ಮತ್ತು ನಾಡಕಚೇರಿ ಯಿಂದ ಗ್ರಾಮ ಪಂಚಾಯಿ ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ನಿವೇಶನ ರಹಿತರಿಗೆ ನಿವೇಶನ ನೀಡುವ ಸಲುವಾಗಿ ಹಸ್ತಾಂತರಿಸಲು ಕ್ರಮ ಕೈಗೊಂಡಿರು ವುದಕ್ಕೆ ಇಲ್ಲಿಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ನಾಡಕಚೇರಿ ಉಪತಹಶೀೀಲ್ದಾರ್ ಜಿ.ಸಿ.ಚಂದ್ರು, ರಾಜಸ್ವ ನಿರೀಕ್ಷಕ ಸ್ವಾಮಿ, ಲೆಕ್ಕಾಧಿಕಾರಿ ಧರ್ಮೇಶ್ ಅವರು ರಾಮನಾಥಪುರ ಪಂಚಾಯಿತಿ ಅಧ್ಯಕ್ಷ ಯೋಗೇಶ್ ಮತ್ತು ಅಭಿವೃದ್ಧಿ ಅಧಿಕಾರಿ ಎಚ್.ಇ.ವಿಜಯ ಕುಮಾರ್, ಕಾರ್ಯದರ್ಶಿ ಎಂ.ಸಿ. ಕುಮಾರ್ ಅವರಿಗೆ ಹಸ್ತಾಂತರಿಸಿದರು.

Translate »