ಹೊಳೆನರಸೀಪುರ: ಸಿಎಂ ಆಪ್ತ, ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಚುನಾವಣಾ ಪ್ರಚಾರಕ್ಕೆ ಆಗಮಿಸದಂತೆ ಜೆಡಿಎಸ್ ಬೆಂಬಲಿಗರಿಂದ ತಾಲೂಕಿನ ವಿವಿಧೆಡೆ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತವಾಗಿದ್ದು, ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಲ ಜೆಡಿಎಸ್ ಕಾರ್ಯಕರ್ತರು ರಸ್ತೆಗೆ ಮಣ್ಣು ಸುರಿದು, ಟ್ರಾಕ್ಟರ್ ನಿಲ್ಲಿಸಿ ತಡೆಯೊಡ್ಡಿದ್ದರೆ, ಮಹಿಳಾ ಕಾರ್ಯ ಕರ್ತರು ಪೊರಕೆ ಪ್ರದರ್ಶಿಸಿ ಅಭ್ಯರ್ಥಿ ಬಾಗೂರು ಮಂಜೇಗೌಡ ಚುನಾವಣಾ ಪ್ರಚಾರಕ್ಕೆ ಆಗಮಿಸದಂತೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಹಲವೆಡೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ…
ಹಾಸನ
ಹೆಚ್.ಡಿ.ರೇವಣ್ಣ ಏನೇ ಪಿತೂರಿ ಮಾಡಿದ್ರೂ ನನ್ನ ಸೋಲಿಸಲು ಆಗಲ್ಲ ಬ್ಲಾಕ್‍ಮೇಲ್ ತಂತ್ರಕ್ಕೆ ನಾ ಹೆದರಲ್ಲ, ನೇರ ಸ್ಪರ್ಧೆಗೆ ಸಿದ್ಧರಾಗಿ: ಬಿ.ಪಿ. ಮಂಜೇಗೌಡ ಸವಾಲು
April 27, 2018ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಏನೇ ಪಿತೂರಿ ಮಾಡಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ಇಂತಹ ಬ್ಲಾಕ್‍ಮೇಲ್ ತಂತ್ರಕ್ಕೆ ನಾನು ಹೆದರುವುದಿಲ್ಲ, ನೇರ ಸ್ಪರ್ಧೆಗೆ ಸಿದ್ಧರಾಗಿ ಎಂದು ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇ ಗೌಡ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಆರ್‍ಟಿಓ ಇಲಾಖೆಯಿಂದ 700 ಕೋಟಿ ರೂ. ಆಸ್ತಿ ಮಾಡಿದ್ದಾರೆ ಎಂದು ರೇವಣ್ಣ ಅವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ. ನನ್ನ ಮೇಲೆ ಸುಳ್ಳು ಹೇಳುವ ಇವರ ಆಸ್ತಿ ಕಾಣುತ್ತಿಲ್ಲವೇ?…