ಮೈಸೂರು: ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಂಡಿ ಯನ್ ಸೊಸೈಟಿ ಫಾರ್ ಟ್ರೈನಿಂಗ್ ಅಂಡ್ ಡೆವಲಪ್‍ಮೆಂಟ್ ಸಂಸ್ಥೆಯು 2019ರ ಜನವರಿಯಲ್ಲಿ 18 ತಿಂಗಳ ತರಬೇತಿ ಮತ್ತು ಅಭಿವೃದ್ಧಿ ಡಿಪ್ಲೊಮಾ ಕೋರ್ಸ್ ಆರಂಭಿ ಸುತ್ತಿದ್ದು, ಈ ಸಂಬಂಧ ಡಿ.7 ಮತ್ತು 8ರಂದು ಮೈಸೂರಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಕಾರ್ತಿಕೇಯನ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿದೆ. ಸಂಸ್ಥೆಯ ಮೈಸೂರು ಶಾಖೆಯ ಅಧ್ಯಕ್ಷ ಪ್ರೊ.ಎ.ಆರ್.ದ್ವಾರಕಾನಾಥ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ತರಬೇತಿ ಮತ್ತು ಅಭಿವೃದ್ಧಿ ಕಾರ್ಯ ನೋಡಿ ಕೊಳ್ಳಲು ಅಗತ್ಯವಾದ ಸಿಬ್ಬಂದಿ, ಇನ್ನಿತರರಿಗೆ ಈ ತರಬೇತಿ ನಡೆಯಲಿದ್ದು, ಡಿ.8ರಂದು ಬೆಳಿಗ್ಗೆ 9.30 ಗಂಟೆಗೆ ಮೈಸೂರಿನ ದಾಸಪ್ರಕಾಶ್ ಪ್ಯಾರಡೈಸ್‍ನಲ್ಲಿ ಶೈಕ್ಷಣಿಕ ಸಿಬ್ಬಂದಿ ಮತ್ತು ಉದ್ಯಮಿಗಳೊಂದಿಗೆ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರು ವಿವಿಧ ವಿಷಯ ಕುರಿತು ಮಾತನಾಡ ಲಿದ್ದಾರೆ ಎಂದರು. ಸಂಘಟನಾ ನಡವಳಿಕೆ, ಡಿಜಿಟಲ್ ತಂತ್ರಜ್ಞಾನ ಇನ್ನಿತರ ಎಂಟು ರೀತಿಯ ತಾಂತ್ರಿಕ ಹಾಗೂ ತಾಂತ್ರಿಕೇತರ ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ಸಂಸ್ಥೆಯ ಡಿಪ್ಲೊಮಾ ಪ್ರಯೋಜನ ಪಡೆಯುವುದರಿಂದ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ತರಬೇತಿ ಮತ್ತು ಅಭಿವೃದ್ಧಿ ಸೇವೆಗೆ ಸೇರ್ಪಡೆ ಅಥವಾ ತೊಡಗಿಸಿಕೊಳ್ಳುವ ಅವಕಾಶವಿದೆ ಎಂದರು. ಹೆಚ್ಚಿನ ಮಾಹಿತಿಗೆ ಮೊ- 9886756745 ಸಂಪರ್ಕಿಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಪ್ರೊ.ಸುರೇಶ್, ಪ್ರೊ.ಭರತ್, ಶ್ರೀನಿವಾಸ್ ಉಪಸ್ಥಿತರಿದ್ದರು.